ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣದ ತನಿಖೆ ನಿರ್ಧಿಷ್ಟ ಸ್ವರೂಪದಲ್ಲಿಯೇ ಸಾಗುತ್ತಿಲ್ಲ. ಒಂದೆಡೆ ಬಾಲಿವುಡ್ ದಿಗ್ಗಜರ ಹೆಸರು ಕೇಳಿಬರುತ್ತಿದ್ರೆ, ಇನ್ನೊಂದೆಡೆ ಡ್ರಗ್ಸ್ ಮಾಫಿಯಾದ ಹೆಸರು ಕೇಳಿಬಂದಿತ್ತು. ಈ ನಡುವಲ್ಲೇ ಸುಶಾಂತ್ ಸಾಯುವ ಮುನ್ನಾ ದಿನ ನಡೆದ ಮತ್ತೊಂದು ವಿಚಾರ ಬಯಲಾಗಿದೆ.

ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದರು. ಸುಶಾಂತ್ ಸಾವು ಆತ್ಮಹತ್ಯೆ ಎಂದು ಎಲ್ಲರೂ ನಂಬಿದ್ದರು. ಆದ್ರೀಗ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳುವ ಒಂದು ದಿನದ ಮೊದಲು ರಿಯಾ ಚರ್ಕವರ್ತಿ, ಸುಶಾಂತ್ನನ್ನು ಭೇಟಿಯಾಗಿದ್ದರು ಎಂಬ ವಿಚಾರ ಇದೀಗ ಬಯಲಾಗಿದೆ.

ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಜೂನ್ 8 ರಿಂದ ಸುಶಾಂತ್ ಸಿಂಗ್ ಮನೆಯಿಂದ ಹೊರ ನಡೆದಿರುವುದಾಗಿ ಹೇಳಿಕೊಂಡಿ ದ್ದರು. ಆ ನಂತರದಲ್ಲಿ ತಾನು ಸುಶಾಂತ್ ಸಿಂಗ್ ಮನೆಗೆ ಹೋಗಿಯೇ ಇಲ್ಲಾ ಅಂತಾನೂ ಹೇಳಿದ್ದರು. ಆದ್ರೀಗ ಸುಶಾಂತ್ ಸಿಂಗ್ ರಜಪೂತ್ ಸಹೋದರಿ ಶ್ವೇತಾ ಸಿಂಗ್ ಇನ್ಸ್ಟಾ ಗ್ರಾಂ ನಲ್ಲಿ ಪೋಸ್ಟ್ ಮಾಡಿರುವ ಮಾಡಿರುವ ಮಾಹಿತಿ ಇದೀಗ ಪ್ರಕರಣವನ್ನೇ ಹೊಸ ಧಿಕ್ಕಿಗೆ ಕೊಂಡೊಯ್ದಿದೆ.

ಶ್ವೇತಾ ಸಿಂಗ್ ಅವರು ಪೋಸ್ಟ್ ಮಾಡಿರುವ ಪ್ರಕಾರ ರಿಯಾ ಚಕ್ರವರ್ತಿ ಜೂ.13ರಂದು ಸುಶಾಂತ್ನನ್ನು ಭೇಟಿ ಮಾಡಿದ್ದು ಸತ್ಯ. ಈ ಸತ್ಯ ಗೇಮ್ ಚೇಂಜರ್ ಆಗಲಿದೆ. ಸುಶಾಂತ್ರನ್ನು 13ನೇ ತಾರೀಖಿನಿಂದು ರಿಯಾ ಭೇಟಿ ಮಾಡಿದ್ದನ್ನು ನೋಡಿದವರೇ ದೃಢಪಡಿಸಿ ದ್ದಾರೆ. ಆ ರಾತ್ರಿ ಯಾವ ಪಿತೂರಿ ನಡೆದಿದೆ ? ಮರುದಿನ ಬೆಳಗ್ಗೆಯೇ ನನ್ನ ಸೋದರ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಈ ಸತ್ಯ ಹೊರಬೀಳಬೇಕು. ಸೂಕ್ತ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಸುಶಾಂತ್ ಸಿಂಗ್ ಮತ್ತು ರಿಯಾ ಚಕ್ರವರ್ತಿ ಜೂ.13ರಂದು ಭೇಟಿಯಾಗಿದ್ದಾರೆ ಎಂಬುದನ್ನು ಅವರು ಒಟ್ಟಿಗೆ ಇದ್ದುದನ್ನು ನೋಡಿದವರೇ ನನಗೆ ಹೇಳಿದ್ದಾರೆ ಎಂದು ಮುಂಬೈನ ಬಿಜೆಪಿ ಕಾರ್ಯದರ್ಶಿ ವಿವೇಕಾನಂದ ಗುಪ್ತಾ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದರು. ಅಲ್ಲದೆ, ಅಂದು ತಡರಾತ್ರಿ ಸುಶಾಂತ್ ಅವರೇ ರಿಯಾರನ್ನು ಡ್ರಾಪ್ ಮಾಡಲು ಆಕೆಯ ಮನೆವರೆಗೂ ಹೋಗಿದ್ದರು ಎಂಬ ಸತ್ಯವೂ ಗೊತ್ತಾಗಿದೆ ಎಂದು ಪ್ರತಿಪಾದಿಸಿದ್ದರು.

ಶ್ವೇತಾ ಸಿಂಗ್ ಸಿಡಿಸಿರುವ ಹೊಸ ಬಾಂಬ್ ಇದೀಗ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಸುಶಾಂತ್ ಸಾವು ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರಿಯಾ ಚಕ್ರವರ್ತಿ ಜೈಲು ಸೇರಿದ್ದರೆ, ಬಾಲಿವುಡ್ ದಿಗ್ಗಜರೆಲ್ಲಾ ಪೊಲೀಸರ ತನಿಖೆಯನ್ನು ಎದುರಿಸಿದ್ದಾರೆ. ಒಟ್ಟಿನಲ್ಲಿ ಪ್ರಕರಣ ಯಾವಾಗ ಅಂತ್ಯ ಕಾಣುತ್ತೋ ಅನ್ನೋದು ಕುತೂಹಲ ಮೂಡಿಸಿದೆ.