ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೇನು ಬಂಧನಕ್ಕೊಳಗಾದ್ರು ಎಂಬಂತೆ ಬಿಂಬಿತವಾಗಿದ್ದ ಸ್ಯಾಂಡಲ್ ವುಡ್ ಸ್ಟಾರ್ ಜೋಡಿ ಐಂದ್ರೀತಾ ರೈ ಮತ್ತು ದಿಗಂತ್ ಈ ಗಾಸಿಪ್ ಗಳ ಗಲ್ಲಿ ದಾಟಿ ತಮ್ಮ ಕರ್ತವ್ಯದಲ್ಲಿ ತೊಡಗಿದ್ದಾರೆ.

ಹೌದು ಯಶಸ್ವಿಯಾಗಿ ಸಿಸಿಬಿ ವಿಚಾರಣೆ ಎದುರಿಸಿದ ಈ ಜೋಡಿ ಬಹುವರ್ಷದ ಬಳಿಕ ಒಂದೇ ಸಿನಿಮಾದಲ್ಲಿ ಜೊತೆಯಾಗಿದ್ದು,ಮಲೆನಾಡಿನಹಸಿರಿನ ನಡುವೆ ಜೋಡಿಹಕ್ಕಿಗಳಂತೆ ಹಾರಾಡಿಕೊಂಡಿದ್ದಾರೆ.ದಿಗ್ಗಿ ಹಾಗೂ ಆ್ಯಂಡಿ ಕ್ಯೂಟ್ ಜೋಡಿ ಸಧ್ಯ ” ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಎಂಬ ಸಿನಿಮಾದಲ್ಲಿಬ್ಯುಸಿಯಾಗಿದ್ದು ಒಟ್ಟೊಟ್ಟಿಗೆ ಶೂಟಿಂಗ್ ನಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ.

ಈ ವಿಚಾರವನ್ನು ಸ್ವತಃ ಐಂದ್ರೀತಾ ರೈ ಹಂಚಿಕೊಂಡಿದ್ದು ತುಂಬ ವರ್ಷದ ಬಳಿಕ ನನ್ನ ಆಪ್ ಸ್ಕ್ರಿನ್ ಲವ್ ಜೊತೆ ಸ್ಕ್ರಿನ್ ಹಂಚಿಕೊಳ್ಳುತ್ತಿದ್ದೇನೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ವಿನಾಯಕ್ ನಿರ್ದೇಶನದ ಈ ಸಿನಿಮಾಕ್ಕೆ ಸಿಲ್ಕ ಮಂಜು ಬಂಡವಾಳ ಹೂಡಿದ್ದು, ಪುಟ್ಟ ಗೌರಿ ಖ್ಯಾತಿಯ ರಂಜನಾ ರಾಘವನ್ ಮತ್ತೋರ್ವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಪ್ರಜ್ವಲ್ ಪೈ ಸಂಗೀತವಿರುವ ಈ ಚಿತ್ರದ ಶೂಟಿಂಗ್ ಶಿವಮೊಗ್ಗದ ಸುತ್ತಮುತ್ತಲ ಮಲೆನಾಡಿನ ವಾತಾವರಣದಲ್ಲಿ ನಡೆದಿದೆ. ದಿಗ್ಗಿ ಹಾಗೂ ಆ್ಯಂಡಿ ಅಪ್ಪಟ ಗ್ರಾಮೀಣ ಸೊಗಡಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

೮ ವರ್ಷಗಳಬಳಿಕ ಐಂದ್ರಿತಾ ಹಾಗೂ ದಿಗಂತ್ ದಂಪತಿ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದು, ೨೦೧೨ ರಲ್ಲಿ ಪಾರಿಜಾತ ಸಿನಿಮಾದ ಬಳಿಕ ಇಬ್ಬರೂ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ.