ಟಾಮ್ & ಜೆರ್ರಿಗೆ ಆಕ್ಷನ್ ಕಟ್ ಹೇಳ್ತಾರೆ ಕೆಜಿಎಫ್ ಶಿವಗಂಗೆ

0

ಕೆಜಿಎಫ್ ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸನ್ನೇ ಕೊಳ್ಳೆ ಹೊಡೆದ ಸಿನಿಮಾ. ಕೆಜಿಎಫ್ ಸಿನಿಮಾದಲ್ಲಿ ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದ ಚಂದ್ರಮೌಳಿ ಡೈರೆಕ್ಟರ್ ಆಗಿದ್ದು ಹಳೆ ಸುದ್ದಿ. ಇದೀಗ ಕೆಜಿಎಫ್ ಸಿನಿಮಾದ ಇನ್ನೋರ್ವ ಸಂಭಾಷಣೆಕಾರ ರಾಘವ್ ವಿನಯ್ ಶಿವಗಂಗೆ ಕೂಡ ಆ್ಯಕ್ಷನ್ ಕಟ್ ಹೇಳೋದಕ್ಕೆ ರೆಡಿಯಾಗಿದ್ದಾರೆ. ಅಷ್ಟಕ್ಕೂ ವಿಜಯ್ ಶಿವಗಂಗೆ ಆ್ಯಕ್ಷನ್ ಕಟ್ ಹೇಳ್ತಿರೋದು ಟಾಮ್ & ಜೆರ್ರಿಗೆ.
ಟಾಮ್ & ಜೆರ್ರಿ ಚಂದನವನದ ಬಹುನಿರೀಕ್ಷಿತ ಸಿನಿಮಾವೂ ಹೌದು. ಇಂಜಿನಿಯರಿಂಗ್ ಪದವೀಧರರಾಗಿರೋ ವಿನಯ್ ಶಿವಗಂಗೆ ಚಂದನವನದ ಕನಸನ್ನು ಇದೀಗ ನನಸು ಮಾಡಿಕೊಳ್ಳುತ್ತಿದ್ದಾರೆ. ರಂಗಾಯಣದಲ್ಲಿ ಪಳಗಿರೋ ಶಿವಗಂಗೆ ಶ್ರಾವಣಿ ಸುಬ್ರಮಣ್ಯ ಸಿನಿಮಾ ಮೂಲಕ ಅಸೋಸಿಯೇಟ್ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಶ್ರಾವಣಿ ಸುಬ್ರಹ್ಮಣ್ಯ ವಿನಯ್ ಶಿವಗಂಗೆ ಒಂದೊಳ್ಳೆ ಬ್ರೇಕ್ ನೀಡಿತ್ತು. ಸುಮಾರು 10 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿರೋ ಶಿವಗಂಗೆ ಇದೀಗ ಟಾಮ್ & ಜೆರ್ರಿ ಎಂಬ ಟೈಟಲ್ ನೊಂದಿಗೆ ಕನ್ನಡದಲ್ಲಿ ಹೊಸತನದ ಸಿನಿಮಾ ನೀಡೋದಕ್ಕೆ ಮುಂದಾಗಿದ್ದಾರೆ. ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ವಿಭಿನ್ನ ಹೆಸರಿನಿಂದಲೇ ಚಿತ್ರ ಸಾಕಷ್ಟು ಭರವಸೆಯನ್ನು ನೀಡಿದೆ.
ಟಾಮ್ & ಜೆರ್ರಿ ಸಿನಿಮಾ ಮೂಲಕವಾಗಿಯೇ ವಿನಯ್ ಶಿವಗಂಗೆ ಕೆಜಿಎಫ್ 2 ಸಿನಿಮಾಕ್ಕೆ ಸಂಭಾಷಣೆ ಬರೆಯುತ್ತಿಲ್ಲ.ಬದುಕನ್ನು ಬೇರೆಯದೇ ಅರ್ಥದಲ್ಲಿ ಬದುಕ್ತಿರೋ ಎರಡು ಪಾತ್ರಗಳನ್ನೇ ಇಟ್ಟುಕೊಂಡು ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಪಾತ್ರಗಳ ಜರ್ನಿಯಲ್ಲಿ ಬರುವ ಬೇರೆ ಬೇರೆ ವಿಚಾರಗಳ ಆಯಾಮವೇ ಈ ಟಾಮ್ & ಜೆರ್ರಿ.ಚಿತ್ರದಲ್ಲಿ ಮುಖ್ಯಪಾತ್ರಧಾರಿಗಳಾಗಿ ಗಂಟುಮೂಟೆ ಖ್ಯಾತಿಯ ನಿಶ್ಚಿತ್ ಕೊರೋಡಿ ಮತ್ತು ಚೈತ್ರಾ ರಾವ್ ಅಭಿನಯಿಸುತ್ತಿದ್ದಾರೆ. ಜೈ ಜಗದೀಶ್, ಸಂಪತ್, ತಾರಾ, ರಂಗಾಯಣ ರಘು, ಪ್ರಶಾಂತ್, ರಾಕ್ ಲೈನ್ ಸುಧಾಕಾರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು ಹಿರಿಯ ಕಲಾವಿದರ ದಂಡೇ ಸಿನಿಮಾದಲ್ಲಿದೆ. ಟಾಮ್ & ಜೆರ್ರಿಗೆ ರಾಜು ಸೇರಿಗಾರ್ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣವನ್ನು ಬೆಂಗಳೂರಿನಲ್ಲಿಯೇ ನಡೆಸಲು ಸಿದ್ದತೆ ಮಾಡಿಕೊಂಡಿದೆ ಚಿತ್ರತಂಡ. ಚಿತ್ರಕ್ಕೆ ಸಂಕೇತ್ ಕ್ಯಾಮರಾ ಕೈಚಳಕ ತೋರಿಸೋದಕ್ಕೆ ಮುಂದಾಗಿದ್ರೆ, ಮ್ಯಾಥ್ಯೂಸ್ ಮನು ಅದ್ಬುತವಾಗಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, 4 ಪುಲ್ ಸಾಂಗ್ ಹಾಗೂ 2 ಬಿಟ್ ಸಾಂಗ್ಸ್ ಗಳಿದೆ. ಟಾಮ್ & ಜೆರ್ರಿ ಮ್ಯೂಸಿಕಲ್ ಹಿಟ್ ಸಿನಿಮಾವಾಗುತ್ತೇ ಅನ್ನೋ ನಿರೀಕ್ಷೆಯಲ್ಲಿದೆ ಚಿತ್ರತಂಡ. ಕೆಜಿಎಫ್ ಚಿತ್ರ ಸಂಭಾಷಣೆಯಲ್ಲಿಯೂ ಸಖತ್ ಸೌಂಡ್ ಮಾಡಿದ್ದು, ಟಾಮ್ & ಜೆರ್ರಿ ಸಿನಿಮಾ ಸಂಭಾಷಣೆ ಕೇಳೋದಕ್ಕೆ ಸಿನಿಪ್ರೇಕ್ಷಕರು ಕಾತರರಾಗಿದ್ದಾರೆ.

Leave A Reply

Your email address will not be published.