ಮೊಬೈಲ್‌ಗಳ ಮೂಲಕ ಸ್ಟಾಕ್ ವಹಿವಾಟಿನ ಬೆಳವಣಿಗೆಯ ಪ್ರವೃತ್ತಿಯ ನಡುವೆ, ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ (The Securities and Exchange Board of India- SEBI )ಬುಧವಾರ Saa₹thi ಎಂಬ ಮೊಬೈಲ್ ಅಪ್ಲಿಕೇಶನ್ಅನ್ನು ಬಿಡುಗಡೆಗೊಳಿಸಿದೆ. ಹೂಡಿಕೆದಾರರಲ್ಲಿ ಸುರಕ್ಷತಾ ಮಾರುಕಟ್ಟೆಯ ಮೂಲ ಪರಿಕಲ್ಪನೆಗಳ ಬಗ್ಗೆ ಅರಿವು ಮೂಡಿಸಲು ಮೊಬೈಲ್ ಅಪ್ಲಿಕೇಶನ್ (SEBI App Saa₹thi) ಪ್ರಾರಂಭಿಸಲಾಗಿದೆ
ಸೆಕ್ಯುರಿಟಿ ಮಾರುಕಟ್ಟೆಯಲ್ಲಿನ ಹೂಡಿಕೆಯ ಕುರಿತು ಅರಿವು ಮೂಡಿಸಲು ಈ ಮೊಬೈಲ್ ಅಪ್ಲಿಕೇಶನ್ ಆರಂಭಿಸಿದ್ದೇವೆ. ಜನರಲ್ಲಿ ಸಂಪೂರ್ಣ ಅರಿವು ಮೂಡಿಸುವುದು ಈ ಮೊಬೈಲ್ ಅಪ್ಲಿಕೇಶನ್ ಉದ್ದೇಸ ಎಂದು ಸೆಬಿ ಚೇರ್‌ಮೆನ್ ಅಜಯ್ ತ್ಯಾಗಿ ತಿಳಿಸಿದ್ದಾರೆ. ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ವೈಯಕ್ತಿಕ ಹೂಡಿಕೆದಾರರ ಇತ್ತೀಚಿನ ಕೆಲವು ಆಗುಹೋಗುಗಳ ಕುರಿತು ಈ ಅಪ್ಲಿಕೇಶನ್ ಅಗತ್ಯ ಮಾಹಿತಿ ಒದಗಿಸುತ್ತದೆ. ಅದಕ್ಕಿಂತ ಹೆಚ್ಚು ಮುಖ್ಯವಾಗಿ ಮೊಬೈಲ್ ಫೋನ್ ಆಧಾರಿತ ವ್ಯಾಪಾರದ ಹೆಚ್ಚಿನ ಪ್ರಮಾಣದಲ್ಲಿ, ಈ ಅಪ್ಲಿಕೇಶನ್ ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ಮಾಹಿತಿ ಪಡೆಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಸೆಕ್ಯುರಿಟೀಸ್ ಮಾರುಕಟ್ಟೆಯ ಮೂಲ ಪರಿಕಲ್ಪನೆಗಳು, KYC ಪ್ರಕ್ರಿಯೆ, ಟ್ರೇಡಿಂಗ್ ಮತ್ತು ಸೆಟಲ್‌ಮೆಂಟ್, ಮ್ಯೂಚುಯಲ್ ಫಂಡ್‌ಗಳು, ಇತ್ತೀಚಿನ ಮಾರುಕಟ್ಟೆ ಬೆಳವಣಿಗೆಗಳು, ಹೂಡಿಕೆದಾರರ ಕುಂದುಕೊರತೆಗಳ ಪರಿಹಾರ ಕಾರ್ಯವಿಧಾನ, ಇತ್ಯಾದಿ ವಿಷಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಮೊಬೈಲ್ ಅಪ್ಲಿಕೇಶನ್ ಒದಗಿಸುತ್ತದೆ.
Saa₹thi ಮೊಬೈಲ್ ಅಪ್ಲಿಕೇಶನ್ ಸದ್ಯ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದೆ. ಅಪ್ಲಿಕೇಶನ್‌ನ ಆಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿಗಳನ್ನು ಕ್ರಮವಾಗಿ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು.
RBI: ಕೆವೈಸಿ ಸಲ್ಲಿಕೆ ಗಡುವು ಮಾರ್ಚ್ 31ರವರೆಗೆ ವಿಸ್ತರಣೆ
ಬ್ಯಾಂಕ್ ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ) ಹಾಗೂ ಕಿರು ಹಣಕಾಸು ಸಂಸ್ಥೆಗಳ ಗ್ರಾಹಕರು ಇದೇ ಡಿ.31ರೊಳಗೆ ಪೂರೈಸಬೇಕಿದ್ದ ‘ನಿಮ್ಮ ಗ್ರಾಹಕರನ್ನು ಅರಿಯರಿ” (ಕೆವೈಸಿ) ಪ್ರಕ್ರಿಯೆಯ ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮೂರು ತಿಂಗಳು ವಿಸ್ತರಿಸಿದೆ. ಕೊರೊನಾದ ಓಮಿಕ್ರಾನ್ ಪ್ರಭೇದವು ಭಾರತದಲ್ಲೂ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ಗಡುವನ್ನು 2022ರ ಮಾರ್ಚ್ 31ರವರೆಗೆ ಹಿಗ್ಗಿಸಲಾಘಿದೆ ಎಂದು ಆರ್‌ಬಿಐ ಸುತ್ತೋಲೆಯಲ್ಲಿ ತಿಳಿಸಿದೆ.
ಬೇನಾಮಿ ಖಾತೆಗಳ ಮೂಲಕ ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆಯಂತಹ ಅಕ್ರಮಗಳಿಗೆ ಕಡಿವಾಣ ಹಾಕುವುದು ಇದರ ಉದ್ದೇಶದಿಂದ
ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರ ಕುರಿತ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲದ ಕಾರಣ ಆರ್‌ಬಿಐ ಈ ಹಿಂದೆಯೇ ಇಂಥ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚಿಸಿತ್ತು. ಆದರೆ, ಕೊರೊನಾ ಎರಡನೇ ಅಲೆಯ ಕಾರಣ ಇದನ್ನು ಮುಂದೂಡಿತ್ತು. ನಂತರದಲ್ಲಿ ಡಿಸೆಂಬರ್ 31ರೊಳಗೆ ಕೆವೈಸಿ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ಬ್ಯಾಂಕ್‌ಗಳಿಗೆ ನೀಡಿತ್ತು.
ಇದನ್ನೂ ಓದಿ: Earn money from Apps: ಮನೆಯಿಂದಲೇ ಹಣ ಗಳಿಸಲು ಬೆಸ್ಟ್ ಆ್ಯಪ್‌ಗಳಿವು
ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ
(SEBI App Saa₹thi for investor education)