ಸ್ಯಾಂಡಲ್ ವುಡ್ ನಲ್ಲಿ ಸಾವಿರಾರು ಚಿತ್ರಗಳು ವೈರೈಟಿ ವೈರೈಟಿ ಟೈಟಲ್ ನಲ್ಲಿ ತೆರೆ ಕಂಡಿವೆ.ಆದರೆ ಕನ್ನಡಿಗ ಅನ್ನೋ ಟೈಟಲ್ ಮಾತ್ರ ಇನ್ನೂ ಯಾರಿಗೂ ಸಿಕ್ಕಿರಲಿಲ್ಲ.

ಇದೀಗ ಅಂತಹದೊಂದು ಮನಸೆಳೆಯುವ ಟೈಟಲ್ ಜೊತೆ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತೆ ತೆರೆಗೆ ಬರ್ತಿದ್ದು ಬಹುವರ್ಷಗಳ ಬಳಿಕ ಮತ್ತೆ ದ್ವಿಪಾತ್ರದಲ್ಲಿ ಮಿಂಚಲಿದ್ದಾರೆ.
ಅಪ್ಪಟ ಲವ್ವರ್ ಬಾಯ್,ರಸಿಕತೆ ಇಮೇಜ್ ಗಳ ಚಿತ್ರಗಳಲ್ಲೇ ಕಾಣಿಸಿಕೊಳ್ತಿದ್ದ ಕ್ರೇಜಿಸ್ಟಾರ್ ಇದೇ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಐತಿಹಾಸಿಕ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಲಿಪಿಕಾರನಾಗಿ ಕ್ರೇಜಿಸ್ಟಾರ್ ನಟಿಸಲಿದ್ದಾರೆ.

ಕೇವಲ ಲಿಪಿಕಾರ ಮಾತ್ರವಲ್ಲದೇ, ಮತ್ತೊಂದು ಪಾತ್ರದಲ್ಲೂ ರವಿಚಂದ್ರನ್ ನಟಿಸಲಿದ್ದು, ಈ ಎರಡು ಪಾತ್ರಗಳ ಲುಕ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮೆಚ್ಚುಗೆ ಗೆ ಪಾತ್ರವಾಗ್ತಿದೆ.

ಈಗಾಗಲೇ ಕನ್ನಡಿಗ ಶೂಟಿಂಗ್ ಸಾಗಿದ್ದು, ಹೊಸವರ್ಷದಲ್ಲಿ ಸಿನಿಮಾ ತೆರೆಗೆ ಬರಲಿದೆ. ಲವ್ , ಕ್ರೈಂ ಸಿನಿಮಾಗಳ ಭರಾಟೆ ನಡುವೆ ಈ ಭಾರಿ ಕ್ರೇಜಿಸ್ಟಾರ್ ಐತಿಹಾಸಿಕ ಕತೆಯೊಂದನ್ನು ತೆರೆ ಮೇಲೆ ತರಲು ಹೊರಟಿದ್ದು ಕಥೆ ಬಗ್ಗೆ ಕುತೂಹಲ ಹೆಚ್ಚಿದೆ.
ರವಿಚಂದ್ರನ್ ಗೆ ಪಾವನಾ ಗೌಡ ನಾಯಕಿಯಾಗಿದ್ದು, ಸಧ್ಯ ರಾಜಕೀಯದಲ್ಲಿ ಬ್ಯುಸಿಯಾಗಿರೋ ಸಂಸದೆ ಸುಮಲತಾ ಅಂಬರೀಶ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ 30 ವರ್ಷಗಳಿಂದ ಯಾರಿಗೂ ಕೊಡದೇ ಕಾದಿಟ್ಟುಕೊಂಡ ಅಪರೂಪದ ಟೈಟಲ್ ಜೊತೆಕ್ರೇಜಿಸ್ಟಾರ್ ಮತ್ತೆ ನಟನೆಗೆ ಇಳಿದಿದ್ದು, ಚಿತ್ರದ ಮೇಲೆ ನೀರಿಕ್ಷೆ ಹೆಚ್ಚಿದೆ.