ಗೃಹಲಕ್ಷ್ಮೀ ಯೋಜನೆಯ (Gruha Lakshmi Yojana) ಮೂಲಕ ಕರ್ನಾಟಕ ಸರಕಾರ ಮಹಿಳೆಯರಿಗೆ ಅನುಕೂಲ ಕಲ್ಪಿಸಿದೆ. ಆದ್ರೆ ಇದೀಗ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದ ಸರಕಾರ ಹೆಣ್ಣು ಹೆತ್ತ ಪೋಷಕರಿಗೆ ಅನುಕೂಲಕರ ಯೋಜನೆಯೊಂದನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಹೆಣ್ಣು ಮಕ್ಕಳ ಮದುವೆಗೆ 25 ಲಕ್ಷ ರೂಪಾಯಿಯನ್ನು ನೀಡುತ್ತಿದೆ.
ಕೇಂದ್ರದ ನರೇಂದ್ರ ಮೋದಿ ಸರಕಾರ, ಬೇಟಿ ಬಜಾಚೋ ಬೇಟಿ ಪಡಾವೋ ಘೋಷಣೆಯನ್ನು ಜಾರಿಗೆ ತರುತ್ತಿದೆ. ಇದರ ಭಾಗವಾಗಿ ಕೇಂದ್ರ ಸರಕಾರ ಸುಕನ್ಯಾ ಸಮೃದ್ದಿ ಯೋಜನೆ ( sukanya samriddhi yojana ) ಯನ್ನು ಜಾರಿಗೆ ತಂದಿದೆ. ಈ ಯೋಜನೆ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ವಿವಾಹದ ವೇಳೆಯಲ್ಲಿ ನೆರವು ನೀಡಲಿದೆ.

ಸುಕನ್ಯಾ ಸಮೃದ್ದಿ ಯೋಜನೆಯ ಮೂಲಕ ಕೇಂದ್ರ ಸರಕಾರವು ಹೆಣ್ಣು ಹೆತ್ತವರಿಗೆ ಆರ್ಥಿಕ ಹೊರೆಯನ್ನು ತಪ್ಪಿಸಲಿದೆ. ಸುಕನ್ಯಾ ಸಮೃದ್ದಿ ಯೋಜನೆಯ ಮೂಲಕ 15 ವರ್ಷಗಳವರೆಗೆ ಹಣವನ್ನು ಪಾವತಿಸಬೇಕು. ಅಲ್ಲದೇ 21 ವರ್ಷಗಳ ನಂತರ ಸುಕನ್ಯಾ ಸಮೃದ್ದಿ ಯೋಜನೆಯ ಹಣವನ್ನು ಪಡೆಯ ಬಹುದಾಗಿದೆ.
ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆಯಿಂದ ಸಿಗುತ್ತೆ 4000ರೂ.: ದಸರಾ, ದೀಪಾವಳಿಗೆ ಬಿಗ್ ಗಿಫ್ಟ್
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಹಲವು ಆಕರ್ಷಣೀಯವಾದ ಠೇವಣಿ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳಲ್ಲಿಯೇ ಸುಕನ್ಯಾ ಸಮೃದ್ದಿ ಯೋಜನೆ ಹೆಚ್ಚು ಲಾಭವನ್ನು ತಂದುಕೊಡಲಿದೆ. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗಲಿದೆ. ಅಲ್ಲದೇ ವಿವಾಹದ ಸಂದರ್ಭದಲ್ಲಿಯೂ ಹೆಚ್ಚಿನ ಹೊರೆಯನ್ನು ತಪ್ಪಿಸುತ್ತದೆ.

ಹೆಣ್ಣು ಮಕ್ಕಳು ಹತ್ತನೇ ವಯಸ್ಸಿನಲ್ಲಿ ಮಗುವನ್ನು ಸುಕನ್ಯಾ ಸಮೃದ್ದಿ ಯೋಜನೆಗೆ ಸೇರ್ಪಡೆಗೊಳಿಸಬಹುದಾಗಿದೆ. ಒಂದು ಕುಟುಂಬದಿಂದ ಇಬ್ಬರು ಹೆಣ್ಣು ಮಕ್ಕಳನ್ನು ಮಾತ್ರವೇ ಈ ಯೋಜನೆ ಸೇರ್ಪಡೆಗೊಳಿಸಬಹುದಾಗಿದೆ. ಈ ಯೋಜನೆಗೆ ಸೇರ್ಪಡೆಗೊಳ್ಳಲು ಗುರುತಿನ ಚೀಟಿ, ವಿಳಾಸಕ್ಕೆ ಸಂಬಂಧಿಸಿದ ಪುರಾವೆ, ಜನನ ಪ್ರಮಾಣ ಪತ್ರ. ತಂದೆಯ ಭಾವಚಿತ್ರ. ಆಧಾರ್ ಕಾರ್ಡ್ ಅಗತ್ಯವಿದೆ.
ಇದನ್ನೂ ಓದಿ : ಒಂದೇ ಹೆಣ್ಣು ಮಗಳಿರುವ ದಂಪತಿಗಳಿಗೆ ಸಿಗುತ್ತೆ 2 ಲಕ್ಷ ರೂ.: ಸರಕಾರದಿಂದ ಘೋಷಣೆಯಾಯ್ತು ಹೊಸ ಯೋಜನೆ
ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ 250 ರೂಪಾಯಿ ಕನಿಷ್ಠ ಠೇವಣೆಯನ್ನು ಇಡಬಹುದಾಗಿದೆ. ಅಲ್ಲದೇ ಗರಿಷ್ಠ 1.50 ಲಕ್ಷ ರೂಪಾಯಿ ಠೇವಣಿ ಇಡಬಹುದು. ಒಮ್ಮೆ ಈ ಯೋಜನೆಯನ್ನು ಆರಂಭಿಸಿದ ನಂತರ ನಿರಮತರವಾಗಿ 15 ವರ್ಷಗಳ ಕಾಲ ಠೇವಣಿ ಇಡಬೇಕಾಗಿದೆ. ಒಂದೊಮ್ಮೆ ಖಾತೆ ತೆರೆದ ನಂತರ ಠೇವಣಿ ಇರಿಸದೇ ಇದ್ರೆ ಈ ಯೋಜನೆಯ ಲಾಭ ದೊರೆಯುವುದಿಲ್ಲ.
ಒಂದೊಮ್ಮೆ ಸ್ವಲ್ಪ ಸಮಯದ ವರೆಗೆ ಸುಕನ್ಯಾ ಸಮೃದ್ದಿ ಯೋಜನೆಗೆ ಠೇವಣಿಯನ್ನು ಇಡಲು ಸಾಧ್ಯವಾಗದೇ ಇದ್ರೆ ಮತ್ತೆ ಖಾತೆಯನ್ನು 50 ರೂಪಾಯಿ ಹಣ ಪಾವತಿಸುವ ಮೂಲಕ ಮರು ಚಾಲನೆಗೊಳಿಸಬಹುದಾಗಿದೆ. ಈ ಯೋಜನೆಯ ಮೂಲಕ ಮಗುವಿಗೆ ಅವಧಿ ಪೂರ್ತಿಗೊಳಿಸಿದ ನಂತರದಲ್ಲಿ 25 ಲಕ್ಷ ರೂಪಾಯಿ ಹಣ ಸಿಗಲಿದೆ.

ಒಂದೊಮ್ಮೆ ನಿಮ್ಮ ಮಗುವೆ ಇದೀಗ 5 ವರ್ಷ ವಯಸ್ಸಾಗಿದ್ದರೆ, ತಿಂಗಳಿಗೆ ನೀವು 4,641 ಹಣವನ್ನು ಠೇವಣಿ ಇರಿಸಿದ್ದರೆ ವಾರ್ಷಿಕವಾಗಿ ನೀವು 55,692 ರೂಪಾಯಿ ಜಮೆ ಆಗಲಿದೆ. ನೀವು 15 ವರ್ಷಗಳ ಕಾಲ ನಿರಂತರವಾಗಿ ಹಣವನ್ನು ಠೇವಣಿ ಇರಿಸಿದ್ರೆ ನೀವು ಪಾವತಿಸಿದ ಹಣ 8,35,380 ಆಗಲಿದೆ. ಈ ಹಣಕ್ಕೆ ಕೇಂದ್ರ ಸರಕಾರ ಶೇಕಡಾ 8ರ ಬಡ್ಡಿದರವನ್ನು ನೀಡಲಿದೆ.
ಇದನ್ನೂ ಓದಿ : ಈ ಗೃಹಿಣಿಯರಿಗೆ ಮಾತ್ರವೇ ನಾಳೆ ಜಮೆ ಆಗಲಿದೆ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ ಹಣ
ಸುಕನ್ಯಾ ಸಮೃದ್ದಿ ಯೋಜನೆ ಮೂಲಕ ನಿಮ್ಮ ಮಗಳ ಮದುವೆಯ ವೇಳೆಯಲ್ಲಿ ನಿಮಗೆ ಬರೋಬ್ಬರಿ 25 ಲಕ್ಷ ರೂಪಾಯಿ ದೊರೆಯಲಿದೆ. ಇಷ್ಟೇ ಅಲ್ಲದೇ ಈ ಯೋಜನೆಯ ಅಡಿಯಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಪ್ರಕಾರ 1.50 ಲಕ್ಷ ರೂಪಾಯಿ ವರೆಗೆ ತೆರಿಗೆ ವಿನಾಯಿತಿ ದೊರೆಯುತ್ತದೆ.
ಒಂದೊಮ್ಮೆ ಸುಕನ್ಯಾ ಸಮೃದ್ದಿ ಯೋಜನೆಯ ಅವಧಿ ಪೂರ್ಣಗೊಂಡ ನಂತರ ನಿಮ್ಮ ಕೈಸೇರುವ ಹಣವನ್ನು ಠೇವಣಿ ಇರಿಸಿದ್ರೆ ಆ ಮೊತ್ತದ ಮೇಲೆ ತೆರಿಗೆ ಪಾವತಿ ಮಾಡಬೇಕಾಗಿಲ್ಲ. ನಿಮಗೆ ವರ್ಷದ ಆಧಾರದ ಮೇಲೆ ಬಡ್ಡಿಯನ್ನು ಪಾವತಿಸಲಾಗುತ್ತದೆ. ಅಷ್ಟೇ ಅಲ್ಲದೇ ಮೆಚ್ಯೂರಿಟಿ ನಿಮ್ಮ ಕೈ ಸೇರಿದ ನಂತರವೂ ಆ ಮೊತ್ತಕ್ಕೆ ಬಡ್ಡಿ ಇರುವುದಿಲ್ಲ.
Sukanya samriddhi yojana Your daughter will get Rs 25 lakh for her marriage by Prime Minister Narendra Modi government