ಇಂದು ಗೋಚರಿಸಲಿದೆ ದೀರ್ಘಕಾಲದ ಛಾಯಾ ಚಂದ್ರಗ್ರಹಣ

ಹೊಸದಿಲ್ಲಿ : ಕಾರ್ತಿಕ ಮಾಸದ ಶುಕ್ಲಪಕ್ಷ (ಕಾರ್ತಿಕ ಪೂರ್ಣಿಮೆ) ದಿನವಾದ ಇಂದು ಈ ವರ್ಷದ ಕೊನೆಯ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಈ ಬಾರಿ ಸಂಭವಿಸುತ್ತಿರುವ ನಾಲ್ಕನೇ ಛಾಯಾಚಂದ್ರ ಗ್ರಹಣ ಇದಾಗಿದೆ.

ಮಧ್ಯಾಹ್ನ 1.04 ನಿಮಿಷಕ್ಕೆ ಆರಂಭ ವಾಗುವ ಗ್ರಹಣ ಸಂಜೆ 5.22ಕ್ಕೆ ಕೊನೆಗೊಳ್ಳಲಿದೆ. ಗ್ರಹಣವು ಮಧ್ಯಾಹ್ನ 3.13ಕ್ಕೆ ಗ್ರಹಣವು ಸಂಪೂರ್ಣವಾಗಿ ಗೋಚರಿಸಲಿದ್ದು, ಇಂದು ಸಂಭವಿಸುವ ಚಂದ್ರಗ್ರಹಣವು ಅತ್ಯಂತ ದೀರ್ಘ ಕಾಲ ಇರಲಿದೆ ಎಂದಿದ್ದಾರೆ ವಿಜ್ಞಾನಿಗಳು.

ಆದರೆ ಚಂದ್ರಗ್ರಹಣ ದೇಶದಲ್ಲಿ ಸ್ಪಷ್ಟವಾಗಿ ಗೋಚರಿಸುವುದಿಲ್ಲ.ಉತ್ತರ ಭಾರತ ಹಾಗೂ ಪೂರ್ವ ಭಾರತದ ಕೆಲವು ಕಡೆಗಳಲ್ಲಿ ಮಾತ್ರವೇ ಗೋಚರಿಸಲಿದೆ. ಭಾರತದಲ್ಲಿ ಚಂದ್ರಗ್ರಹಣವು ಮಧ್ಯಾಹ್ನ 1.04ರಿಂದ ಆರಂಭವಾಗಿ ಸಂಜೆ 5.22ಕ್ಕೆ ಅಂತ್ಯಗೊಳ್ಳುತ್ತದೆ. ಪಾಟ್ನಾ, ರಾಂಚಿ, ಕೋಲ್ಕತಾ, ಲಕ್ನೋ, ವಾರಾಣಸಿ ಮತ್ತು ಭುವನೇಶ್ವರದಲ್ಲಿ ಸ್ವಲ್ಪಮಟ್ಟಿಗೆ ಗ್ರಹಣ ಗೋಚರಿಸಲಿದೆ ಎಂದು ಹೇಳಲಾಗಿದೆ.

ಛಾಯಾ ಚಂದ್ರಗ್ರಹಣವು ಆರಂಭದಲ್ಲಿ ಲಿಮಾ ಮತ್ತು ಪೆರುವಿನಲ್ಲಿ ಗೋಚರಿಸಲಿದೆ. ನಂತರದಲ್ಲಿ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಪೆಸಿಫಿಕ್ ಮತ್ತು ಅಟ್ಲಾಂಟಿಕ್ನಲ್ಲಿ ಗೋಚರಿಸಲಿದೆ.

ಈ ಬಾರಿ ಒಟ್ಟು 4 ಛಾಯಾ ಚಂದ್ರ ಚಂದ್ರಗ್ರಹಣ ಗಳು ಸಂಭವಿಸಿದ್ದು, ಮುಂದಿನ ವರ್ಷ 2021ರ ಮೇ 26ರಂದು ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದೆ.

Comments are closed.