ನೌಕರರಿಗೆ ಸಿಹಿ ಸುದ್ದಿ : ಮನೆ ಬಾಡಿಗೆ ತೆರಿಗೆ ಪಾವತಿಗೆ ಹೊಸ ರೂಲ್ಸ್‌ ಜಾರಿ

ಈ ವರ್ಷದ ಅಂದರೆ 2022-23 ನೇ ಸಾಲಿನ ಆದಾಯ ತೆರಿಗೆ ಪಾವತಿಸುವ ಕೊನೆಯ ದಿನಾಂಕ ಈಗಾಗಲೇ ಮುಗಿದಿದೆ. ಇನ್ನು ಕೊನೆಯ ದಿನಾಂಕದ ಒಳಗೆ ತಮ್ಮ ಆದಾಯ ತೆರಿಗೆ ಪಾವತಿಸಲು (Tax payers) ಸಾಧ್ಯವಾಗದ ತೆರಿಗೆದಾರರಿಗೆ ದಂಡವನ್ನು ಕೂಡ ವಿಧಿಸಲಾಗುತ್ತದೆ.

ನವದೆಹಲಿ : ಕೇಂದ್ರ ಹಣಕಾಸು ಸಚಿವಾಲಯ ಆಗಾಗ್ಗೆ ನಿಯಮಗಳ ಬದಲಾವಣೆ ಹಾಗೂ ಹೊಸ ನಿಯಮಗಳನ್ನು ಜಾರಿ ಮಾಡುತ್ತಿರುತ್ತದೆ. ಅದರಲ್ಲೂ ಇತ್ತೀಚೆಗೆ ಜನರು ಹೊಸ ನಿಯಮಗಳಿಗೆ ಹೊಂದಿಕೊಂಡು ತಮ್ಮ ಆದಾಯ ತೆರಿಗೆ (Income Tax Department) ಪಾವತಿ ಮಾಡಬೇಕಾಗಿದೆ. ಈ ಬಾರಿಯ ಬದಲಾಗಿರುವ ನಿಯಮದಲ್ಲಿ (Rented house) ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿರುವ ನೌಕರರಿಗೆ ಸರಕಾರ ಗುಡ್‌ನ್ಯೂಸ್‌ ಕೊಟ್ಟಿದೆ.

ಈ ವರ್ಷದ ಅಂದರೆ 2022-23 ನೇ ಸಾಲಿನ ಆದಾಯ ತೆರಿಗೆ ಪಾವತಿಸುವ ಕೊನೆಯ ದಿನಾಂಕ ಈಗಾಗಲೇ ಮುಗಿದಿದೆ. ಇನ್ನು ಕೊನೆಯ ದಿನಾಂಕದ ಒಳಗೆ ತಮ್ಮ ಆದಾಯ ತೆರಿಗೆ ಪಾವತಿಸಲು (Tax payers) ಸಾಧ್ಯವಾಗದ ತೆರಿಗೆದಾರರಿಗೆ ದಂಡವನ್ನು ಕೂಡ ವಿಧಿಸಲಾಗುತ್ತದೆ.

ಕೆಲವೊಂದು ಸಂದರ್ಭದಲ್ಲಿ ತೆರಿಗೆದಾರರು ತಮ್ಮ ಆದಾಯ ತೆರಿಗೆ ಪಾವತಿ ಸಂದರ್ಭದಲ್ಲಿ ಏನಾದರೂ ತಪ್ಪು ಕಂಡು ಬಂದಲ್ಲಿ, ಅಂತಹ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್‌ ನೀಡಲಾಗಿರುತ್ತದೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ತೆರಿಗೆದಾರರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಅವರು ತೆರಿಗೆ ಪಾವತಿಗೆ ಹೊಸ ನಿಯಮವನ್ನು ಹೊರಡಿಸಿದ್ದಾರೆ.

Tax payers: Good news for employees: New rules for payment of house rent tax have been implemented
Image Credit To Original Source

ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಅವರು ಈ ಹೊಸ ವಿಚಾರದಲ್ಲಿ ತೆರಿಗೆದಾರರಿಗೆ ತೆರಿಗೆ ಪಾವತಿಯಲ್ಲಿ ವಿನಾಯಿತಿಯನ್ನು ನೀಡಿದ್ದಾರೆ. ಅದರಂತೆ ಎಲ್ಲಾ ಆದಾಯಕ್ಕೆ ತೆರಿಗೆ ಪಾವತಿ ಮಾಡುವ ಅಗತ್ಯವಿಲ್ಲ ಎಂದು ಕೂಡ ತಿಳಿಸಿದ್ದಾರೆ. ಹಾಗಾಗಿ ಬಾಡಿಗೆ ಕಟ್ಟುವವರಿಗೆ ಸರಕಾರದಿಂದ ಮತ್ತೊಂಡು ಸಿಹಿಸುದ್ದಿ ಸಿಕ್ಕಿದೆ.

ಇದೀಗ ಸಿಬಿಡಿಟಿ ಈ ಹೊಸ ನಿಯಮ ತಂದಿದ್ದು, ಉಚಿತ ಮನೆಯಲ್ಲಿ ಬಾಡಿಗೆ ಕಟ್ಟದೆ ವಾಸ ಮಾಡುತ್ತಿದ್ದು, ವೇತನ ಪಡೆಯುತ್ತಿರುವ ತೆರಿಗೆದಾರರಿಗೆ ಒಳ್ಳೆಯ ಪರಿಹಾರವನ್ನು ನೀಡಿದೆ. ತೆರಿಗೆದಾರರು ತಾವು ಕೆಲಸ ಮಾಡುವ ಕಂಪೆನಿಯಿಂದ ಬಾಡಿಗೆ ಇಲ್ಲದೇ, ವಾಸಿಸಲು ಮನೆಯನ್ನು ಪಡೆಯುವವರು ಇನ್ಮುಂದೆ ಹೆಚ್ಚಿನ ಹಣ ಉಳಿತಾಯ ಮಾಡಿ, ಹೆಚ್ಚು ಸಂಬಳ ಪಡೆಯಬಹುದು ಎಂದು ಸರಕಾರ ಸೂಚನೆ ನೀಡಿದೆ. ಅಷ್ಟೇ ಅಲ್ಲದೇ ಬಾಡಿಗೆ ಕಟ್ಟುವವರು ಇನ್ಮುಂದೆ ತೆರಿಗೆ ಪಾವತಿ ಮಾಡುವಲ್ಲಿ ವಿನಾಯಿತಿಯನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.

Tax payers: Good news for employees: New rules for payment of house rent tax have been implemented
Image Credit To Original Source

ಇದನ್ನೂ ಓದಿ : ಎಲ್‌ಐಸಿಯ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿ, ವೃದ್ಧಾಪ್ಯದಲ್ಲಿ ಪಡೆಯಿರಿ 1 ಲಕ್ಷ ರೂ. ಪಿಂಚಣಿ

ಇದೀಗ ಆದಾಯ ತೆರಿಗೆ ಇಲಾಖೆ ಪ್ರಕಾರ, ಯಾವುದೇ ಖರ್ಚು ಇಲ್ಲದೇ ಬಾಡಿಗೆ ಮನೆಯಲ್ಲಿ ನೆಮ್ಮದಿಯಿಂದ ವಾಸಿಸುವಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ಇದು ಈ ತಿಂಗಳ ಪ್ರಾರಂಭದಿಂದಲೇ ಜಾರಿಗೊಂಡಿದೆ. ಸಿಬಿಡಿಟಿ ನೀಡಿರುವ ಹೊಸ ನಿಯಮಗಳ ಪ್ರಕಾರ, ಸಂಸ್ಥೆಯ ಮನೆಗಳಲ್ಲಿ ಬಾಡಿಗೆ ಕಟ್ಟಡ ವಾಸ ಮಾಡುವ ಕೇಂದ್ರ ಮತ್ತು ರಾಜ್ಯ ಸರಕಾರದ ನೌಕರರನ್ನು ಬಿಟ್ಟು, ಬೇರೆ ನೌಕರರಿಗೆ ಅವರ ಮೌಲ್ಯಮಾಪನದಲ್ಲಿ ಬದಲಾವಣೆ ನೀಡಲಾಗಿದೆ.

ಇದನ್ನೂ ಓದಿ : UPI ಬಳಕೆದಾರರಿಗೆ ಗುಡ್‌ನ್ಯೂಸ್‌ : ಖಾತೆಯಲ್ಲಿ ಹಣ ಇಲ್ಲದೇ ಇದ್ರೂ ಯುಪಿಐ ಪಾವತಿ ಮಾಡಿ : ಆರ್‌ಬಿಐನಿಂದ ಹೊಸ ರೂಲ್ಸ್‌ ಜಾರಿ

ಹೆಚ್ಚಿನ ಕಡೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಕಂಪನಿ ಕಂಪೆನಿ ಕಡೆಯಿಂದಲೇ ಸುಸಜ್ಜಿತವಿರದ ವಸತಿಯನ್ನು ನೀಡಲಾಗುತ್ತದೆ. ಆದರೆ ಮನೆಗಳ ಒಡೆತನ ಕಂಪನಿ ಪಡೆದಿರುತ್ತದೆ. ಈ ಮನೆಗಳ ಮೇಲೆ ತೆರಿಗೆ ಇಲಾಖೆಯು ಮೌಲ್ಯಮಾಪನವನ್ನು ಬೇರೆ ರೀತಿಯಲ್ಲಿ ಮಾಡುತ್ತದೆ. 2011ರಲ್ಲಿ ಮಾಡಿರುವ ಸೆನ್ಸನ್‌ ಮಾಹಿತಿ ಪ್ರಕಾರ, 40 ಲಕ್ಷಕ್ಕಿಂತ ಜಾಸ್ತಿ ಜನರು ವಾಸಿಸುವ ಊರಿನಲ್ಲಿ ಆ ಜನರ ವೇತನದಲ್ಲಿ ಹೆಚ್‌ಆರ್‌ಡ ಶೇ. 10ರಷ್ಟು ಇರುತ್ತದೆ. 2001ರ ಸೆನ್ಸಸ್‌ನಲ್ಲಿ ಶೇ. 15ರಷ್ಟು ಇರುತ್ತದೆ. ಹಾಗಾಗಿ ಬಾಡಿಗೆ ಮನೆಯಲ್ಲಿ ಇರುವವರು ಹೆಚ್ಚು ಬಾಡಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ.

Tax payers: Good news for employees: New rules for payment of house rent tax have been implemented

Comments are closed.