5ಜಿ ಬಂದರೆ 4ಜಿ ಮೊಬೈಲ್ ಕಥೆ ಏನಾಗುತ್ತೆ ?

0

ಭಾರತಕ್ಕೆ ಇನ್ನೇನು ಕೆಲ ದಿನಗಳಲ್ಲೇ 5 ಜಿ ಲಗ್ಗೆ ಇಡಲಿದೆ. ಅಂದಾಗೆ ಈ 5 ಜಿ ಬಂದರೆ 4ಜಿ ಮೊಬೈಲ್ಗಳ ಕಥೆ ಏನಾಗುತ್ತೆ ? ಮೊಬೈಲ್ ಅಪ್ಡೇಟ್ ಮಾಡ್ಬೇಕಾ ಅಥವಾ ಮೊಬೈಲನ್ನೇ ಬದಲಿಸಿಕೊಳ್ಳಬೇಕಾ ? ಹೇಗೆ ಕಾರ್ಯನಿರ್ವಹಿಸಲಿದೆ 5ಜಿ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಭೂಮಿ.. ನಮಗೆ ಗೊತ್ತಿರುವಂತೆ ಕೋಟ್ಯಾನುಕೋಟಿ ಜೀವ ಸಂಕುಲಗಳನ್ನ ಹೊಂದಿರೋ ಏಕೈಕ ಗ್ರಹ .ಪ್ರಪಂಚದ ವಿವಿಧ ಭಾಗಗಳ ಜನರೂ, ಸಂಸ್ಥೆಗಳು, ಸರ್ಕಾರಗಳು ಪರಸ್ಪರ ಸಂಪರ್ಕ ವೃದ್ದಿಗೆ ಟೆಲಿಗ್ರಾಮ್, ಅಂಚೆಗಳನ್ನೇ ಅವಲಂಭಿಸಲಾಗಿತ್ತು. ಕಾಲ ಬದಲಾದಂತೆ ತಂತ್ರಜ್ಞಾನ ಅಭಿವೃದ್ದಿ ಕಂಡು ಪತ್ರ ವ್ಯವಹಾರಗಳು ಬಹುತೇಕ ಅಂತ್ಯದ ಅಂಚಿಗೆ ಸರಿದಿವೆ. ಈಗೇನಿದ್ದರೂ ಮೊಬೈಲ್ ಯುಗ.

ತಂತ್ರಜ್ಞಾನಕ್ಕೆ ತಕ್ಕಂತೆ ತರಂಗಾಂತರದ ವೇಗ ಬದಲಾಗುತ್ತಿದೆ. ತರಂಗಾಂತರ ವೇಗದ ಜೊತೆ ಜೊತೆಗೆ ಜನರ ಬದುಕಿನ ಶೈಲಿಯ ವೇಗವೂ ಕೂಡಾ ಅಷ್ಟೇ ಸ್ಪೀಡಾಗಿದೆ. ದಿನನಿತ್ಯದ ಜೀವನದ ಮೇಲೆ ಇವುಗಳ ಪ್ರಭಾವ ಅಪಾರವಾಗಿದೆ. ಇದೀಗ 5ಜಿ ಸೇವೆ ಆರಂಭಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು ವರ್ಷಾಂತ್ಯ ಅಥವಾ ಹೊಸ ವರ್ಷದ ಆರಂಭದಲ್ಲಿ 5ಜಿ ತರಂಗಗುಚ್ಚಗಳ ಹಾರಾಜು ಪ್ರಕ್ರಿಯೆ ನಡೆಸಲಿದೆ.

ಒಂದಿಷ್ಟು ಇತಿಹಾಸದ ಪುಟಗಳನ್ನ ತಿರುವಿದ್ರೆ ಮಾರ್ಚ್ 10 1876ರಲ್ಲಿ ಮೊದಲ ಯಶಸ್ವಿ ದೂರವಾಣಿಯನ್ನ ಅಲೆಗ್ಸಾಂಡರ್ ಗ್ರಾಹಂಬೆಲ್ ಕಂಡು ಹಿಡಿದರು. ನಂತ್ರ ಬೆಲ್ ಅನ್ನೋ ದೂರವಾಣಿ ಸಂಸ್ಥೆ 1924ರಲ್ಲಿಯೇ ಪೊಲೀಸ್ರು ಬಳಸುವುದಕ್ಕಾಗಿ ಮೊಬೈಲ್ ಯಂತ್ರಗಳನ್ನ ತಯಾರಿಸೋ ಯತ್ನ ಮಾಡಿತ್ತು. 1946ರಲ್ಲಿ ಅಮೇರಿಕಾದ ಮಿಸ್ಸೋರಿ ರಾಜ್ಯದಲ್ಲಿ ಮೊಬೈಲ್ ದೂರವಾಣಿ ಸೇವೆ ಆರಂಭವಾದರೂ ಸಹ ಜನಪ್ರಿಯವಾಗಲಿಲ್ಲ.

ಮೊಟ್ಟ ಮೊದಲ ಬಾರಿಗೆ ಮಾತಾನಾಡೋ ಮೊಬೈಲನ್ನ ಅಭಿವೃದ್ದಿಗೊಳಿಸಿದ್ದು ಮೊಟೋರೋಲಾ ಕಂಪನಿ. ಅಲ್ಲದೆ ಅದನ್ನ ಮೊಟ್ಟ ಮೊದಲಿಗೆ ಬಳಸಿ ಕಾಲ್ ಮಾಡಿದ್ದು ಕೂಡ ಮೋಟೋರೋಲಾ ಸಂಶೋಧಕ ಮಾರ್ಟಿನ್ ಕೂಪರ್. ಇದು ಜಗತ್ತಿನ ಮೊಟ್ಟ ಮೊದಲ ಮೊಬೈಲ್ ಕರೆ. 1980ರ ದಶಕದ ನಂತ್ರವಷ್ಟೆ ಮೊಬೈಲ್ ಫೋನ್ ಜನಪ್ರಿಯಗೊಂಡಿತ್ತು.

ತಂತ್ರಜ್ಞಾನದ ವೇಗವೂ ಬೆಳೆಯುತ್ತಲೇ ಇದೆ. 2ಜಿ 3ಜಿ ಮತ್ತು 4ಜಿ ಆದ್ರೀಗ 4ಜಿ ಕೂಡಾ ಹಳೆಯದಾಯ್ತು. ಈಗ 5ಜಿ ಹವಾ ಶುರುವಾಗ್ಗತ್ತಿದೆ. ಕೇಂದ್ರ ಸರ್ಕಾರ ಇನ್ನೆರಡು ತಿಂಗಳಲ್ಲಿ 5ಜಿ ತರಂಗಾಂತರ ಹರಾಜು ಪ್ರಕ್ರಿಯೆ ನಡೆಸಲಿದೆ. ಖಾಸಗಿ ಕಂಪನಿಗಳು ಇದಕ್ಕಾಗಿ ತುದಿಗಾಲಲ್ಲಿ ಕಾದು ನಿಂತಿವೆ. 5ಜಿಗೆ ಸಂಬಂಧಿಸಿದಂತೆ ಅಂದಾಜು 8,293 ಮೆಗಾಹಟ್ಜ್ರ್ ತರಂಗಗಳನ್ನು ಕೇಂದ್ರ ಸರ್ಕಾರ ಹರಾಜು ಮಾಡಲಿದೆ. ಇದ್ದರಿಂದ ಕೇಂದ್ರ ಸರ್ಕಾರವು ಅಂದಾಜು 5.86 ಲಕ್ಷ ಕೋಟಿ. ರೂ. ಗಳಷ್ಟು ಭಾರಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ.

5ಜಿ ತರಂಗಾಂತರಗಳಿಂದ ಸಂಪರ್ಕ ಹಾಗೂ ಸಂವಹನ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ವೇಗ ಸಾಧ್ಯವಾಗಲಿದೆ. 4ಜಿಗೆ ಹೋಲಿಸಿದಲ್ಲಿ ಇದರ ವೇಗ 20 ಜಿಬಿಪಿಎಸ್. ಗ್ರಾಹಕರು ಕಡಿಮೆ ಅವಧಿಯಲ್ಲಿ ಹೆಚ್ಚಿನ ಡೇಟಾ ಪಡೆಯಬಹುದು. ಜೊತೆಗೆ ನೆಟ್ ವರ್ಕ್ ಸಮಸ್ಯೆಯೂ ಸರಿಹೋಗಬಹುದು. ಪ್ರಯಾಣದ ಸಮಯದಲ್ಲೂ ನಿರಂತರ ಸಂಪರ್ಕ ಸಾಧ್ಯವಾಗುತ್ತೇ. ಒಂದು ಹಲ್ಟ್ರ ಹೆಚ್ ಡಿ ಮೂವಿ 10 ಸೆಕೆಂಡ್ ನಲ್ಲಿ ಡೌನ್ ಲೋಡ್ ಆಗಲಿದೆ ಅಂದ್ರೆ ಸ್ಪೀಡ್ ಎಷ್ಟಿರಬಹುದು ಅಂತಾ ನೀವೇ ಊಹಿಸಿ.

5ಜಿ ನಲ್ಲಿ ಮಿಲಿಮೀಟರ್ ಅಲೆಗಳ ಬಳಕೆ ಮಾಡಲು ಉದ್ದೇಶಿಸಲಾಗಿದೆ. ಇವು ಮೈಕ್ರೋ ಅಲೆಗಳಿಗಿಂತ ಚಿಕ್ಕದಾಗಿದ್ದು ಇದರಲ್ಲಿರುವ ಕಣಗಳು ಅತ್ಯಂತ ಸೂಕ್ಷ್ಮವಾಗಿದ್ದು, ಕಡಿಮೆ ಅವಕಾಶ ಬಳಸಿಕೊಳ್ಳತ್ತವೆ. ಈ ಸಂಪರ್ಕ ಸಾಧನದಲ್ಲಿರುವ ಅಂಟೆನಾ ಈ ಮೊದಲಿನ ಗಾತ್ರ ಕ್ಕಿಂತಲೂ ಚಿಕ್ಕದಾಗಿರಲಿದೆ. ಆದರೆ ಇದು ಹಲವು ಮಿತಿಯನ್ನೂ ಹೊಂದಿದೆ. ಮಿಲಿಮೀಟರ್ ಅಲೆ ಹೆಚ್ಚು ದೂರ ಕ್ರಮಿಸದ ಕಾರಣ ದಪ್ಪ ಗಾಜು, ಅಥವಾ ಮರಗಳು ಇದಕ್ಕೆ ಅಡ್ಡಿಯಾಗುತ್ತವೆ ಎನ್ನಲಾಗಿದೆ.

5ಜಿ ಬಳಕೆಯಲ್ಲಿರುವ ರಾಷ್ಟ್ರಗಳು
ವಿಶ್ವದ ಹಲವು ರಾಷ್ಟ್ರಗಳಲ್ಲಿ 5ಜಿ ಸೇವೆ ಈಗಾಗಲೇ ಬಳಕೆಯಲ್ಲಿದೆ. 5ಜಿಯನ್ನು ಮೊದಲ ಬಾರಿಗೆ ಬಳಸಿದ ರಾಷ್ಟ್ರ ದಕ್ಷಿಣ ಕೊರಿಯಾ. ಪ್ರಸ್ತುತ 10 ಲಕ್ಷಕ್ಕೂಹೆಚ್ಚು 5ಜಿ ಗ್ರಾಹಕರನ್ನುಆ ದೇಶ ಹೊಂದಿದೆ. ಆಸ್ಟ್ರೇಲಿಯಾ, ಫಿನ್ಲೆಂಡ್, ಜರ್ಮನಿ, ಅಮೆರಿಕ, ಐರ್ಲೆಂಡ್, ಮೊನಾಕ್ಕೊ, ರಷ್ಯಾ, ರುಮೇನಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮೊದಲಾದ ರಾಷ್ಟ್ರಗಳು ಈಗಾಗಲೇ 5ಜಿ ಸೇವೆಯನ್ನು ಒದಗಿಸುತ್ತಿವೆ.

ಈಗಿರುವ ಮೊಬೈಲ್ ಗಳ ಗತಿಯೇನು ?
ಈಗಾಗಲೇ ಹಲವು ಕಂಪನಿಗಳು 5ಜಿ ಹೆಸರಲ್ಲಿ ಹೊಸ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಆದರೆ, ಪ್ರಸ್ತುತ ಬಳಕೆಯಲ್ಲಿರುವ ಸ್ಮಾರ್ಟಫೋನ್ಗಳು 5ಜಿಗೆ ಅಪ್ಗ್ರೇಡ್ ಆಗುತ್ತೇವೆಯೇ ಎಂಬ ಪ್ರಶ್ನೆ ಎಲ್ಲರದ್ದು. ಹಲವು ಕಂಪನಿಗಳು ತಮ್ಮ ಮೊಬೈಲ್ಗಳನ್ನುಅಪ್ ಗ್ರೇಡ್ ಮಾಡಲು ಶ್ರಮಿಸುತ್ತಿವೆ. ಸಮಾಧಾನಕರ ಸಂಗತಿ ಅಂದ್ರೆ 5ಜಿ ತಂತ್ರಜ್ಞಾನ 4ಜಿ ಅನ್ನು ಆಧರಿಸಿಯೇ ರೂಪಿಸಲಾಗಿದೆ. ಇವುಗಳ ನಡುವಿನ ವ್ಯತ್ಯಾಸ 3ಜಿ ಹಾಗೂ 4ಜಿ ನಂತಿಲ್ಲ. ಹೀಗಾಗಿ ಬಹುಕಾಲದವರೆಗೆ 4ಜಿ ಫೋನ್ ಗಳನ್ನು ಬಳಸಲು ಯಾವುದೇ ತೊಂದರೆ ಆಗೋದಿಲ್ಲ ಅನ್ನೋದು ತಜ್ಞರ ಅಭಿಮತ

ಭಾರತದಲ್ಲಿ ತಂತ್ರಜ್ಞಾನ ಪರೀಕ್ಷೆ
ಭಾರತಿ ಏರ್ಟೆಲ್ ಸಂಸ್ಥೆ ಗುರು ಗ್ರಾಮದ ಮಾನೇಸರ್ ನಲ್ಲಿರೋ ಪ್ರಯೋಗಲಾಯದಲ್ಲಿ ಚೀನಾದ ಹುವೈ ಮೂಲಸೌಕರ್ಯ ಬಳಸಿ 5ಜಿ ತಂತ್ರಜ್ಞಾನದ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಯಲ್ಲಿ ಇಂಟರ್ನೆಟ್ ಡೌನ್ ಲೋಡ್ ವೇಗ ಸೆಕೆಂಡಿಗೆ 3 ಗಿಗಾಬೈಟ್ ತಲುಪಿದೆ. ಆದ್ರೆ ಹುವೈಗೆ ಸರ್ಕಾರ ಅನುಮತಿ ನಿರಾಕರಿಸುವ ಭೀತಿ ಹಿನ್ನೆಲೆಯಲ್ಲಿ ಬೇರೆ ಕಂಪನಿಯ ಮೂಲ ಸೌಕರ್ಯ ಬಳಸುವುದಾಗಿ ಭಾರತಿ ಏರ್ಟೆಲ್ ಹೇಳಿದೆ. ಆದ್ರೆ ಹುವೈಗೆ ನಿಷೇಧ ಹೇರದಂತೆ ಭಾರತದ ಮೇಲೆ ಚೀನಾ ಒತ್ತಡ ಹೇರಿದೆ ಮೊನ್ನೆ ಚೀನಾ ಅಧ್ಯಕ್ಷರು ಭಾರತಕ್ಕ ಬಂದಿದ್ದಾಗಲೂ 5ಜಿ ತಂತ್ರಜ್ಞಾನದ ಕುರಿತು ಒಂದು ಸುತ್ತಿನ ಮಾತುಕತೆ ಆಡಿದ್ದಾರೆ…

ನೂರು ಪಟ್ಟು ವೇಗ ಹೆಚ್ಚಲಿದೆ..
5ಜಿ ನೆಟ್ವರ್ಕ್ ತಂತ್ರಜ್ಞಾನ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬಂದರೆ ಸಂವಹನ ವೇಗ 4ಜಿ ಗಿಂತ ನೂರು ಪಟ್ಟು ಹೆಚ್ಚಾಗಲಿದೆ. 2020ದಲ್ಲೇ 5ಜಿ ಬಳಸುತ್ತಿರೋ ಜಗ್ಗತ್ತಿನ ಮುಂದುವರಿದ ದೇಶಗಳ ಸಾಲಿಗೆ ಭಾರತ ಸೇರೋ ಸಾಧ್ಯತೆ ಇದೆ.

Leave A Reply

Your email address will not be published.