workplace accident : ವರ್ಕ್​ ಫ್ರಮ್​​ ಹೋಮ್​​ನಲ್ಲಿದ್ದರೂ ಉದ್ಯೋಗಿಯ ಜವಾಬ್ದಾರಿ ಕಂಪನಿಯದ್ದೇ : ಕೋರ್ಟ್ ಮಹತ್ವದ ಆದೇಶ

ಕೊರೊನಾ ವೈರಸ್‌ ಸೋಂಕು ವಿಶ್ವದಾದ್ಯಂತ ಕಾಣಿಸಿಕೊಳ್ಳುತ್ತಲೇ ವರ್ಕ್‌ಫ್ರಂ ಹೋಮ್‌ ವ್ಯವಸ್ಥೆಯನ್ನು ಬಹುತೇಕ ಕಂಪೆನಿಗಳು ಅಳವಡಿಸಿಕೊಂಡಿವೆ. ಸರಿ ಸುಮಾರು ಎರಡು ವರ್ಷಗಳಿಂದ ವರ್ಕ್​ ಫ್ರಾಮ್​ ಹೋಮ್(workplace accident)​ ಪದ್ಧತಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಬಂದಿದೆ. ಕೊರೊನಾ ಸೋಂಕನ್ನು ನಿಯಂತ್ರಣ ಮಾಡುವ ಸಲುವಾಗಿ ಪ್ರಚಲಿತಕ್ಕೆ ಬಂದ ಈ ಕೆಲಸ ಮಾಡುವ ಪದ್ಧತಿಯು ಇದೀಗ ಅನೇಕ ಕಂಪನಿಗಳ ಪಾಲಿಗೆ ಹಾಸು ಹೊಕ್ಕು ಎಂಬಂತಾಗಿದೆ. ಆದ್ರೀಗ ನೌಕರರು ಕಚೇರಿಗೆ ಹಾಜರಾಗದೇ ಇದ್ದರೂ ಕೂಡ ವರ್ಕ್‌ ಫ್ರಂ ಹೋಮ್‌ ವೇಳೆಯಲ್ಲಿ ಅನಾಹುತಗಳು ಎದುರಾದ್ರೆ ಕಂಪೆನಿಗಳೇ ಹೊಣೆ ಎಂದು ನ್ಯಾಯಾಲಯ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

ಈ ವರ್ಕ್​ ಫ್ರಾಮ್​ ಹೋಮ್​ ಪದ್ಧತಿಯು ಜರ್ಮನಿಯ ನ್ಯಾಯಾಲಯವೊಂದರಲ್ಲಿ ಭಾರೀ ದೊಡ್ಡ ಚರ್ಚಾ ವಿಷಯವಾಗಿ ಬದಲಾಗಿದೆ. ಇದಕ್ಕೆ ಕಾರಣ ಕೂ ಅಷ್ಟೇ ವಿಚಿತ್ರವಾಗಿದೆ. ವರ್ಕ್​ ಫ್ರಾಮ್​ ಹೋಮ್​ನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಮಲಗುವ ಕೋಣೆಯಿಂದ ಕೆಲಸ ಮಾಡುವ ಕೋಣೆಗೆ ಬರುವ ವೇಳೆ ಜಾರಿಬಿದ್ದಿದ್ದಾನೆ. ಇದರಿಂದ ಆತನಿಗೆ ಬೆನ್ನಮೂಳೆ ಮುರಿದಿದೆ. ಆದರೆ ಕಚೇರಿ ವಿಮೆಯ ಪ್ರಕಾರ ಆಫೀಸಿಗೆ ಬರುವ ಮಾರ್ಗ ಮಧ್ಯದಲ್ಲಿ ಏನೇ ಸಮಸ್ಯೆಯಾದರೂ ಕಂಪನಿಯೇ ಹೊಣೆ ಎಂಬುದಾಗಿತ್ತು. ಆದರೆ ಇದು ವರ್ಕ್​ ಫ್ರಾಮ್​ ಹೋಮ್​ ಆಗಿದ್ದರಿಂದ ಉದ್ಯೋಗಿಯ ಚಿಕಿತ್ಸಾ ವೆಚ್ಚವನ್ನು ಕಂಪನಿ ಭರಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಕಂಪೆನಿಯ ಈ ಆದೇಶವನ್ನು ಪ್ರಶ್ನಿಸಿದ ವ್ಯಕ್ತಿ ನ್ಯಾಯಾಲಯದಲ್ಲಿ ಪ್ರಕರಣವೊಂದನ್ನು ದಾಖಲಿಸಿದ್ದ. ಆದರೆ ಕಂಪನಿಯ ಈ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯು 2 ಕೆಳಹಂತದ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿದರೂ ಸಹ ಜಯ ಕಂಪನಿಯದ್ದೇ ಆಗಿತ್ತು. ಇಷ್ಟಕ್ಕೆ ಸುಮ್ಮನಾಗದ ನೌಕರ ಕ್ಯಾಸೆಲ್​​ನಲ್ಲಿರುವ ಮೇಲ್ದರ್ಜೆ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಈ ವೇಳೆಯಲ್ಲಿ ನ್ಯಾಯಾಲಯ ಮಹತ್ವದ ಆದೇಶವನ್ನು ನೀಡಿದೆ. ನೌಕರ ಕಚೇರಿ ಕೆಲಸ ಮಾಡಲೆಂದೇ ತನ್ನ ಮಲಗುವ ಕೋಣೆಯಿಂದ ಪ್ರಯಾಣ ಆರಂಭಿಸಿದ್ದ. ಹಾಗಾಗಿ ಇದು ಕಚೇರಿಗೆ ತೆರಳುವ ಮಾರ್ಗ ಮಧ್ಯೆ ನಡೆದ ಅಪಘಾತವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗೆ ಯಾವೆಲ್ಲಾ ರೀತಿಯ ಪರಿಹಾರ ನೀಡಬೇಕೋ ಅದೆಲ್ಲದ್ದಕ್ಕೂ ಈ ಉದ್ಯೋಗಿಗೆ ನೀಡಬೇಕು. ಈತ ಕೂಡ ಕಂಪೆನಿಯ ವಿಮಾ ಸೌಲಭ್ಯದ ಫಲಾನುಭವಿ ಆಗಿದ್ದಾನೆ ಎಂದು ಹೇಳುವ ಮೂಲಕ ಮಹತ್ವದ ತೀರ್ಪು ನೀಡಿದೆ. ಇನ್ನು ವರ್ಕ್‌ಫ್ರಂ ಹೋಮ್‌ನಲ್ಲಿದ್ದ ಉದ್ಯೋಗಿಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಅಂತಾ ವರ್ತಿಸುವ ಕಂಪೆನಿಗಳಿಗೆ ಇದೀಗ ನ್ಯಾಯಾಲಯದ ಆದೇಶ ಉರುಳಾಗಿದೆ.

ಇದನ್ನು ಓದಿ: SBI customers alert: ಎಸ್​ಬಿಐ ಗ್ರಾಹಕರ ಗಮನಕ್ಕೆ: ಈ ಎರಡು ದಿನಗಳು ಬ್ಯಾಂಕ್​ ಸೇವೆಯಲ್ಲಿ ಇರಲಿದೆ ವ್ಯತ್ಯಯ

ಇದನ್ನೂ ಓದಿ :Beer Drinking: ನೀವೂ ಬಿಯರ್ ಕುಡೀತೀರಾ? ಬಿಯರ್‌ನಿಂದ ದೇಹಕ್ಕೆ ಉಪಯೋಗವೂ ಇದೆ, ಹಾನಿಯೂ ಇದೆ

Man slips while walking from bed to home office, court rules it is ‘workplace accident’ as he was commuting

Comments are closed.