ಗೃಹಲಕ್ಷ್ಮಿ ಯೋಜನೆಯಿಂದ ಸಿಗುತ್ತೆ 4000ರೂ.: ದಸರಾ, ದೀಪಾವಳಿಗೆ ಬಿಗ್‌ ಗಿಫ್ಟ್‌

ಗೃಹಲಕ್ಷ್ಮೀ ಯೋಜನೆಯ (Gruha Lakshmi Yojana ) ಎರಡನೇ ಕಂತಿನ ಹಣ ವರ್ಗಾವಣೆಗೆ ದಿನಗಣನೆ ಶುರುವಾಗಿದೆ. ಆದರೆ ಕೆಲವರಿಗೆ ಮೊದಲ ಕಂತಿನ ಹಣ ಸಿಕ್ಕಿಲ್ಲ. ಇದೀಗ ದಸರಾ, ದೀಪಾವಳಿ ಹೊತ್ತಲ್ಲೇ 2 ಕಂತಿನ ಹಣ ಒಟ್ಟಾಗಿ 4000 ರೂಪಾಯಿ ಗೃಹಿಣಿಯರ ಕೈ ಸೇರುವ ಸಾಧ್ಯತೆಯಿದೆ.

ಗೃಹಲಕ್ಷ್ಮೀ ಯೋಜನೆಯ (Gruha Lakshmi Yojana ) ಎರಡನೇ ಕಂತಿನ ಹಣ ವರ್ಗಾವಣೆಗೆ ದಿನಗಣನೆ ಶುರುವಾಗಿದೆ. ಆದರೆ ಕೆಲವರಿಗೆ ಕರ್ನಾಟಕ ರಾಜ್ಯ ಸರಕಾರ ನೀಡುವ ಮೊದಲ ಕಂತಿನ ಹಣ ಸಿಕ್ಕಿಲ್ಲ. ಇದೀಗ ದಸರಾ, ದೀಪಾವಳಿ ಹೊತ್ತಲ್ಲೇ 2 ಕಂತಿನ ಹಣ ಒಟ್ಟಾಗಿ 4000 ರೂಪಾಯಿ ಗೃಹಿಣಿಯರ ಕೈ ಸೇರುವ ಸಾಧ್ಯತೆಯಿದೆ.

ಕರ್ನಾಟಕದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಅಡಿಯಲ್ಲಿ ಆಗಸ್ಟ್ 30 ರಂದು ರಾಜ್ಯ ಸರಕಾರವು 1.8 ಕೋಟಿ ಅರ್ಹ ಫಲಾನುಭವಿಗಳಿಗೆ 2169 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಸಪ್ಟೆಂಬರ್‌ ತಿಂಗಳಿನಲ್ಲಿ ಬರೋಬ್ಬರಿ 1.14 ಲಕ್ಷ ಫಲಾನುಭವಿಗಳಿಗೆ 2280 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ.

gruha lakshmi yojana Big Gift Rs 4000 amount Credit for Dussehra, Diwali Festival
Image Credit to Original Source

ಗೃಹಲಕ್ಷ್ಮೀ ಯೋಜನೆಯನ್ನು ಪ್ರಮುಖವಾಗಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದರ ಜೊತೆಗೆ ಅವರನ್ನು ಸ್ವಾವಲಂಬಿಗಳಾಗಿ ಬದುಕಲು ಉತ್ತೇಜಿಸುವ ಸಲುವಾಗಿ ಪ್ರತೀ ತಿಂಗಳು ಮನೆಯ ಯಜಮಾನಿಗೆ 2000 ರೂಪಾಯಿ ಹಣವನ್ನು ಬ್ಯಾಂಕ್‌ ಖಾತೆಗೆ (DBT) ನೇರ ವರ್ಗಾವಣೆ ಮಾಡಲಾಗುತ್ತಿದೆ.

ಇದನ್ನೂ ಓದಿ : ಹೊಸ ರೇಷನ್‌ ಕಾರ್ಡ್‌ : ರೇಷನ್‌ ಕಾರ್ಡ್‌ ತಿದ್ದುಪಡಿಗೆ ಈ ದಾಖಲೆಗಳು ಕಡ್ಡಾಯ

ಈಗಾಗಲೇ ಕುಟುಂಬ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಮೊದಲ ಕಂತಿನ ಹಣ ಜಮೆ ಆಗಿದೆ. ಆದರೆ ಅಕ್ಟೋಬರ್‌ ಎರಡನೇ ವಾರ ಅಂದ್ರೆ ನವರಾತ್ರಿ, ದಸರಾ ಹೊತ್ತಲ್ಲೇ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ ಅನ್ನೋ ಸುದ್ದಿ ಸರಕಾರದಿಂದಲೇ ಹೊರಬಿದ್ದಿದೆ. ಅಲ್ಲದೇ ಮೊದಲ ಕಂತಿನ ಹಣ ಜಮೆ ಆಗದೇ ಇರುವವರಿಗೂ ಗುಡ್‌ನ್ಯೂಸ್‌ ಕೊಟ್ಟಿದೆ.

gruha lakshmi yojana Big Gift Rs 4000 amount Credit for Dussehra, Diwali Festival
Image Credit to Original Source

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿರುವವರ ಪೈಕಿ 9,44,155 ಅರ್ಜಿದಾರರಿಗೆ ಇನ್ನು ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ತಲುಪಿಲ್ಲ. ಯಾವ ಕಾರಣಕ್ಕೆ ಹಣ ತಲುಪಿಲ್ಲ ಅನ್ನೋ ಕುರಿತು ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಮಾಹಿತಿ ನೀಡಿದ್ದಾರೆ.

ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿರುವವರ ಪೈಕಿ 1,59,356 ಅರ್ಜಿದಾರರ ಡೆಮೋ ಪರಿಶೀಲನೆ ವಿಫಲವಾಗಿದೆ. ಇನ್ನು 3082 ಮಂದಿ ಸಾವನ್ನಪ್ಪಿರುವವರ ಹೆಸರಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ. ಇನ್ನು ಹಲವರ ಬ್ಯಾಂಕ್‌ ಖಾತೆ ಆಧಾರ್‌ ಕಾರ್ಡ್‌ ಜೊತೆಗೆ ಲಿಂಕ್‌ ಆಗಿಲ್ಲ. ದೋಷ ಪರಿಹರಿಸುವ ಕಾರ್ಯವನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ 2ನೇ ಕಂತಿನ ಹಣ ಎಲ್ಲರಿಗೂ ಸಿಗಲ್ಲ‌ ! ಯಾವುದಕ್ಕೂ ಒಮ್ಮೆ ಸ್ಟೇಟಸ್‌ ಚೆಕ್‌ ಮಾಡಿ

ಅದ್ರಲ್ಲೂ 5,96,268 ಫಲಾನುಭವಿಗಳ ಖಾತೆಗಳು ಆಧಾರ್ ಕಾರ್ಡ್‌ಗೆ ಲಿಂಕ್ ಆಗಿಲ್ಲ. ಜೊತೆಗೆ 2,17,536 ಫಲಾನುಭವಿಗಳ ಬ್ಯಾಂಕ್ ಖಾತೆ ಆಧಾರ್ ನೊಂದಿಗೆ ಲಿಂಕ್ ಆಗಿದ್ದು ಹಣ ಜಮೆ ಆಗಲಿದೆ. ಉಳಿದಂತೆ ಆಧಾರ್‌ ಕಾರ್ಡ್‌ ಜೊತೆಗೆ ಲಿಂಕ್‌ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಸಿಡಿಪಿಒಗೆ ಮಾಹಿತಿ ನೀಡಲಾಗಿದೆ.

Gruha Lakshmi Yojana Big Gift Rs 4000 amount Credit for Dussehra, Diwali Festival
Image Credit to Original Source

ಇನ್ನು ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಿದವರ ಪೈಕಿ 1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸದಲ್ಲಿ ವ್ಯತ್ಯಾಸವಿದೆ. ಬ್ಯಾಂಕುಗಳ ಮೂಲಕ ಫಲಾನುಭವಿಗಳ ಇ-ಕೆವೈಸಿ ಮಾಡುವ ಕಾರ್ಯ ನಡೆಯುತ್ತಿದೆ. ಜೊತೆಗೆ ತಾಂತ್ರಿಕ ಕಾರಣದಿಂದ ರಿಜೆಕ್ಟ್‌ ಆಗಿರುವ ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ.

ರಾಜ್ಯ ಸರಕಾರವು ಈಗಾಗಲೇ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಆಗಸ್ಟ್ 30 ರಂದು ಸರ್ಕಾರವು 1.8 ಕೋಟಿ ಅರ್ಹ ಫಲಾನುಭವಿಗಳಿಗೆ 2169 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್‌ನಲ್ಲಿ 1.14 ಲಕ್ಷ ಫಲಾನುಭವಿಗಳಿಗೆ 2280 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗಿದೆ.

ಇದನ್ನೂ ಓದಿ :ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗದೇ ಇರುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಇದೀಗ ನವರಾತ್ರಿ, ದಸರಾ ಹಾಗೂ ದೀಪಾವಳಿ ಹಬ್ಬದ ಹೊತ್ತಲೇ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ 4000 ಸಾವಿರ ರೂಪಾಯಿ ಹಣ ಗೃಹಿಣಿಯರ ಖಾತೆಗೆ ವರ್ಗಾವಣೆ ಆಗಲಿದೆ. ಮೊದಲ ಕಂತು ಇದುವರೆಗೆ ಬಾರದೇ ಇರುವವರಿಗೆ ಇದೀಗ ಒಟ್ಟು 4000 ರೂಪಾಯಿ ದೊರೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಈ ಹಿಂದೆಯೇ ಘೋಷಣೆ ಮಾಡಿದ್ದಾರೆ.

ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ ಅಕ್ಟೋಬರ್‌ 2ನೇ ವಾರದಲ್ಲಿ ಗೃಹಿಣಿಯರ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ. ಅಲ್ಲದೇ ಮೊದಲ ಕಂತಿನ ಹಣ ಸಿಗದೇ ಇರುವವರಿಗೆ ಹಬ್ಬದ ಹೊತ್ತಲ್ಲೇ ಗುಡ್‌ನ್ಯೂಸ್‌ ಸಿಗುವುದು ಪಕ್ಕಾ.

Gruha Lakshmi Yojana Big Gift Rs 4000 amount Credit for Dussehra, Diwali Festival

Comments are closed.