SBI Amrit Kalash FD : ಜೂನ್ 30 ರಂದು ಕೊನೆಗೊಳಲ್ಲಿದೆ ಈ ವಿಶೇಷ ಎಫ್‌ಡಿ ಯೋಜನೆ

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಅಮೃತ್ ಕಲಾಶ್ ವಿಶೇಷ ಎಫ್‌ಡಿ (SBI Amrit Kalash FD) ಯೋಜನೆಯಡಿ ಸಾಮಾನ್ಯ ಹೂಡಿಕೆದಾರರು ಮತ್ತು ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿದೆ. ಅಮೃತ್ ಕಲಶ ಯೋಜನೆಯಡಿ SBI ಗ್ರಾಹಕರು 400 ದಿನಗಳ ನಿಶ್ಚಿತ ಠೇವಣಿ ಮಾಡಬಹುದು. ಯೋಜನೆಯ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಬ್ಯಾಂಕ್ ಪ್ರಸ್ತುತ 7.6 ಶೇಕಡಾ ಬಡ್ಡಿದರವನ್ನು ಪಡೆಯಬಹುದು. ಸಾಮಾನ್ಯ ಗ್ರಾಹಕರಿಗೆ ಈ ಯೋಜನೆಯಡಿಯಲ್ಲಿ ಶೇಕಡಾ 7.1 ರ ಬಡ್ಡಿದರವನ್ನು ಪಡೆಯಬಹುದಾಗಿದೆ. ಇದು ಎಲ್ಲಾ ಅವಧಿಗಳಲ್ಲಿ ಹೆಚ್ಚಿನ ಬಡ್ಡಿ ದರವಾಗಿದೆ. ಆದರೆ, ಈ ಯೋಜನೆಯು ಜೂನ್ 30ವರೆಗೆ ಮಾತ್ರ ಮಾನ್ಯವಾಗಿರುತ್ತದೆ.

ಎಸ್‌ಬಿಐಯ ಅಮೃತ್‌ ಕಲಶ ಯೋಜನೆಯಡಿ 400 ದಿನಗಳು ನಿರ್ದಿಷ್ಟ ಅವಧಿಯಡಿ ಶೇ. 7.10ರಷ್ಟು ಬಡ್ಡಿ ದರದಲ್ಲಿ ನೀಡಲಾಗುತ್ತದೆ. ಈ ಯೋಜನೆಯಡಿ ಹಿರಿಯ ನಾಗರಿಕರು ಶೇ. 7.60ರಷ್ಟು ಬಡ್ಡಿ ದರಕ್ಕೆ ಅರ್ಹರಾಗಿರುತ್ತಾರೆ. ಈ ಯೋಜನೆಯು ಜೂನ್‌ 30, 2023 ರವರೆಗೆ ಮಾನ್ಯವಾಗಿರುತ್ತದೆ” ಎಂದು ಎಸ್‌ಬಿಐ ವೆಬ್‌ಸೈಟ್ ಹೇಳುತ್ತದೆ

ಎಸ್‌ಬಿಐ ಈ ಹಿಂದೆ ಅಮೃತ್ ಕಲಶದ ಮಾನ್ಯತೆಯನ್ನು ವಿಸ್ತರಿಸಿತ್ತು. ಈ ಯೋಜನೆಯ ಸಿಂಧುತ್ವವನ್ನು ಇನ್ನಷ್ಟು ಹೆಚ್ಚಿಸಲು ಬ್ಯಾಂಕ್ ನಿರ್ಧರಿಸುವವರೆಗೆ, SBI ನಲ್ಲಿ 400 ದಿನಗಳ ಎಫ್‌ಡಿ ಯೋಜನೆಯಡಿ ಹೂಡಿಕೆ ಮಾಡಲು ಸಿದ್ಧರಿರುವ ಗ್ರಾಹಕರು 30 ಜೂನ್ 2023 ರೊಳಗೆ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು.

ಇದನ್ನೂ ಓದಿ : Update Your Aadhar Free : ಆಧಾರ್ ಕಾರ್ಡ್ ಅಪ್ಡೇಟ್ ಜೂನ್ 14ರ ವರೆಗೆ ಉಚಿತ

ಇತರ ಟೆನರ್‌ಗಳಿಗೆ ಎಸ್‌ಬಿಐ ಸ್ಥಿರ ಠೇವಣಿ ಬಡ್ಡಿ ದರಗಳು:

  • 7 ದಿನಗಳಿಂದ 45 ದಿನಗಳ ಎಫ್‌ಡಿ: ಬ್ಯಾಂಕ್ ಸಾಮಾನ್ಯ ಜನರಿಗೆ ಶೇ 3 ಮತ್ತು ಹಿರಿಯ ನಾಗರಿಕರಿಗೆ ಶೇ 3.50 ಬಡ್ಡಿಯನ್ನು ನೀಡುತ್ತಿದೆ.
  • 46 ದಿನಗಳಿಂದ 179 ದಿನಗಳವರೆಗೆ ಎಫ್‌ಡಿ: ಬ್ಯಾಂಕ್ ಸಾಮಾನ್ಯ ಜನರಿಗೆ ಶೇಕಡಾ 4.5 ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 5 ರಷ್ಟು ಬಡ್ಡಿಯನ್ನು ನೀಡುತ್ತಿದೆ.
  • 180 ದಿನಗಳಿಂದ 210 ದಿನಗಳ ಎಫ್‌ಡಿ: ಬ್ಯಾಂಕ್ ಸಾಮಾನ್ಯ ಜನರಿಗೆ ಶೇ 5.25 ಮತ್ತು ಹಿರಿಯ ನಾಗರಿಕರಿಗೆ ಶೇ 5.75 ಬಡ್ಡಿಯನ್ನು ನೀಡುತ್ತಿದೆ.
  • 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಎಫ್‌ಡಿ: ಬ್ಯಾಂಕ್ ಸಾಮಾನ್ಯ ಜನರಿಗೆ ಶೇಕಡಾ 5.75 ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 6.25 ಬಡ್ಡಿಯನ್ನು ನೀಡುತ್ತಿದೆ.
  • 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಎಫ್‌ಡಿ: ಬ್ಯಾಂಕ್ ಸಾಮಾನ್ಯ ಜನರಿಗೆ ಶೇಕಡಾ 6.8 ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 7.30 ಬಡ್ಡಿಯನ್ನು ನೀಡುತ್ತಿದೆ.
  • 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಎಫ್‌ಡಿ: ಬ್ಯಾಂಕ್ ಸಾಮಾನ್ಯ ಜನರಿಗೆ ಶೇ 7 ಮತ್ತು ಹಿರಿಯ ನಾಗರಿಕರಿಗೆ ಶೇ 7.50 ಬಡ್ಡಿಯನ್ನು ನೀಡುತ್ತಿದೆ.
  • 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ FD: ಬ್ಯಾಂಕ್ ಸಾಮಾನ್ಯ ಜನರಿಗೆ 6.5 ಶೇಕಡಾ ಮತ್ತು ಹಿರಿಯ ನಾಗರಿಕರಿಗೆ 7 ಶೇಕಡಾ ಬಡ್ಡಿಯನ್ನು ನೀಡುತ್ತಿದೆ.
  • 5 ವರ್ಷ ಮತ್ತು 10 ವರ್ಷಗಳ ಎಫ್‌ಡಿ: ಬ್ಯಾಂಕ್ ಸಾಮಾನ್ಯ ಜನರಿಗೆ ಶೇ 6.5 ಮತ್ತು ಹಿರಿಯ ನಾಗರಿಕರಿಗೆ ಶೇ 7.5 ಬಡ್ಡಿಯನ್ನು ನೀಡುತ್ತಿದೆ.

SBI Amrit Kalash FD : This special FD scheme ends on June 30

Comments are closed.