ಗೂಗಲ್ ಪಿಕ್ಸೆಲ್ 8, ಗೂಗಲ್ ಪಿಕ್ಸೆಲ್ 8 ಪ್ರೊ ಇಂದು ಬಿಡುಗಡೆ : ಬೆಲೆ ಎಷ್ಟು ಗೊತ್ತಾ ?

Google Pixel 8 Series Launch LIVE : ಗೂಗಲ್‌ನ ಬಹು ನಿರೀಕ್ಷಿತ ಗೂಗಲ್ ಪಿಕ್ಸೆಲ್ 8 ( Google Pixel 8) ಮತ್ತು ಗೂಗಲ್ ಪಿಕ್ಸೆಲ್ 8 ಪ್ರೊ (Google Pixel 8 pro) ಇಂದು ಭಾರತದಲ್ಲಿ ಬಿಡುಗಡೆ ಆಗಲಿದ್ದು, ಕಾರ್ಯಕ್ರಮವನ್ನು Google website and Google Youtubeನಲ್ಲಿ ನೇರಪ್ರಸಾರದಲ್ಲಿ ವೀಕ್ಷಣೆ ಮಾಡಬಹುದಾಗಿದೆ.

Google Pixel 8 Series Launch LIVE : ಗೂಗಲ್ (Google Smart Phone) ಈಗಾಗಲೇ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದುಘೊಒಗಲೆ, ಈಗಾಗಲೇ ಗೂಗಲ್‌ ಫಿಕ್ಸೆಲ್‌ ಮೊಬೈಲ್‌ (Google Pixel Mobile)  ಗ್ರಾಹಕರಿಗೆ ಪರಿಚಯಿಸಿದೆ. ಇಂದು ಗೂಗಲ್‌ನ ಬಹು ನಿರೀಕ್ಷಿತ ಗೂಗಲ್ ಪಿಕ್ಸೆಲ್ 8 (Google Pixel 8) ಮತ್ತು ಗೂಗಲ್ ಪಿಕ್ಸೆಲ್ 8 ಪ್ರೊ (Google Pixel 8 Pro ) ಇಂದು ಭಾರತದಲ್ಲಿ ಬಿಡುಗಡೆ ಆಗಲಿದ್ದು, ಕಾರ್ಯಕ್ರಮವನ್ನು ಗೂಗಲ್‌ ವೆಬ್‌ಸೈಟ್‌ ( Google website ) ಮತ್ತು ಗೂಗಲ್‌ ಯೂಟ್ಯೂಬ್‌ ಚಾನೆಲ್‌ ನಲ್ಲಿ ( Google Youtube  ನೇರಪ್ರಸಾರ ಮಾಡಲಿದೆ.

Google Pixel 8 and pixel 8 pro Series Launch today LIVE in Google Website and Google Youtube Channel
Image Credit to Original Source

ಗೂಗಲ್ ಪಿಕ್ಸೆಲ್ 8 (Google Pixel 8 ) ಮತ್ತು ಗೂಗಲ್ ಪಿಕ್ಸೆಲ್ 8 ಪ್ರೊ (Google Pixel 8 Pro )  ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಇಂದು ಸಂಜೆ 7:30ಕ್ಕೆ ಬಿಡುಗಡೆ ಸಮಾರಂಭವು ನಡೆಯಲಿದ್ದು, ಗೂಗಲ್‌ನ ಅಧಿಕೃತ ವೆಬ್‌ಸೈಟ್‌ ಹಾಗೂ ಯೂಟ್ಯೂಬ್‌ ಮೂಲಕ ನೇರಪ್ರಸಾರವನ್ನು ಗ್ರಾಹಕರು ವೀಕ್ಷಣೆ ಮಾಡಬಹುದಾಗಿದೆ.

Google Pixel 8 and pixel 8 pro Series Launch today LIVE in Google Website and Google Youtube Channel
Image Credit to Original Source

ಈಗಾಗಲೇ ಗೂಗಲ್‌ ಗೂಗಲ್ ಪಿಕ್ಸೆಲ್ 8 ಮತ್ತು ಗೂಗಲ್ ಪಿಕ್ಸೆಲ್ 8 ಪ್ರೊ ಲಾಂಚಿಂಗ್‌ ಕುರಿತ ಮಾಹಿತಿಯನ್ನು ಹಂಚಿಕೊಂಡಿದೆ. Pixel 8 Pro Pixel 7 Pro ನಂತೆಯೇ 6.7-ಇಂಚಿನ ಡಿಸ್ಪ್ಲೇ ಒಳಗೊಂಡಿದೆ. ಆದ್ರೆ ಫಿಕ್ಸೆಲ್‌ 8 ಡಿಸ್ಪ್ಲೈ ಪ್ರೋಗಿಂತ ಸ್ವಲ್ಪ ಕಡಿಮೆ ಇದ್ದು, 6.17 ಇಂಚನ್ನು ಒಳಗೊಂಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಕೇವಲ ರೂ.2999ಕ್ಕೆ ಐಪೋನ್‌ ಖರೀದಿಸಿ : ಐಪೋನ್‌ 15 ಲಾಂಚ್‌ ಬೆನ್ನಲ್ಲೇ ಐಪೋನ್‌ 11ರ ಮೇಲೆ ಬಾರೀ ಡಿಸ್ಕೌಂಟ್‌

Google Pixel 8 and pixel 8 pro Series Launch today LIVE in Google Website and Google Youtube Channel
Image Credit to Original Source

ಫಿಕ್ಸೆಲ್‌ 8 ಪ್ರೋ (Pixel 8 Pro 50MP ವೈಡ್ ಲೆನ್ಸ್, ಮ್ಯಾಕ್ರೋ ಫೋಕಸ್‌ನೊಂದಿಗೆ 48MP ಅಲ್ಟ್ರಾವೈಡ್ ಲೆನ್ಸ್ ಮತ್ತು 5x ಟೆಲಿಫೋಟೋ ಲೆನ್ಸ್‌ನೊಂದಿಗೆ 48MP ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಗೂಗಲ್‌ ಫಿಕ್ಸೆಲ್‌ (Pixel 8 Pro) ದೇಹದ ಉಷ್ಣತೆಯನ್ನು ಓದುವ ವೈಶಿಷ್ಟ್ಯವನ್ನು ಹೊಂದಿದೆ.

ಸ್ಟ್ಯಾಂಡರ್ಡ್ ಪಿಕ್ಸೆಲ್ 8 ಅದರ ಹಿಂಭಾಗದಲ್ಲಿ 50MP ವೈಡ್ ಕ್ಯಾಮೆರ, ಅಲ್ಲದೇ 12MP ಅಲ್ಟ್ರಾವೈಡ್ ಲೆನ್ಸ್ ಜೊತೆಗೆ ಮ್ಯಾಕ್ರೋ ಫೋಕಸ್ ಒಳಗೊಂಡಿರಲಿದೆ. ಜೊತೆಗೆ ಮುಂಭಾದಲ್ಲಿ ಸೆಲ್ಪೀ ಪ್ರಿಯರಿಗಾಗಿ 10.5MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ. ಈ ಹಿಂದೆ ಬಿಡುಗಡೆ ಆಗಿರುವ Pixel 7 ಮತ್ತು 7 Pro ನಲ್ಲಿ ಬಂದ 10.8MP ಸೆಲ್ಫಿ ಕ್ಯಾಮೆರಾಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.

ಇದನ್ನೂ ಓದಿ : 50MP ಕ್ಯಾಮೆರಾ, 256 GB Ram, ಅತ್ಯಾಧುನಿಕ ತಂತ್ರಜ್ಞಾನ: ಶೀಘ್ರದಲ್ಲೇ ಬಿಡುಗಡೆ ಆಗಲಿದೆ Google Pixel 8

Pixel 8 ಮತ್ತು 8 Pro HDR ತಂತ್ರಜ್ಞಾನವನ್ನು ಒಳಗೊಂಡಿದ್ದು, DSLR ರೀತಿಯಲ್ಲಿ ಪೋಟೋಗಳನ್ನು ಸೆರೆ ಹಿಡಿಯಲು ಸಹಕಾರಿಯಾಗಲಿದೆ. ಸದ್ಯಕ್ಕೆ ಸೋರಿಕೆ ಆಗಿರುವ ಮಾಹಿತಿಯ ಪ್ರಕಾರ ಗೂಗಲ್‌ ಹೊಸ ಮೊಬೈಲ್‌ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಗ್ರಾಹಕರ ಮನ ಗೆಲ್ಲುವುದು ಖಚಿತ ಎನ್ನಲಾಗುತ್ತಿದೆ.

Google Pixel 8 and pixel 8 pro Series Launch today LIVE in Google Website and Google Youtube Channel
Image Credit to Original Source

ಇಷ್ಟೇ ವೈಶಿಷ್ಟ್ಯತೆಗಳು ಮಾತ್ರವಲ್ಲದೇ ಮ್ಯಾಜಿಕ್ ಎಡಿಟರ್ ಮತ್ತು “ಬೆಸ್ಟ್ ಟೇಕ್” ಅನ್ನೋ ವೈಶಿಷ್ಠ್ಯತೆಯನ್ನು ಒಳಗೊಂಡಿದೆ. ಜೊತೆಗೆ ಪಿಕ್ಸೆಲ್ 8 ಲೈನ್‌ಅಪ್‌ಗೆ ಬರುವ AI-ಚಾಲಿತ ಫೋಟೋ ಎಡಿಟಿಂಗ್ ವೈಶಿಷ್ಟ್ಯಯನ್ನು ಹೊಂದಿದೆ. ಗೂಗಲ್ ತನ್ನ ಇತ್ತೀಚಿನ ಪಿಕ್ಸೆಲ್ ಶ್ರೇಣಿ ಏಳು ವರ್ಷಗಳ ಸಾಫ್ಟವೇರ್‌ಗೆ ಬೆಂಬಲ ನೀಡಲಿದೆ. ಪಿಕ್ಸೆಲ್ 8 ಪ್ರೊ ಖರೀದಿಯೊಂದಿಗೆ ಉಚಿತ ಪಿಕ್ಸೆಲ್ ವಾಚ್ 2 ಅನ್ನು ಸಹ ಒಳಗೊಂಡಿರಬಹುದು.

ಇದನ್ನೂ ಓದಿ : ಕೇವಲ 10,399 ರೂ. ಖರೀದಿಸಿ ಐಪೋನ್‌ 13 : ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಭರ್ಜರಿ ಆಫರ್‌

ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ Google Pixel 8, Google Pixel 8 Pro ಬೆಲೆ ಎಷ್ಟಿರಬಹುದು ಅನ್ನೋದನ್ನು ಇನ್ನೂ ನಿರ್ಧಾರ ಮಾಡಿಲ್ಲ. ಆದರೆ Google ನ ವರದಿಯ ಪ್ರಕಾರ, Google Pixel 8 ನ ಮೂಲ ಬೆಲೆ $ 699 (ಸುಮಾರು ರೂ 58,186) ಮತ್ತು Google Pixel 8 ನ ಆರಂಭಿಕ ಬೆಲೆ $ 999 ( ಸುಮಾರು 83,144 ರೂ) ಆಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.

Google Pixel 8 and pixel 8 pro Series Launch today LIVE in Google Website and Google Youtube Channel

Comments are closed.