ಭಾರತದ ಸರಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಗ್ರಾಹಕರಿಗೆ ಗೃಹ ಸಾಲ (SBI Home loan) ಹಾಗೂ ಕಾರು ಸಾಲದ (SBI Car Loan) ಮೇಲೆ ಬಾರೀ ರಿಯಾಯಿತಿ ಘೋಷಣೆ ಮಾಡಿದೆ.
ಮನೆ ಕಟ್ಟೋದು, ಕಾರು ಕೊಳ್ಳುವುದು ಸಾಮಾನ್ಯವಾಗಿ ಪ್ರತಿಯೊಬ್ಬರ ಕನಸು. ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ಸಾಲದ ಬಡ್ಡಿದರಗಳ ಮೇಲೆ ವಿಶೇಷ ಆಫರ್ ಘೋಷಣೆ ಮಾಡುತ್ತಿವೆ. ಇದೀಗ ಆ ಸಾಲಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭರ್ಜರಿ ಆಫರ್ ಘೋಷಣೆ ಮಾಡಿದೆ.
ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಮನೆ ಖರೀದಿ (House Purchase) , ಮನೆ ನಿರ್ಮಾಣ, ಕಾರು ಖರೀದಿ ಜೊತೆಗೆ ವೈಯಕ್ತಿಕ ಸಾಲಗಳನ್ನು (Personal Loans) ಪಡೆದುಕೊಳ್ಳುವುದು ಮಾಮೂಲು. ಈ ಹಿನ್ನೆಲೆಯಲ್ಲಿ ಪ್ರತೀ ಬ್ಯಾಂಕುಗಳು ಸುಲಭ ಸಾಲದ ಆಫರ್ ನೀಡುತ್ತಿವೆ. ಇದೀಗ ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಅದ್ಬುತ ಆಫರ್ (SBI Loan Offers) ಬಿಡುಗಡೆ ಮಾಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ಗೃಹ ಸಾಲ, ಕಾರು ಸಾಲಗಳಲ್ಲಿ ರಿಯಾಯಿತಿ ಯೋಜನೆಯ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು. SBI ಗೃಹ ಮತ್ತು ಕಾರು ಸಾಲಗಳ ಮೇಲಿನ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ಘೋಷಣೆ ಮಾಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ ಲೋನ್‌ಗಳ ಮೇಲೆ ಶೂನ್ಯ ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತದೆ. ಈ ಕೊಡುಗೆಗಳ ವಿವರಗಳನ್ನು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ತಿಳಿಸಿದೆ. ಇನ್ನು ಈ ಆಫರ್ ಅಡಿಯಲ್ಲಿ ಕಾರುಗಳ ಮೇಲೆ ಸಾಲವನ್ನು ಪಡೆದುಕೊಂಡ್ರೆ ಸಾಲದ ಮೇಲೆ ಸಂಸ್ಕರಣಾ ಶುಲ್ಕವನ್ನು ಮುನ್ನ ಮಾಡಲಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಕೊಡುಗೆಯು ಜನವರಿ 31, 2024 ರವರೆಗೆ ಲಭ್ಯವಿರುತ್ತದೆ. ಶೂನ್ಯ ಸಂಸ್ಕರಣಾ ಶುಲ್ಕಗಳ ಜೊತೆಗೆ, ಸ್ವಯಂ ಸಾಲಗಳು ಕಡಿಮೆ ಬಡ್ಡಿ ದರಗಳು, ತ್ವರಿತ ಅನುಮೋದನೆ ಮತ್ತು 100 ಪ್ರತಿಶತದವರೆಗೆ ಹಣಕಾಸು ಒದಗಿಸುತ್ತವೆ. ಅಲ್ಲದೇ ಬ್ಯಾಂಕ್ ವಿವಿಧ ಬ್ರ್ಯಾಂಡ್‌ಗಳ ಮೇಲೆ ನಿರ್ದಿಷ್ಟ ಕೊಡುಗೆಗಳನ್ನು ವಿಸ್ತರಿಸುತ್ತದೆ. ಕಾರು ಸಾಲಗಳ ಮೇಲಿನ SBI ಬಡ್ಡಿ ದರಗಳು 8.8 ಪ್ರತಿಶತದಿಂದ 9.7 ಪ್ರತಿಶತದವರೆಗೆ ಇರುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲ (SBI Home Loans):
ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹದ ಸಾಲದ ಮೇಲೆ ವಿಶೇಷ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಅದ್ರಲ್ಲೂ ಗರಿಷ್ಠ 65 ಬೇಸಿಸ್ ಪಾಯಿಂಟ್‌ಗಳ (bps) ರಿಯಾಯಿತಿಯನ್ನು ನೀಡುತ್ತದೆ. ಇದು ಡಿಸೆಂಬರ್ 31, 2023 ರವರೆಗೆ ಅನ್ವಯಿಸುತ್ತದೆ. ಆದರೆ ಈ ಕೊಡುಗೆಗಳನ್ನು ಸಾಲಗಾರನ CIBIL ಸ್ಕೋರ್ ಮೇಲೆ ಅನ್ವಯವಾಗಲಿದೆ.

ಹೆಚ್ಚಿನ ಸಿಬಿಲ್ ಸ್ಕೋರ್ (Cibil Score) ಹೊಂದಿರುವ ಗ್ರಾಹಕರು ಹೆಚ್ಚಿನ ಕೊಡುಗೆಗಳನ್ನು ಪಡೆದುಕೊಳ್ಳಲಿದ್ದಾರೆ. ಇನ್ನು700 ಮತ್ತು ಅದಕ್ಕಿಂತ ಹೆಚ್ಚಿನ CIBIL ಸ್ಕೋರ್‌ನೊಂದಿಗೆ ಹೋಮ್ ಲೋನ್ ಆಯ್ಕೆಗಳನ್ನು ಅನ್ವೇಷಿಸುವವರು ಹೆಚ್ಚುವರಿ 20 ಬೇಸಿಸ್ ಪಾಯಿಂಟ್‌ಗಳ (bps) ರಿಯಾಯಿತಿಯನ್ನು ಪಡೆಯ ಬಹುದು. 750 ಅಥವಾ ಅದಕ್ಕಿಂತ ಹೆಚ್ಚಿನ CIBIL ಸ್ಕೋರ್ ಹೊಂದಿರುವ ಸಾಲಗಾರರು ಗರಿಷ್ಠ ಲಾಭ, ರಿಯಾಲ್ಟಿ ಸಾಲಗಳನ್ನು ಆರಿಸಿಕೊಂಡರೆ 5 bps ಪಾಯಿಂಟ್‌ಗಳ ರಿಯಾಯಿತಿಯನ್ನು ಪಡೆಯುತ್ತಾರೆ.
State Bank of India announced bumper offer on SBI home loan and SBI car loans