ಸ್ಯಾಂಡಲ್ ವುಡ್ ನಲ್ಲಿ 2020ರಲ್ಲಿ ಬಿಡುಗಡೆಗೆ ಸಾಲು ಸಾಲು ಚಿತ್ರಗಳು ಕಾಯುತ್ತಿವೆ. ಅದರಲ್ಲಿ ಬಹು ನಿರೀಕ್ಷಿತ ಚಿತ್ರವೇ ಗಿಡಿಯಾರ. ಹೆಸರಿನಿಂದಲೇ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿರೊ ಬಹು ತಾರಾಂಗಣದ ವಿಭಿನ್ನ ಕಥಾಹಂದರದ ಚಿತ್ರ “ಗಡಿಯಾರ”.

ಹೌದು ಪ್ರಬಿಕ್ ಮೊಗವೀರ್ ನಿರ್ದೇಶನ ಮತ್ತು ನಿರ್ಮಾಣದ ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರ ಮೂಲಕ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಮಾಡಿಸಿರುವ ಗಡಿಯಾರ ಚಿತ್ರ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿ ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು ಚಿತ್ರದಲ್ಲಿ ದೊಡ್ಡ ತಾರಾಂಗಣವೇ ಇದೆ.

ವಿಶೇಷ ಪಾತ್ರದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಪಿ ಸಾಂಗ್ಲಿಯಾನ, ವಿಶೇಷ ಅಭಿನಯದಲ್ಲಿ ಯಶ್ ಶೆಟ್ಟಿ, ಮುಖ್ಯ ಪಾತ್ರದಲ್ಲಿ ರಾಜ್ ದೀಪಕ್ ಶೆಟ್ಟಿ, ಶೀತಲ್ ಶೆಟ್ಟಿ ಹಾಗೂ ಅತಿಥಿ ಪಾತ್ರದಲ್ಲಿ ರಿಹಾಜ್ ಎಮ್ ಟಿ & ಗೌರಿ ಶಂಕರ್ ಮತ್ತು ಮುಖ್ಯ ಭೂಮಿಕೆಯಲ್ಲಿ ಶರತ್ ಲೋಹಿತಾಶ್ವ ಮತ್ತು ಸೂಚೇಂದ್ರ ಪ್ರಸಾದ ಜೊತೆಗೆ ಪ್ರದೀಪ್ ಪೂಜಾರಿ, ಗಣೇಶ್ ರಾವ್, ಮನದೀಪ್ ರೈ, ರಾಧಾ ರಾಮಚಂದ್ರ, ಪ್ರಣಯ ಮೂರ್ತಿ, ಎಸಿಪಿ ಚಬ್ಬಿ , ವಿನಯ್ ಕುಮಾರ್ ರಾವ್ , ಲೀಲಾ ಮೋಹನ್ ನಟಿಸಿದ್ದಾರೆ.

ಗಡಿಯಾರ ಚಿತ್ರದಲ್ಲಿ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದು, ನಾಲ್ಕು ಅದ್ಬುತ ಸಾಹಸ ಸನ್ನಿವೇಶಗಳು ಚಿತ್ರದಲ್ಲಿದೆ. ರಾಘವ್ ಸುಭಾಷ್ ಸಂಗೀತದಲ್ಲಿ ಮೋಡಿ ಮಾಡಿದ್ದಾರೆ. ಶ್ಯಾಮ್ ಸಿಂಧನೂರ್ ಛಾಯಾಗ್ರಹ ಹಾಗೂ ಎನ್.ಎಮ್.ವಿಶ್ವ ಸಂಕಲನದಲ್ಲಿ ಚಿತ್ರ ಅದ್ಬುತವಾಗಿ ಮೂಡಿಬಂದಿದೆ. ಹೇಮಂತ್ ಕುಮಾರ್, ವ್ಯಾಸರಾಜ್, ಅನುರಾಧ ಭಟ್, ಅಪೂರ್ವ ಶ್ರಿ ಕುಮಾರ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಕಾಮಿಡಿ, ಮಾಸ್, ಲವ್, ಹಿಸ್ಟಾರಿಕಲ್, ಹಾರರ್, ಥ್ರಿಲ್ಲರ್ ಚಿತ್ರದಲ್ಲಿದ್ದು, ಅದ್ಬುತವಾಗಿ ಮೂಡಿಬಂದಿರೋ ಚಿತ್ರ ಸಿರಿರಸಿಕರಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.