Covid-19 cases : ಐದು ದಿನಗಳ ಬಳಿಕ ದೇಶದಲ್ಲಿ ದೈನಂದಿನ ಕೋವಿಡ್​ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ

Covid-19 cases : ಭಾರತದಲ್ಲಿ ಮೂರು ಲಕ್ಷ ಗಡಿ ದಾಟಿದ್ದ ಕೋವಿಡ್​ ದೈನಂದಿನ ಪ್ರಕರಣಗಳಲ್ಲಿ ಕೊಂಚ ನಿಯಂತ್ರಣ ಸಾಧಿಸಿರುವಂತೆ ಕಾಣುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,55,874 ಹೊಸ ಕೋವಿಡ್​ ಪ್ರಕರಣಗಳು ಧೃಡಪಟ್ಟಿವೆ. ಈ ಮೂಲಕ ದೇಶದಲ್ಲಿ ಪಾಸಿಟಿವಿಟಿ ದರವು 15.52 ಪ್ರತಿಶತಕ್ಕೆ ಕುಸಿದಿದೆ. ಜನವರಿ 20ರಿಂದ ದೇಶದಲ್ಲಿ ದೈನಂದಿನ ಪ್ರಕರಣಗಳು ಮೂರು ಲಕ್ಷದ ಗಡಿ ದಾಟಿದ್ದವು. ಜನವರಿ 20ರಂದು ದೇಶದಲ್ಲಿ 3,17,532 ದೈನಂದಿನ ಕೋವಿಡ್​​ ಪ್ರಕರಣಗಳು ವರದಿಯಾಗಿದ್ದವು. ನಿನ್ನೆ ದೇಶದಲ್ಲಿ 3,06,064 ಹೊಸ ಕೋವಿಡ್​ ಪ್ರಕರಣಗಳು ಧೃಡಪಟ್ಟಿದ್ದವು.


ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 614 ಮಂದಿ ಕೋವಿಡ್​ ಸೋಂಕಿನಿಂದ ಮೃತಪಟ್ಟಿದ್ದಾರೆ. ಕಳೆದೊಂದು ದಿನದಲ್ಲಿ ದೇಶದಲ್ಲಿ 2,67,753 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ರಿಕವರಿ ಪ್ರಮಾಣವು 93.15 ಪ್ರತಿಶತಕ್ಕೆ ತಲುಪಿದೆ. ದೇಶದಲ್ಲಿ ಈವರೆಗೆ 3,70,71,898 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.


ದೇಶದಲ್ಲಿ ಪ್ರಸ್ತುತ 22,36,842 ಸಕ್ರಿಯ ಕೋವಿಡ್​ ಪ್ರಕರಣಗಳು ಇವೆ. ದೇಶಾದ್ಯಂತ ಈವರೆಗೆ 162.92 ಕೋಟಿ ಡೋಸ್​ ಕೋವಿಡ್​ ಲಸಿಕೆಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.


ದೇಶದಲ್ಲಿ ಒಟ್ಟು 71.88 ಕೋಟಿ ಕೊರೊನಾ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಕಳೆದ 24 ಗಂಟೆಗಳಲ್ಲಿ 16,49,108 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಐಸಿಎಂಆರ್​ ಮಾಹಿತಿ ನೀಡಿದೆ.

India reports less than 3 lakh daily Covid-19 cases after 5 days, positivity rate at 15.52%

ಇದನ್ನು ಓದಿ : Rohit Sharma Slim : ವೆಸ್ಟ್ ಇಂಡೀಸ್ ಸರಣಿಗೆ ಮುನ್ನ ಸ್ಲಿಮ್‌ ಆಂಡ್‌ ಫಿಟ್‌ ಆದ ರೋಹಿತ್ ಶರ್ಮಾ

ಇದನ್ನೂ ಓದಿ :Vamika’s pics : ವೈರಲ್​ ಆಗುತ್ತಿರುವ ವಮಿಕಾಳ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ ವಿರುಷ್ಕಾ ದಂಪತಿ

Comments are closed.