ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ (Shri Balaji Photo Studio) ಸಿನಿಮಾ ಜನವರಿ 6ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದ್ದು, ಸುಮಾರು 100 ಸಿನಿಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾವು ಛಾಯಾಗ್ರಾಹಕರ ಬದುಕಿನ ಬಗ್ಗೆ ಬೆಳಕು ಚೆಲ್ಲುವ ಕಥಾ ಹಂದರ ಹೊಂದಿರುವ ಸಿನಿಮಾ. ಈ ಸಿನಿಮಾದಲ್ಲಿ ಹಾಸ್ಯದ ಜೊತೆಗೆ ಕೌಟುಂಬಿಕ ವಿಚಾರಗಳನ್ನು ಒಳಗೊಂಡಿದೆ ಎಂದು ಸಿನಿಮಾದ ನಿರ್ದೇಶಕ, ನಟ, ಅಗ್ನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ರಾಜೇಶ್ ಧ್ರುವ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೋಟೋಗ್ರಾಫರ್ ಗಳ ಕಾಯಕ, ನೋವು, ಅವರದೇ ಆದ ವ್ಯಥೆಗಳ ಕುರಿತು ಈ ಸಿನಿಮಾದ ಮೂಲಕ ತೆರೆದಿಡಲಾಗಿದೆ. ಹಳ್ಳಿಯಲ್ಲಿ ಇದ್ದರೆ ಜೀವನದಲ್ಲಿ ಮುಂದೆ ಬರಲು ಆಗದು. ಅದೇ ನಗರಕ್ಕೆ ಹೋದರೆ ಕೈತುಂಬಾ ಹಣ ದುಡಿಯಬಹುದು. ಉತ್ತಮ ಸಾಧನೆ ಮಾಡಬಹುದು ಎಂಬ ಕನಸು ಹೊತ್ತ ಫೋಟೋಗ್ರಾಫರ್ ಕುರಿತಾದ ಸಿನಿಮಾವಾಗಿದೆ.
ಆತ ಕೊನೆಗೆ ಬದುಕಿನ ಯುದ್ಧದಲ್ಲಿ ಗೆಲ್ಲುತ್ತಾನೋ ಅಥವಾ ಸೋಲುತ್ತಾನೋ ಎಂಬುದು ಸಸ್ಪೆನ್ಸ್ ಎಂದು ಹೇಳಿದರು. ಹೊಸ ವರ್ಷದಲ್ಲಿ ತೆರೆ ಕಾಣುತ್ತಿರುವ ಈ ಸಿನಿಮಾದಲ್ಲಿ ನಟಿಸಿರುವವರೆಲ್ಲರೂ ಹೊಸ ಕಲಾವಿದರು ಆಗಿದ್ದಾರೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದ್ದು, ಉತ್ತರ ಕನ್ನಡ ಭಾಷೆಯನ್ನು ಮೊದಲ ಬಾರಿಗೆ ಬಳಸಿಕೊಳ್ಳಲಾಗಿದೆ. ಸಿನಿಮಾದ ‘ಪುಕ್ಸಟ್ಟೆ’ ಹಾಡು ಈಗಾಗಲೇ ಟ್ರೆಂಡ್ ಸೃಷ್ಟಿಸಿದೆ. ಸಿನಿಮಾದಲ್ಲಿ ಒಟ್ಟು 5 ಹಾಡುಗಳಿದ್ದು, ಸಂಗೀತ ನಿರ್ದೇಶನ ಶ್ರೀರಾಮ್ ಗಂಧರ್ವ ನೀಡಿದ್ದಾರೆ. ಹಾಡುಗಳಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Siddheshwar Sri : ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ನಟ ಧನಂಜಯ ಸಂತಾಪ
ಇದನ್ನೂ ಓದಿ : Veera Kambal movie : “ವೀರ ಕಂಬಳ” ಸಿನಿಮಾಕ್ಕೆ ಬಣ್ಣ ಹಚ್ಚಿದ ಡಾ. ವೀರೇಂದ್ರ ಹೆಗ್ಗಡೆ : ಪೋಟೋ ಸಖತ್ ವೈರಲ್
ತಾರಾಗಣದಲ್ಲಿ ಪ್ರಮುಖ ಪಾತ್ರದಲ್ಲಿ ಸಂಪತ್ ಜಯರಾಮ್, ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಶುಭಲಕ್ಷ್ಮೀ ಸೇರಿದದಂತೆ ಇತರು ನಟಿಸಿದ್ದಾರೆ. ದಾವಣಗೆರೆ ಸಿನಿ ಸ್ಟುಡಿಯೋದ ಮನೋಜ್ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಸಿನಿಮಾ ವೀಕ್ಷಿಸುವ ಮೂಲಕ ಹೊಸಬರಿಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು. ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಂಪತ್ ಜಯರಾಂ ಮಾತನಾಡಿ, ಹೊಸ ವರ್ಷಕ್ಕೆ ಹೊಸ ತಂಡದೊಂದಿಗೆ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ತೆರೆಕಾಣುತ್ತಿದೆ. ಎಲ್ಲರೂ ಸಿನಿಮಾವನ್ನು ಸಿನಿಮಂದಿರದಲ್ಲಿ ವೀಕ್ಷಿಸಿ ಹರಿಸಿ, ಹಾರೈಸಿ ಎಂದು ಮನವಿ ಮಾಡಿದ್ದಾರೆ.
A movie about the life of a photographer “Shri Balaji Photo Studio” will hit the screens soon