WhatsApp Pay : ದೇಶದಲ್ಲಿ ಡಿಜಿಟಲ್ ಇಂಡಿಯಾ ಪರಿಕಲ್ಪನೆ ಆರಂಭವಾದಾಗಿನಿಂದ ಜನರು ಹೆಚ್ಚಾಗಿ ಆನ್ಲೈನ್ ಪೇಮೆಂಟ್ಗಳತ್ತ ಜನರು ಮುಖ ಮಾಡಿದ್ದಾರೆ. ಯುಪಿಐ ಪೇಮೆಂಟ್ಗಳು ಈಗ ಹೆಚ್ಚು ಚಾಲ್ತಿಯಲ್ಲಿವೆ. ಹೀಗಾಗಿ ಸ್ಮಾರ್ಟ್ಫೋನ್ಗಳನ್ನು ಹೊಂದಿರುವ ಎಲ್ಲರಲ್ಲೂ ಗೂಗಲ್ ಪೇ, ಫೋನ್ ಪೇ ಹಾಗೂ ಪೇಟಿಎಂಗಳಂತಹ ಆ್ಯಪ್ಗಳು ಇರುವುದು ಸರ್ವೇ ಸಾಮಾನ್ಯ ಎನಿಸಿದೆ. ಇದೀಗ ಈ ಸಾಲಿಗೆ ವಾಟ್ಸಾಪ್ ಪೇ ಕೂಡ ಸೇರಿದೆ .
ಈಗಾಗಲೇ ಜನರು ಬೇರೆ ಬೇರೆಎ ಆನ್ಲೈನ್ ಪೇಮೆಂಟ್ ಆ್ಯಪ್ಗಳನ್ನು ಬಳಕೆ ಮಾಡ್ತಿದ್ದಾರೆ. ಹೀಗಾಗಿ ಇಂತವರನ್ನು ತನ್ನ ಪೇಮೆಂಟ್ ವೇದಿಕೆಯನ್ನು ಬಳಸುವಂತೆ ಮಾಡಲು ವಾಟ್ಸಾಪ್ ಹೊಸದೊಂದು ಪ್ಲಾನ್ ಮಾಡಿದೆ. ಅದೇನೆಂದರೆ ವಾಟ್ಸಾಪ್ ಪೇಮೆಂಟ್ ಮೂಲಕ ಪೇಮೆಂಟ್ ಮಾಡುವ ಬಳಕೆದಾರರಿಗೆ 105 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ.
ಪ್ರತಿ ಪೇಮೆಂಟ್ಗೆ 35 ರೂಪಾಯಿಗಳಂತೆ ಮೂರು ಪೇಮೆಂಟ್ಗಳಿಗೆ ಒಟ್ಟು 105 ರೂಪಾಯಿಗಳು ನಿಮ್ಮ ಖಾತೆಯನ್ನು ಸೇರಲಿದೆ. ಈ ಕ್ಯಾಶ್ಬ್ಯಾಕ್ ಪಡೆದುಕೊಳ್ಳಲು ಇಂತಿಷ್ಟೇ ಹಣ ಪಾವತಿ ಮಾಡಬೇಕು ಎಂದೇನಿಲ್ಲ. ನೀವು ಒಂದು ರೂಪಾಯಿ ಹಾಕಿದರೂ ಸಾಕು. ನಿಮಗೆ 105 ರೂಪಾಯಿಗಳು ಸಿಗಲಿದೆ ಎಂದು ಕಂಪನಿ ತಿಳಿಸಿದೆ. ಕ್ಯಾಶ್ ಬ್ಯಾಕ್ ಐಡಿಯಾದ ಮೂಲಕ ಕಂಪನಿಯು ಗ್ರಾಹಕರನ್ನು ಗಳಿಸಲು ಮುಂದಾಗಿದೆ.
ಇದನ್ನು ಓದಿ : KL Rahul : ಟೀಮ್ ಇಂಡಿಯಾದಿಂದ ಹೊರ ಬಿದ್ದ ಕೆ.ಎಲ್.ರಾಹುಲ್ ಬಾವುಕ ಸಂದೇಶ
ಇದನ್ನೂ ಓದಿ : Star Sports ನಲ್ಲಿ ಪ್ರಸಾರವಾಗಲ್ಲ ಐಪಿಎಲ್ ! ಹೊಸ ಬ್ರಾಡ್ ಕಾಸ್ಟಿಂಗ್ ರೈಟ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತೀರಿ
WhatsApp Pay is offering Rs 105 cashback, here is how to avail the offer