ಭಾನುವಾರ, ಏಪ್ರಿಲ್ 27, 2025
HomeCinemaಬಾಹುಬಲಿಯೂ ಇಲ್ಲ…ಬಚ್ಚನ್ ಕೂಡ ಸಾಟಿಯಾಗಲ್ಲ..! ಆ ವಿಚಾರದಲ್ಲಿ ಡಿ ಬಾಸ್ NO 1 !

ಬಾಹುಬಲಿಯೂ ಇಲ್ಲ…ಬಚ್ಚನ್ ಕೂಡ ಸಾಟಿಯಾಗಲ್ಲ..! ಆ ವಿಚಾರದಲ್ಲಿ ಡಿ ಬಾಸ್ NO 1 !

- Advertisement -

ಚಾಲೆಂಜಿಂಗ್ ಸ್ಟಾರ್ ದರ್ಶನ್... ಬಾಕ್ಸಾಫೀಸ್ ಸುಲ್ತಾನ್. ಮಾಸ್ ಮಹಾರಾಜ. ಕನ್ನಡ ಚಿತ್ರರಂಗದಲ್ಲಿ ಅತಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರೋ ನಟ ಡಿ ಬಾಸ್ ದರ್ಶನ್. ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲಿ ಎಷ್ಟೇ ದೊಡ್ಡ ಸೂಪರ್ ಸ್ಟಾರ್ ಗಳಿರಬಹುದು.. ಆದ್ರೆ, ಅದೊಂದು ವಿಚಾರದಲ್ಲಿ ಅಭಿಮಾನಿಗಳ ನೆಚ್ಚಿನ ದಾಸನೇ ನಂಬರ್ ವನ್.. ಉಳಿದವರೆಲ್ಲಾ ನಂತರದ ಸ್ಥಾನದಲ್ಲಿ ನಿಲ್ಲುತ್ತಾರೆ.

ಈ ಲೆಕ್ಕದಲ್ಲಿ ಬಾಹುಬಲಿ ಪ್ರಭಾಸ್, ಬಿಗ್ ಬಿ ಅಮಿತಾಬ್, ಅಷ್ಟೆ ಯಾಕೆ ಸೂಪರ್ ಸ್ಟಾರ್ ರಜಿನಿಕಾಂತ್ ಕೂಡ ಅಷ್ಟಕ್ಕಷ್ಟೆ. ಇಷ್ಟಕ್ಕೂ ದರ್ಶನ್ ಅದ್ಯಾವ ವಿಚಾರದಲ್ಲಿ ನಂ.1 ಸ್ಥಾನದಲ್ಲಿದ್ದಾರೆ ? ಆಕ್ಟಿಂಗ್ ನಲ್ಲಿ ಇಡೀ ಇಂಡಿಯಾವನ್ನೇ ತಿರುಗಿ ನೋಡುವಂತೆ ಮಾಡಿರೋ ಡಿ ಬಾಸ್ ಮತ್ತೊಂದು ವಿಚಾರದಲ್ಲೂ ಕೂಡ ಟಾಪ್ ನಲ್ಲಿದ್ದಾರೆ ಆ ವಿಚಾರ ಯಾವ್ದು..? ಇಲ್ಲಿದೆ ನೋಡಿ ಡೀಟೈಲ್ಸ್

ಸ್ನೇಹಿತ್ರೇ.. ನಮ್ಮ ಇಡೀ ಬದುಕು ಒಂಥರಾ ಪೈಪೋಟಿಗಳ ಸಾಗರವಿದ್ದಂತೆ. ನಾವು ಎಲ್ಲಿ ಯಾವುದೇ ಕೆಲಸಕ್ಕೆ ಕೈ ಇಟ್ರು. ಅಲ್ಲಿ ಪ್ರತಿಸ್ಪರ್ದಿಗಳು ಇದ್ದೇ ಇರ್ತಾರೆ. ಗಟ್ಟಿಯಾಗಿ ಗುದ್ದಾಡೋ ಎದುರಾಳಿ ಇದ್ದಾಗಲೇ ಗೆಲುವಿಗೊಂದು ಅರ್ಥ. ನಾವು ನೀವು ಪ್ರತಿನಿತ್ಯ ಒಂದಲ್ಲ, ಒಂದು ಚಾಲೆಂಜನ್ನ ಎದುರಿಸುತ್ತಲೇ ಇರ್ತೀವಿ. ಅದೇ ರೀತಿ ಪೈಪೋಟಿ ಇಲ್ಲದ ಸ್ಥಳವೇ ಇಲ್ಲ ಬಿಡಿ. ಎಲ್ಲೋದ್ರೂ ನಂ.1 ಸ್ಥಾನಕ್ಕಾಗಿ ಸ್ಪರ್ಧೆ ಇದ್ದೇ ಇರುತ್ತೆ. ಅದೇ ರೀತಿ ಚಿತ್ರರಂಗದಲ್ಲೂ ಕೂಡ ಹೌದು. ಬಣ್ಣದ ಲೋಕದಲ್ಲಂತೂ ಪ್ರತಿ ದಿನ ಪ್ರತಿ ಕ್ಷಣ ಕಾಂಪಿಟೇಷನ್ ನಡೀತಾನೇ ಇರುತ್ತೆ. ಸ್ಟಾರ್ಡಮ್, ರೆಮ್ಯೂನರೇಷನ್, ಸಿನಿಮಾ ಸಕ್ಸಸ್, ಬಾಕ್ಸಾಫೀಸ್ ಕಲೆಕ್ಷನ್ ವಿಷಯದಲ್ಲಿ ಸ್ಪರ್ಧೆ ನಿಲ್ಲೋದೆ ಇಲ್ಲ. ಮೇಲೇರಿದವರು ಕೆಳಗೆ ಇಳಿಯಲೇಬೇಕು. ಅದೃಷ್ಟ ಇದ್ರೆ ಕೆಳಗಿದ್ದವರು ಮೇಲೇರಿ ಮೆರಿತ್ತಾರೆ. ಆದ್ರೆ, ಅದೊಂದು ವಿಚಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂಡಸ್ಟ್ರಿಗೆ ಬಂದಾಗಿನಿಂದ ನಂಬರ್ 1 ಸ್ಥಾನದಲ್ಲಿದ್ದಾರೆ. ಎಷ್ಟೆ ಜನ ಹೀರೋಗಳು ಬಂದ್ರು, ಹೋದ್ರು, ದಚ್ಚು ಮುಂದೆ ಆ ಒಂದು ವಿಚಾರದಲ್ಲಿ ಸರಿಸಾಟಿ ಇಲ್ಲ .ಅವರನ್ನ ಮೀರಿಸೋ ನಟನಿನ್ನೂ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿಲ್ಲ. ಹೀಗಾಗಿ ಆ ಸಬ್ಜೆಕ್ಟ್ ನಲ್ಲಿ ಡಿ ಬಾಸ್ ಎದುರಾಳಿಗಳೇ ಇಲ್ಲದ ನಂಬರ್ 1 ಆಕ್ಟರ್…

ಚಿತ್ರರಂಗದಲ್ಲಿ ಹೀರೋ ಆಗೋದಕ್ಕೆ ಅಭಿನಯದ ಜೊತೆಗೆ ಒಳ್ಳೆ ಪರ್ಸನಾಲಿಟಿ ಕೂಡ ಬೇಕು. ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲಿ ಆರಡಿ ಕಟೌಟ್ಗಳಿಗೇನು, ಬರವಿಲ್ಲ. ಪ್ರಭಾಸ್, ಸುದೀಪ್, ರಾಣಾ ಆರಡಿಗಿಂತ್ಲೂ ಹೆಚ್ಚು ಎತ್ತರ ಇದ್ದಾರೆ. ಆದ್ರೆ, ಬಾಲಿವುಡ್ ನಿಂದ ಮಾಲಿವುಡ್ ವರೆಗೂ ಇರೋ ಸ್ಟಾರ್ ಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತೀ ಹೆಚ್ಚು ಹೈಟ್ ಇರೋ ಹೀರೋ ಅನ್ನಿಸಿಕೊಂಡಿದ್ದಾರೆ. ಹೀರೋಗಳ ಎತ್ತರದ ಬಗ್ಗೆನೇ ಕೆಲವು ಹಾಡುಗಳು, ಡೈಲಾಗ್ಗಳು ಬಂದಿವೆ. ಮಾತ್ರವಲ್ಲ ಸೂಪರ್ ಡೂಪರ್ ಹಿಟ್ ಕೂಡ ಆಗಿವೆ.

ಸಿನಿ ಇಂಡಸ್ಟ್ರಿಯಲ್ಲಿ ಯಾರು ಸಿಕ್ಕಾಪಟ್ಟೆ ಹೈಟ್ ಇದ್ದಾರೆ ಅಂದ್ರೆ, ಕೆಲವರು ಅಮಿತಾಬ್ ಬಚ್ಚನ್ ಅಂತಾರೆ. ಮತ್ತೆ ಕೆಲವರು ಬಾಹುಬಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಮಹೇಶ್ ಬಾಬು ಅಂತ ಹೇಳಿಬಿಡ್ತಾರೆ. ಬಟ್ ಅವರೆಲ್ಲರನ್ನ ಹಿಂದಿಕ್ಕಿ ಚಾಲೆಂಜಿಂಗ್ ಸ್ಟಾರ್ ನಂಬರ್ ವನ್ ಸ್ಥಾನದಲ್ಲಿದ್ದಾರೆ. ಹೌದು ಬಾಲಿವುಡ್ ನ ಖ್ಯಾತ ನಾಮರಾದ ಆಮೀರ್ ಖಾನ್, ಶಾರೂಖ್ ಖಾನ್, ಸಲ್ಮಾನ್ ಖಾನ್ ಸೂಪರ್ ಸ್ಟಾರ್ ಗಳಾಗಿ ಮರೆಯುತ್ತಿದ್ದಾರೆ. ಆದ್ರೆ, ಹೈಟ್ ವಿಚಾರದಲ್ಲಿ ಮೂವರು ಕೊಂಚ ಕಡಿಮೇನೆ ಅನ್ಬೋದು.. ಆಮೀರ್ ಖಾನ್ 5.6, ಶಾರೂಕ್ ಖಾನ್ 5.8, ಸಲ್ಮಾನ್ ಖಾನ್ 5.7 ಅಡಿ ಎತ್ತರ ಇದ್ದಾರೆ. ಅವರಿಗೂ ನಮ್ಮ ಡಿಬಾಸ್ಗೂ ಹೈಟ್ ವಿಚಾರದಲ್ಲಿ ಅಜಗಜಾಂತರ ವ್ಯತ್ಯಾಸವಿದೆ..

ಒಂದು ಕಾಲದಲ್ಲಿ ಹೈಟ್ ನಿಂದಲೇ ಬಾಲಿವುಡ್ನಲ್ಲಿ ಸದ್ದು ಮಾಡಿದವರು ಅಮಿತಾಬ್ ಬಚ್ಚನ್. ಹೈಟ್ ಕಾರಣದಿಂದ್ಲೇ ಆರಂಭದಲ್ಲಿ ಬಿಗ್ಬಿ ಕೆಲ ಅವಕಾಶಗಳಿಂದ ವಂಚಿತರಾಗಿದ್ರಂತೆ.. ಆದ್ರೆ, ಇಂದಿಗೂ ಬಚ್ಚನ್ ಇಂಡಿಯನ್ ಸೂಪರ್ ಸ್ಟಾರ್ ಆಗಿ ಮೆರಿತ್ತಿದ್ದಾರೆ.. ಬಿಗ್ ಬಿ ಅಮಿತಾಬ್ ಬರೋಬ್ಬರಿ 6.2 ಅಡಿ ಎತ್ತರ ಇದ್ದಾರೆ. ಇನ್ನು ಟಾಲಿವುಡ್ನಲ್ಲಿ ಮಹೇಶ್ ಬಾಬು, ಬಾಹುಬಲಿ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಹೈಟ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ತೆಲುಗು ಚಿತ್ರರಂಗದಲ್ಲಿ ನಂಬರ್ ಒನ್ ಪಟ್ಟಕ್ಕಾಗಿ ಮಹೇಶ್ ಬಾಬು ಮತ್ತು ಪ್ರಭಾಸ್ ನಡುವೆ ಭಾರೀ ಪೈಪೋಟಿ ಇದೆ. ಸೂಪರ್ ಹಿಟ್ ಸಿನಿಮಾಗಳ ಮೂಲಕ ಮಹೇಶ್ ಬಾಬು ಧೂಳೆಬ್ಬಿಸಿದ್ರೆ, ಬಾಹುಬಲಿಯಾಗಿ ಪ್ರಭಾಸ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. 6.2 ಅಡಿ ಎತ್ತರ ಇರೋ ಪ್ರಭಾಸ್, 6.1ಅಡಿ ಇರೋ ಮಹೇಶ್ ಬಾಬುವನ್ನ ಹೈಟ್ ನಲ್ಲಿ ಮೀರಿಸಿದ್ದಾರೆ.. ರಾಣಾ ದಗ್ಗುಬಾಟಿ ಹತ್ತತ್ರ 6.2 ಅಡಿ ಎತ್ತರ ಇದ್ದಾರೆ..

ಕಾಲಿವುಡ್ನಲ್ಲಿ ವಿಜಯ್, ಅಜಿತ್, ಧನುಷ್ ಸೂಪರ್ ಸ್ಟಾರ್ಗಳಾಗಿ ಮಿಂಚ್ತಿದ್ದಾರೆ.. ಸೂಪರ್ ಸ್ಟಾರ್ ರಜಿನಿಕಾಂತ್ ಮತ್ತು ಕಮಲ್ ಹಾಸನ್ ಇವತ್ತಿಗೂ ಹೊಸ ಹೀರೋಗಳಿಗೆ ಫೈಟ್ ಕೊಡ್ತಿದ್ದಾರೆ. ಆದ್ರೆ, ಹೈಟ್ ನಲ್ಲಿ ಅವರು ನಾರ್ಮಲ್ .ಇವರ್ಯಾರು ಆರಡಿ ದಾಟಿಲ್ಲ. ಸ್ಯಾಂಡಲ್ವುಡ್ ವಿಚಾರಕ್ಕೆ ಬಂದ್ರೆ, ಸುದೀಪ್ ಕೂಡ ಸಿಕ್ಕಾಪಟ್ಟೆ ಹೈಟ್ ಇದ್ದಾರೆ. ಬಚ್ಚನ್ ಮತ್ತು ರನ್ನ ಸಿನಿಮಾದಲ್ಲಿ ಕಿಚ್ಚನ ಹೈಟ್ ಬಗ್ಗೆ ಹಾಡುಗಳು ಮೂಡಿ ಬಂದಿದ್ವು. ಅಭಿಮಾನಿಗಳಂತೂ ಕಿಚ್ಚನನ್ನ ಆರಡಿ ಕಟೌಟ್ ಅಂತ್ಲೇ ಕರೀತಾರೆ..ಬಾದ್ಶಾ ಕಿಚ್ಚ ಸುದೀಪ್ ಬರೋಬ್ಬರಿ 6.2 ಅಡಿ ಎತ್ತರ ಇದ್ದಾರೆ. ಆದ್ರೆ, ದರ್ಶನ್ ಹೈಟ್ಗೆ ಕಂಪೇರ್ ಮಾಡಿದ್ರೆ, ಸುದೀಪ್ ಹೈಟ್ ಕೂಡ ಕಮ್ಮಿನೇ. ಭಾರತೀಯ ಚಿತ್ರರಂಗದಲ್ಲಿ ದಚ್ಚುನೇ ನಂಬರ್ ಒನ್…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರೋಬ್ಬರಿ 6.3 ಅಡಿ ಎತ್ತರ ಇದ್ದಾರೆ.. ಸದ್ಯದ ಮಟ್ಟಿಗೆ ಡಿ ಬಾಸ್ಗೆ ಪೈಪೋಟಿ ಕೊಡೋ ಹೀರೋ ಚಿತ್ರರಂಗದಲ್ಲಿ ಇಲ್ಲವೇ ಇಲ್ಲ. ಹಾಗಂತ ದರ್ಶನ್ ಗಿಂತ ಎತ್ತರ ಇರೋ ಹೀರೋಗಳು ಬಂದಿಲ್ಲ ಅಂತ ಅಲ್ಲ. ಡಿ ಬಾಸ್ಗಿಂತ ಹೈಟ್ ಇರೋ ಹೀರೋಗಳು ಇಂಡಸ್ಟ್ರಿಗೆ ಬಂದೋಗಿದ್ದಾರೆ. ಆದ್ರೆ ಗಟ್ಟಿಯಾಗಿ ನೆಲೆಯೂರಿಲ್ಲ. ಇವತ್ತಿಗೂ ಸ್ಟಾರ್ ಪಟ್ಟಕ್ಕಾಗಿ ಹೋರಾಟ ನಡೆಸ್ತಿದ್ದಾರೆ. ಯಾರಾದ್ರು, ದರ್ಶನ್ ಅವರನ್ನು ಮೀರಿಸ್ತಾರಾ ಅನ್ನೋದನ್ನು ಕಾದು ನೋಡ್ಬೇಕು.

ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್, ತೆಲುಗಿನ ಜ್ಯೂನಿಯರ್ ಎನ್ ಟಿಆರ್, ಅಲ್ಲು ಅರ್ಜುನ್, ಕನ್ನಡದ ಪುನೀತ್, ಯಶ್ ಎಲ್ಲರೂ ಡಿ ಬಾಸ್ ಮುಂದೆ ಅಷ್ಟಕ್ಕಷ್ಟೆ. ಹೈಟ್ ಗೆ ತಕ್ಕಂತೆ ಫಿಟ್ನೆಸ್, ಗತ್ತು ಗಾಂಭೀರ್ಯ ಇರೋ ಒಡೆಯ ಸೂಪರ್ ಸ್ಟಾರ್ ಆಗಿ ದರ್ಬಾರ್ ಮಾಡ್ತಿದ್ದಾರೆ. ಕ್ಲಾಸ್ ಮತ್ತು ಮಾಸ್ ಅಷ್ಟೆ ಅಲ್ಲ, ಐತಿಹಾಸಿಕ, ಪೌರಾಣಿಕ ಪಾತ್ರಗಳಲ್ಲಿ ಮಿಂಚು ಹರಿಸಿದ್ದಾರೆ. ಅಭಿಮಾನಿಗಳ ಜೈಕಾರಕ್ಕೆ ಪಾತ್ರರಾಗಿದ್ದಾರೆ. ಹೈಟ್ ನಲ್ಲೂ ಫೈಟ್ ನಲ್ಲೂ ರೀಲ್ ನಲ್ಲೂ ರಿಯಲ್ ನಲ್ಲೂ ಒನ್ ಅಂಡ್ ಓನ್ಲಿ ಬಾಸ್ ಅಂದ್ರೆ ಅದು ನಮ್ಮ ಡಿಬಾಸ್ ಅನ್ನೋದು ಪ್ರತಿ ಡಚ್ಚು ಅಭಿಮಾನಿಗಳ ಕೂಗು. ಅದು ನಿಜ ಕೂಡ ಹೌದು.

ಡಿ ಬಾಸ್ ದರ್ಶನ್ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ಬುದ್ದಿವಂತ.ಕಾಂ ಸಬ್ ಸ್ಕ್ರೈಬ್ ಮಾಡಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular