ಅಂಚೆ ಕಚೇರಿಯ ಉಳಿತಾಯ ಯೋಜನೆಗಳು(Post Office schemes) ನಿಮಗೆ ಯಾವುದೇ ಅಪಾಯವಿಲ್ಲದೇ ದೊಡ್ಡ ಮೊತ್ತದ ಲಾಭವನ್ನು ತಂದುಕೊಡುತ್ತದೆ. ಅಲ್ಲದೇ ಇದರಲ್ಲಿ ಸರ್ಕಾರದ ಯೋಜನೆಗಳೇ ಇರೋದ್ರಿಂದ ಹೂಡಿಕೆದಾರರು ಯಾವುದೇ ಹಿಂಜರಿಕೆಯಿಲ್ಲದೇ ಹೂಡಿಕೆ ಮಾಡಬಹುದಾಗಿದೆ. ಹಾಗಾದರೆ ಅಂಚೆ ಕಚೇರಿಯ ಯಾವೆಲ್ಲ ಯೋಜನೆಗಳು ( Post Office scheme )ನಿಮ್ಮ ಹಣವನ್ನು ದುಪ್ಪಟ್ಟ ಮಾಡಬಲ್ಲವು ಎಂಬುದನ್ನು ನೋಡೋಣ :
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ :
1 ರಿಂದ ಮೂರು ವರ್ಷಗಳವರೆಗೆ ನೀವು ಈ ಯೋಜನೆಯ ಮೂಲಕ ಹಣವನ್ನು ಠೇವಣಿ ಇಡಬಹುದಾಗಿದೆ. ಇಲ್ಲಿ ನಿಮಗೆ ವಾರ್ಷಿಕವಾಗಿ 5.5 ಪ್ರತಿಶತ ಬಡ್ಡಿ ಸಿಗಲಿದೆ. 13 ವರ್ಷಗಳಲ್ಲಿ ನೀವು ಹೂಡಿಕೆ ಮಾಡಿದ ಹಣವು ಡಬಲ್ ಆಗಲಿದೆ. ಅದೇ ರೀತಿ ಐದು ವರ್ಷಗಳ ಕಾಲ ನೀವು ಹಣ ಹೂಡಿಕೆ ಮಾಡಿದರೆ ನಿಮಗೆ 6.7 ಪ್ರತಿಶತ ಬಡ್ಡಿದರ ಸಿಗಲಿದೆ.ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ಖಾತೆ :
ಈ ಯೋಜನೆಯಲ್ಲಿ ನೀವು ಹಣ ಠೇವಣಿ ಇಟ್ಟಲ್ಲಿ ಹಣ ದ್ವಿಗುಗೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಬಡ್ಡಿ ದರ ಕೂಡ ಕಡಿಮೆ ಅಂದರೆ 4 ಪ್ರತಿಶತ ಮಾತ್ರ ಸಿಗಲಿದೆ. ನೀವು ಇಲ್ಲಿ 18 ವರ್ಷಗಳವರೆಗೆ ಕಾದು ಹಣವನ್ನು ಡಬಲ್ ಮಾಡಿಕೊಳ್ಳಬಹುದಾಗಿದೆ.
ಅಂಚೆ ಕಚೇರಿಯ ಮರುಳಿಸುವ ಠೇವಣಿ ( Post Office scheme ):
ಅಂಚೆ ಕಚೇರಿಯ ಮರುಕಳಿಸುವ ಠೇವಣಿಯು ನಿಮಗೆ 5.8 ಪ್ರತಿಶತ ವಾರ್ಷಿಕ ಬಡ್ಡಿದರದಲ್ಲಿ ಲಭ್ಯವಿದೆ. ಇಲ್ಲಿ ನೀವು 12 ವರ್ಷಗಳವರೆಗೆ ಕಾದು ಹಣವನ್ನು ಡಬಲ್ ಮಾಡಿಕೊಳ್ಳಬಹುದು.
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ( Post Office scheme):
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯು ಪ್ರಸ್ತುತ 6.6 ಪ್ರತಿಶತ ಬಡ್ಡಿದರದಲ್ಲಿ ಲಭ್ಯವಿದೆ. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ 10 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳಲಿದೆ.
ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ:
ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ 7.4 ಪ್ರತಿಶತ ಬಡ್ಡಿದರ ನಿಗದಿ ಮಾಡಲಾಗಿದೆ. 7 ರಿಂದ 9 ವರ್ಷಗಳಲ್ಲಿ ನಿಮ್ಮ ಹಣವು ದ್ವಿಗುಣಗೊಳ್ಳಲಿದೆ.
ಅಂಚೆ ಕಚೇರಿ ಪಿಪಿಎಫ್:
ಅಂಚೆ ಕಚೇರಿಯ 15 ವರ್ಷಗಳ ಸಾರ್ವಜನಿಕ ಭವಿಷ್ಯ ನಿಧಿಯು 7.1 ಪ್ರತಿಶತ ಬಡ್ಡಿದರದಲ್ಲಿ ಲಭ್ಯವಿದೆ. ಈ ದರದಲ್ಲಿ ನೀವು 10 ವರ್ಷಗಳಲ್ಲಿ ನಿಮ್ಮ ಹಣವನ್ನು ಡಬಲ್ ಮಾಡಿಕೊಳ್ಳಬಹುದು.
ಅಂಚೆ ಕಚೇರಿಯ ಸುಕನ್ಯಾ ಸಮೃದ್ಧಿ ಯೋಜನೆ:
ಸುಕನ್ಯಾ ಸಮೃದ್ಧಿ ಯೋಜನೆಯು ಅಂಚೆ ಕಚೇರಿಯ ಎಲ್ಲಾ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿದರವನ್ನು ಹೊಂದಿದೆ. ಅಂದರೆ ಇಲ್ಲಿ ನಿಮಗೆ 7.6 ಪ್ರತಿಶತ ಬಡ್ಡಿದರ ಸಿಗಲಿದೆ. ಇದು ಹೆಣ್ಣು ಮಗುವಿಗೆ ಸೀಮಿತವಾದ ಯೋಜನೆಯಾಗಿದ್ದು 9 ವರ್ಷಗಳಲ್ಲಿ ಹಣ ದುಪ್ಪಟ್ಟಾಗುವುದು.
ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ:
ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರವು 6.8 ಪ್ರತಿಶತ ಬಡ್ಡಿದರದಲ್ಲಿ ಲಭ್ಯವಿದೆ. 5 ವರ್ಷದ ಅವಧಿಯ ಈ ಯೋಜನೆಯನ್ನು ನೀವು ಬಳಕೆ ಮಾಡುವ ಮೂಲಕ ಆದಾಯ ತೆರಿಗೆಯನ್ನು ಉಳಿಸಬಹುದಾಗಿದೆ. ಈ ಯೋಜನೆಯಲ್ಲಿ ನೀವು ಹಣ ಹೂಡಿಕೆ ಮಾಡಿದರೆ 10 ವರ್ಷಗಳಲ್ಲಿ ಹಣ ಡಬಲ್ ಆಗಲಿದೆ.
ಇದನ್ನು ಓದಿ : Beer Drinking: ನೀವೂ ಬಿಯರ್ ಕುಡೀತೀರಾ? ಬಿಯರ್‌ನಿಂದ ದೇಹಕ್ಕೆ ಉಪಯೋಗವೂ ಇದೆ, ಹಾನಿಯೂ ಇದೆ
ಇದನ್ನೂ ಓದಿ: SBI customers alert: ಎಸ್ಬಿಐ ಗ್ರಾಹಕರ ಗಮನಕ್ಕೆ: ಈ ಎರಡು ದಿನಗಳು ಬ್ಯಾಂಕ್ ಸೇವೆಯಲ್ಲಿ ಇರಲಿದೆ ವ್ಯತ್ಯಯ
THESE Post Office schemes will make you rich, here’s how