Shark Tank India Anoushka Jolly: ಇದು ಒಳ್ಳೆ ಸಮಾಚಾರ: 13 ವರ್ಷದ ವಿದ್ಯಾರ್ಥಿನಿಯ ಸ್ಟಾರ್ಟ್‌ಅಪ್ ಐಡಿಯಾಕ್ಕೆ ಸಿಕ್ತು 50 ಲಕ್ಷ ಹೂಡಿಕೆ

Anoushka Jolly: ಐದು ವರ್ಷಗಳ ಹಿಂದೆ ಶಾಲೆಯ ಕಾರ್ಯಕ್ರಮವೊಂದರಲ್ಲಿ ತನ್ನ ಸಹಪಾಠಿಯನ್ನು ಅಪಹಾಸ್ಯ ಮಾಡಿದ ಘಟನೆಯನ್ನೇ ಸವಾಲಾಗಿ ತೆಗೆದುಕೊಂಡ ವಿದ್ಯಾರ್ಥಿನಿಗೆ ಇಂದು ಅದ್ಭುತ ಯಶಸ್ಸು ದೊರೆತಿದೆ. ಭಾರತದಲ್ಲಿ ಇತ್ತೀಚಿಗೆ ಪ್ರಸಾರವಾಗಿ ಜನಪ್ರಿಯತೆ ಗಳಿಸಿದ ಶಾರ್ಕ್ ಟ್ಯಾಂಕ್ ಇಂಡಿಯಾ (Shark Tank India) ಶೋನಲ್ಲಿ ಭಾಗವಹಿಸಿದ ಅನೌಶ್ಕಾ  ಜೋಲಿ ಎಂಬ ಗುರುಗ್ರಾಮದ ಶಾಲೆಯೊಂದರ ವಿದ್ಯಾರ್ಥಿನಿಯ ಸ್ಟಾರ್ಟ್ಅಪ್ ಒಂದರ ಐಡಿಯಾಕ್ಕೆ (Shark Tank India Anoushka Jolly) ಬರೋಬ್ಬರಿ 50 ಲಕ್ಷದಷ್ಟು ಹಣ ಹೂಡಿಕೆ ಮಾಡಲು ಸಂಸ್ಥೆಯೊಂದು ಮುಂದಾಗಿದೆ. ಅನೌಶ್ಕಾ ಜೋಲಿ ಎಂಬ ವಿದ್ಯಾರ್ಥಿನಿಯ ಎಂಬ ಕವಚ್ ಎಂಬ ಸ್ಟಾರ್ಟ್‌ಅಪ್‌ಗೆ (Startup Funding) ಉದ್ಯಮಿಗಳಾದ ಅನುಪಮ್ ಮಿತ್ತಲ್ ಮತ್ತು ಅಮನ್ ಗುಪ್ತಾ ಒಗ್ಗೂಡಿ ಐವತ್ತು ಲಕ್ಷಗಳ ಹೂಡಿಕೆ ಮಾಡಿದ್ದಾರೆ. ಗುರುಗ್ರಾಮದ ಪಾಥ್‌ವೇಸ್ ಸ್ಕೂಲ್  ವಿದ್ಯಾರ್ಥಿನಿಯಾದ ಅನೌಶ್ಕಾ ಜೋಲಿ ವಿದ್ಯಾರ್ಥಿಗಳು ಎದುರಿಸುವ ಬೆದರಿಕೆಗಳ ವಿರುದ್ಧ ಪ್ರಬಲ ನೆಟ್‌ವರ್ಕ್ ರೂಪಿಸಲು ಬಯಸಿದ್ದಾರೆ.

ಶಿಕ್ಷಣ ಸಂಸ್ಥೆಗಳು, ಸಾಮಾಜಿಕ ಸಂಸ್ಥೆಗಳು ಮತ್ತು ತಜ್ಞರ ಸಹಾಯದಿಂದ  ವಿದ್ಯಾರ್ಥಿಗಳಿಗೆ ಉಂಟಾಗುವ ಬೆದರಿಸುವಿಕೆಗಳನ್ನು ತಡೆಯಲು ಅನೌಶ್ಕಾ  ಜೋಲಿ ಕವಚ್ ಎಂಬ ನವೋದ್ಯಮವನ್ನು ರೂಪಿಸಿದ್ದಾರೆ.  ‘Anti Bullying Squad (ABS)’ ಎಂದು ಕರೆಯಲ್ಪಡುವ ಈ ಯೋಜನೆಗೆ ಅವರು ನೀಡಿರುವ ಹೆಸರು ಕವಚ್. 100 ಕ್ಕೂ ಹೆಚ್ಚು ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳ 2,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಧನಾತ್ಮಕವಾಗಿ ಪ್ರಭಾವಿಸಿದೆ ಎಂದು ಜಾಲಿ ಅವರು ಡಿಜಿಟಲ್ ಪ್ಲಾಟ್‌ಫಾರ್ಮ್ ಕುರಿತು ಮಾತನಾಡುತ್ತಾ ಮೂರು ವರ್ಷಗಳ ಹಿಂದೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಈಗ ಶಾರ್ಕ್ ಟ್ಯಾಂಕ್ ಇಂಡಿಯಾ ಕಾರ್ಯಕ್ರಮದ ಮೂಲಕ ಅವರ ಸ್ಟಾರ್ಟ್‌ಅಪ್‌ಗೆ ಫಂಡಿಂಗ್ ಆಗುತ್ತಿರುವುದು ಅವರ ಸಂತಸವನ್ನು ಇನ್ನಷ್ಟು ಹೆಚ್ಚಿಸಿದೆ.

ಐದು ವರ್ಷಗಳ ಹಿಂದೆ ಶಾಲೆಯ ಕಾರ್ಯಕ್ರಮವೊಂದರಲ್ಲಿ ಸಹ ವಿದ್ಯಾರ್ಥಿಯನ್ನು ಅಪಹಾಸ್ಯ ಮಾಡಿದ ದೃಶ್ಯವು ಅನೌಷ್ಕಾ ಜಾಲಿ ಅವರ ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಆಗ 13 ವರ್ಷದವರಾಗಿದ್ದ ಅನೌಷ್ಕಾ ಜೋಲಿ ಅವರು ತಾವು ನೋಡಿದ ಈ ಘಟನೆಯಿಂದ ಪ್ರಭಾವಿತರಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಎದುರಿಸುವ ಅಪಹಾಸ್ಯ, ಬೆದರಿಕೆಗಳನ್ನು ತಡೆಯಲು ನವೋದ್ಯಮ ಆರಂಭಿಸಿದರು. ಅದು ಇಂದು ಯಶಸ್ಸಿನತ್ತ ದಾಪುಗಾಲು ಹಾಕುತ್ತಿದೆ.  ಅವರ ನವೋದ್ಯಮವು  ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅನಾಮಧೇಯವಾಗಿ ಬೆದರಿಸುವ ಘಟನೆಗಳನ್ನು ವರದಿ ಮಾಡಲು ಅನುಮತಿಸುತ್ತದೆ. ಶಾಲೆಗಳು ಮತ್ತು ಸಲಹೆಗಾರರಿಗೆ ಚಾತುರ್ಯದಿಂದ ಮಧ್ಯಪ್ರವೇಶಿಸಿ ಕ್ರಮ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ.

ಇದನ್ನೂ ಓದಿ: Good News: ಸಾಯುತ್ತಿದ್ದ 70 ವರ್ಷದ ಆಲದಮರಕ್ಕೆ ಮರುಜೀವ! ಪರಿಸರ ಪ್ರಿಯರಿಂದ ಆಲದಮರದ ಸ್ಥಳಾಂತರ

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1

(Shark Tank India Anoushka Jolly 13 year girl startup has 50 lakh funding for app)

Comments are closed.