ಭಾನುವಾರ, ಏಪ್ರಿಲ್ 27, 2025
HomebusinessUPI ಗ್ರಾಹಕರ ಗಮನಕ್ಕೆ ! ಈ ಕೆಲಸ ಮಾಡದಿದ್ರೆ ರದ್ದಾಗಲಿದೆ ನಿಮ್ಮ ಯುಪಿಐ ಐಡಿ

UPI ಗ್ರಾಹಕರ ಗಮನಕ್ಕೆ ! ಈ ಕೆಲಸ ಮಾಡದಿದ್ರೆ ರದ್ದಾಗಲಿದೆ ನಿಮ್ಮ ಯುಪಿಐ ಐಡಿ

- Advertisement -

UPI ID Deactivate : ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ (NPCI) ಕಳೆದ ಒಂದು ವರ್ಷಗಳಿಂದ ನಿಷ್ಕ್ರಿಯವಾಗಿರುವ ಯುಪಿಐ ಐಡಿ (UPI ID) ಗಳನ್ನು ರದ್ದುಗೊಳಿಸಲು ಮುಂದಾಗಿದೆ. ಗ್ರಾಹಕರು ಒಂದು ವರ್ಷಗಳಿಂದ ಯುಪಿಐ ಐಡಿಗಳನ್ನು ಬಳಸಿ ವ್ಯವಹಾರವನ್ನು ನಡೆಸದೇ ಇರುವ ಐಡಿಗಳನ್ನು ನಿಷ್ಕ್ರಿಯಗೊಳಿಸುವಿಕೆಯನ್ನು ಮಾಡಲಿದೆ.

ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವ್ಯವಸ್ಥೆಯು ಬಳಕೆದಾರರಿಗೆ ಸುರಕ್ಷತೆಯನ್ನು ಒದಗಿಸುವುದು ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಜನರು ಡಿಜಿಟಲ್‌ ಪಾವತಿಯ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಜೊತೆಗೆ ಸಾಕಷ್ಟು ವಂಚನೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಹಲವು ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ.

UPI ID Deactivate NPCI Plan To Deactivate for These UPI Id Complete Details here
Image Credit to Original Source

ಇನ್ನು ಡಿಜಿಟಲ್‌ ಪಾವತಿಗಳ ಮೂಲಕ ಹಣ ವರ್ಗಾವಣೆ ಮಾಡಲು ಟ್ರಾಯ್‌ ಕೂಡ ಕೆಲವೊಂದು ನಿರ್ದೇಶನಗಳನ್ನು ನೀಡಿದೆ. ಗ್ರಾಹಕರು ಮೊಬೈಲ್‌ ಸಂಖ್ಯೆಯನ್ನು ಬದಲಾವಣೆ ಮಾಡಿದ ಸಂದರ್ಭದಲ್ಲಿ ಯುಪಿಐ ಐಡಿ ಕೂಡ ಬದಲಾವಣೆ ಆಗಲಿದೆ. ಇನ್ನು ಮೂರು ತಿಂಗಳ ಬಳಕೆಯ ನಂತರ ಹಳೆಯ, ನಿಷ್ಕ್ರಿಯಗೊಳಿಸಿದ ಮೊಬೈಲ್‌ ಸಂಖ್ಯೆಗಳನ್ನು ಹೊಸ ಬಳಕೆದಾರರಿಗೆ ಹಸ್ತಾಂತರಿಸಲು ಭಾರತದಲ್ಲಿನ ಫೋನ್ ಕಂಪನಿಗಳಿಗೆ ಅವಕಾಶ ನೀಡುವ ಹೊಸ ನಿಯಮವನ್ನು TRAI ಹೊರತಂದಿದೆ.

ಗ್ರಾಹಕರ ಮೊಬೈಲ್‌ ಸಂಖ್ಯೆಯನ್ನು ಬೇರೊಬ್ಬರಿಗೆ ಟೆಲಿಕಾಂ ಕಂಪೆನಿಗಳು ನೀಡಿದ್ದರೆ ಅಂತಹ ಸಂದರ್ಭದಲ್ಲಿ ಹೊಸ ಸಂಖ್ಯೆಯನ್ನು ಬ್ಯಾಂಕು ಖಾತೆಗಳಿಗೆ ನವೀಕರಿಸದೇ ಇದ್ದರೆ, ನೀವು ಹಣ ವರ್ಗಾವಣೆಯನ್ನು ಮಾಡಲು ಸಾಧ್ಯವಾಗದೇ ಇರಬಹುದು. ಜೊತೆಗೆ ಥರ್ಡ್-ಪಾರ್ಟಿ ಅಪ್ಲಿಕೇಶನ್‌ಗಳು ಮತ್ತು ಪಾವತಿ ಸೇವೆಗಳನ್ನು ಒದಗಿಸುವ ಜನರಿಗೆ 2023 ರ ಅಂತ್ಯದವರೆಗೆ ಗಡುವು ನೀಡಲಾಗಿದೆ.

ಇದನ್ನೂ ಓದಿ : ಯುವನಿಧಿ ಯೋಜನೆ ನೋಂದಣಿ ಆರಂಭ : ಯುವನಿಧಿ ಟೋಲ್ ಫ್ರೀ ಸಂಖ್ಯೆ 1800 599 9918ಗೆ ಕರೆ ಮಾಡಿ

ಇನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ, ಅನಪೇಕ್ಷಿತ ಹಣ ವರ್ಗಾವಣೆಯನ್ನು ತಡೆಯಲು NPCI ಗುರಿ ಹೊಂದಿದೆ. ಗ್ರಾಹಕರು ತಮ್ಮ UPI ಐಡಿಗಳನ್ನು ನವೀಕರಿಸದೆಯೇ ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದಾಗ ಹಣ ವರ್ಗಾವಣೆಯಲ್ಲಿ ಮೋಸ ಹೋಗುವ ಸಾಧ್ಯತೆಯಿದೆ.

ನೀವು ಹೊಸದಾಗಿ ಯುಪಿಐ ಕ್ರಿಯೆಟ್‌ ಮಾಡಿ, ಹಳೆಯ ಯುಪಿಐ ಐಡಿಯನ್ನು ಬಳಕೆ ಮಾಡದೇ ಹಾಗೆ ಬಿಟ್ಟಿದ್ದರೆ ಅಂತಹ ಯುಪಿಐ ಐಡಿಗಳ ಮೂಲಕ ನೀವು ಹಣ ವರ್ಗಾವಣೆಯ ಸಂದರ್ಭದಲ್ಲಿ ಬೇರೊಬ್ಬರು ನಿಮ್ಮ ಹಣವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ಇಷ್ಟೇ ಅಲ್ಲಾ, ಗ್ರಾಹಕರು ತಮ್ಮ UPI ಐಡಿಗಳನ್ನು ನಿಯಮಿತವಾಗಿ ಅಪ್‌ಡೇಟ್ ಮಾಡಲು ಮತ್ತು ಅವರ ಮೊಬೈಲ್ ಸಂಖ್ಯೆಗಳು ಸರಿಯಾದ UPI ಐಡಿಯೊಂದಿಗೆ ಸಂಯೋಜಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಲಹೆ ನೀಡಲಾಗಿದೆ.

ಇದನ್ನೂ ಓದಿ : LPG Link : ಎಲ್‌ಪಿಜಿ ಗ್ರಾಹಕರಿಗೆ ಡಿಸೆಂಬರ್‌ 31ರ ಒಳಗೆ EKYC ಕಡ್ಡಾಯವೇ ? ಆಹಾರ ಇಲಾಖೆಯಿಂದ ಹೊಸ ಆದೇಶ

ಗ್ರಾಹಕರ ಖಾತೆಗಳಿಗೆ ಯಾವುದೇ ಅನಧಿಕೃತ ಪ್ರವೇಶವನ್ನು ತಡೆಯಲು ಮತ್ತು ಅನಪೇಕ್ಷಿತ ಹಣ ವರ್ಗಾವಣೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಹೊಸ ಪದ್ದತಿಯು ಸಹಾಯವನ್ನು ಮಾಡುತ್ತದೆ. ಪಾವತಿ ಅಪ್ಲಿಕೇಶನ್ ಪೂರೈಕೆದಾರರು ತಮ್ಮ ಬಳಕೆದಾರರಿಗೆ ತಮ್ಮ UPI ಐಡಿಗಳನ್ನು ನವೀಕೃತವಾಗಿರಿಸುವ ಪ್ರಾಮುಖ್ಯತೆ ಮತ್ತು ನಿಷ್ಕ್ರಿಯ UPI ಐಡಿಗಳಿಗೆ ಸಂಬಂಧಿಸಿದ ಸಂಭಾವ್ಯ ಅಪಾಯಗಳ ಕುರಿತು ಅರಿವು ಮೂಡಿಸಲು ತಿಳಿಸಲಾಗಿದೆ.

UPI ID Deactivate NPCI Plan To Deactivate for These UPI Id Complete Details here
Image Credit to Original Source

ಗೂಗಲ್‌ ಪೇ (Google Pay), ಪೋನ್‌ ಪೇ (PhonePe), ಪೇಟಿಯಂ (Paytm) ಮುಂತಾದ ಯಾವುದೇ ಯುಪಿಐ ಆಪ್ಲಿಕೇಶನ್‌ಗಳನ್ನು ಬಳಕೆ ಮಾಡುತ್ತಿದ್ದರೆ, ನೀವು ಒಂದು ವರ್ಷಕ್ಕೂ ಹೆಚ್ಚು ಕಾಲ ಅಂತಹ ಐಡಿಗಳನ್ನು ಬಳಕೆ ಮಾಡುತ್ತಿಲ್ಲವೇ ಅನ್ನೋದನ್ನು ಖಚಿತ ಪಡಿಸಿಕೊಳ್ಳಬೇಕು. ನಿಮ್ಮ UPI ID ಗಳಿಗೆ ಲಿಂಕ್ ಮಾಡಲಾದ ಎಲ್ಲಾ ಫೋನ್ ಸಂಖ್ಯೆಗಳನ್ನು ಎರಡು ಬಾರಿ ಪರಿಶೀಲಿಸಿ ಮತ್ತು ಅವುಗಳನ್ನು ಮೂರು ತಿಂಗಳಿಗಿಂತ ಹೆಚ್ಚು ಕಾಲ ಬಳಸಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಒಳಿತು.

ಇದನ್ನೂ ಓದಿ : ಅಂಚೆ ಕಚೇರಿ ಹೊಸ ಯೋಜನೆ : ಕೇವಲ 1500 ರೂ ಹೂಡಿಕೆ ಮಾಡಿ 35 ಲಕ್ಷ ರೂ ಪಡೆಯಿರಿ !

UPI ID Deactivate : NPCI Plan To Deactivate for These UPI Id Complete Details here

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular