ಸ್ಯಾಂಡಲ್ ವುಡ್ ಸಿನಿಮಾಗಳಿಗೆ ಪರಭಾಷೆಯ ನಟಿಯರು, ಗಾಯಕರು, ನಿರ್ದೇಶರು, ಸಂಗೀತ ನಿರ್ದೇಶಕರನ್ನು ಕರೆ ತರೋದು ಹೊಸದೇನಲ್ಲಾ. ಆದರೆ ಮಲಯಾಲಂ ಚಿತ್ರವೊಂದಕ್ಕೆ ಕನ್ನಡದ ಸಂಗೀತ ಮಾಂತ್ರಿಕನೊಬ್ಬ ಸಂಗೀತ ನಿರ್ದೇಶನ ಮಾಡ್ತಿದ್ದಾರೆ. ಅವರು ಬೇರಾರೂ ಅಲ್ಲ ರವಿ ಬಸ್ರೂರು.

ರವಿ ಬಸ್ರೂರು.. ಈ ಹೆಸರು ಕೇಳಿದ್ರೆ ಸಾಕು ಎಲ್ಲರ ಕಿವಿಯಲ್ಲೂ ಕೆಜಿಎಫ್ ಚಾಪ್ಟರ್ 1ರ ಸಂಗೀತ ಝೇಂಕರಿಸದೇ ಇರೋದಕ್ಕೆ ಸಾಧ್ಯಾನೇ ಇಲ್ಲಾ. ಕೆಜಿಎಫ್ ಸಿನಿಮಾಕ್ಕೆ ವಿಭಿನ್ನ ಸಂಗೀತವನ್ನು ನೀಡಿದವರು ರವಿ ಬಸ್ರೂರು. ಇದೀಗ ಮಲಯಾಲಂನ ಖ್ಯಾತ ನಿರ್ದೇಶಕ ಡಾ.ಪ್ರಗಬಲ್ ಭಾರತೀಯ ಸಿನಿಮಾರಂಗದಲ್ಲೇ ವಿನೂತನ ಪ್ರಯತ್ನ ಮಾಡೋದಕ್ಕೆ ಹೊರಟಿರೋ ಮಾಲಿವುಡ್ ಮೂವಿ ಮಡ್ಡಿಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಲಿದ್ದಾರೆ. ಕೆಜಿಎಫ್ ಸಿನಿಮಾ ನಂತರ ಹಲವು ಭಾಷೆಗಳಿಂದ ಆಫರ್ ಗಳು ಬರ್ತಾ ಇದ್ರೂ ಯಾವುದ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಇದೀಗ ಹಳ್ಳಿ ಸೊಗಡಿನಲ್ಲಿ ಆಫ್ ರೋಡ್ ಮಡ್ ರೇಸ್ ಕುರಿತು ಕಥೆಯನ್ನು ಹೊಂದಿರೋ ಮಡ್ಡಿ ಸಿನಿಮಾ ಚಿತ್ರರಸಿಕರಲ್ಲಿ ಕುತೂಹಲವನ್ನು ಹುಟ್ಟು ಹಾಕಿದೆ.

ಕರ್ವ, ಮುಫ್ತಿ, ಅಂಜನಿಪುತ್ರ, ಉಗ್ರಂ, ಬಜಾರ್, ಗಿರ್ಮಿಟ್, ಸಂಹಾರ ಸಿನಿಮಾಗಳಿಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅದರಲ್ಲೂ ಉಗ್ರಂ ಹಾಗೂ ಕೆಜಿಎಫ್ ಚಾಪ್ಟರ್ 1 ಸಿನಿಮಾ ರವಿ ಬಸ್ರೂರು ವೃತ್ತಿ ಜೀವನಕ್ಕೆ ಹೊಸ ತಿರುವನ್ನು ಕೊಟ್ಟ ಸಿನಿಮಾ. ಕೆಜಿಎಫ್ ಸಿನಿಮಾ ತೆರೆ ಕಂಡ ಮೇಲಂತೂ ಕುಂದಾಪುರದ ಕೀರ್ತಿಯನ್ನು ರವಿ ಬಸ್ರೂರು ದೇಶದಾದ್ಯಂತ ಎತ್ತಿ ಹಿಡಿದಿದ್ದಾರೆ. ಕೆಜಿಎಫ್ ಚಾಫ್ಟರ್ -2 ಸಿನಿಮಾಕ್ಕೂ ಸಂಗೀತ ನಿರ್ದೇಶನ ಮಾಡಿರೋ ರವಿ ಬಸ್ರೂರು, ಇದೀಗ ಮೊದಲ ಬಾರಿಗೆ ಮಲಯಾಲಂ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಚಿತ್ರದ ಟೀಜರ್ ಈಗಾಗಲೇ ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಈ ಕುರಿತು ಸಂತಸವನ್ನು ಹಂಚಿಕೊಂಡಿರೋ ರವಿ ಬಸ್ರೂರು ಮಡ್ಡಿ ಸಿನಿಮಾಕ್ಕೆ ಶುಭಾಶಯವನ್ನು ಕೋರಿದ್ದಾರೆ. ಕನ್ನಡ ಚಿತ್ರರಂಗದಲ್ಲಿಯೇ ಸಂಗೀತ ನಿರ್ದೇಶಕನೊಬ್ಬ ಪರಭಾಷಾ ಚಿತ್ರಗಳಿಗೆ ಮ್ಯೂಸಿಕ್ ನೀಡ್ತಿರೋದು ಕನ್ನಡಗರಿಗೆ ಹೆಮ್ಮೆಯೇ ಸರಿ.