High tech bus stand: ರಾಜ್ಯದ ಮೊದಲ ಹೈಟೆಕ್ ಬಸ್ ನಿಲ್ದಾಣ ಸುರತ್ಕಲ್ ನಲ್ಲಿ ಪ್ರಾರಂಭ

ಮಂಗಳೂರು: (High tech bus stand) ರಾಜ್ಯದಲ್ಲೇ ಮೊದಲ ಹೈಟೆಕ್ ಬಸ್ ನಿಲ್ದಾಣ ನಮ್ಮ ಮಂಗಳೂರಿನ ಸುರತ್ಕಲ್‌ನಲ್ಲಿ ನಿರ್ಮಾಣವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೆಚ್ಚು ಭದ್ರತೆಯ ಸಾಧನಗಳನ್ನು ಬಳಸುವುದರ ಮೂಲಕ ಈ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ.
ಸುರತ್ಕಲ್ ನ ಗೋವಿಂದ ದಾಸ್ ಕಾಲೇಜು ಮುಂಭಾಗ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ನಿರ್ಮಾಣವಾದ ಹೈಟೆಕ್ ಬಸ್ ನಿಲ್ದಾಣ (High tech bus stand) ಇದಾಗಿದ್ದು, ಮಹಿಳೆಯರ ಸುರಕ್ಷತೆ ಎಸ್‌ಒಎಸ್ ಅಳವಡಿಕೆ ಮಾಡಲಾಗಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುರತ್ಕಲ್ ಬಸ್ ನಿಲ್ದಾಣ ಇದಾಗಿದ್ದು, ಸ್ಮಾರ್ಟ್ ಮತ್ತು ಡಿಜಿಟಲ್ ಸುರತ್ಕಲ್ ಧ್ಯೇಯದಡಿ ಇದನ್ನು ನಿರ್ಮಾಣ ಮಾಡಲಾಗಿದೆ.
ಇದರಲ್ಲಿ ಮಹಿಳೆಯರ ಸುರಕ್ಷತೆಗಾಗಿ ಎಸ್‌ಒಎಸ್ ಅಳವಡಿಕೆ ಮಾಡಲಾಗಿದ್ದು, ಅಪಾಯದ ಸಂಧರ್ಭದಲ್ಲಿ ಮಹಿಳೆಯರು ಎಸ್‌ಒಎಸ್ ಬಟನ್ ಒತ್ತಿದರೆ ಪೊಲೀಸರಿಗೆ, ಪಾಲಿಕೆಯ ಅಧಿಕಾರಿಗಳಿಗೆ ಆಟೋಮ್ಯಾಟಿಕ್ ಕಾಲ್ ಹೋಗಲಿದೆ. ಅಲ್ಲದೇ ಈ ಬಸ್ ನಿಲ್ದಾಣದಲ್ಲಿ ಮೂರು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸಿಸಿ ಕ್ಯಾಮೆರಾಗಳ ನೇರ ದೃಶ್ಯ ಪೊಲೀಸ್ ಠಾಣೆ, ಪಾಲಿಕೆಯ ಕಛೇರಿ ಮತ್ತು ಪೊಲೀಸ್ ಅಧಿಕಾರಿಗಳ ಮೊಬೈಲ್‌ಗೆ ಹೋಗಲಿದೆ.
ಇವಷ್ಟೇ ಅಲ್ಲದೇ ಈ ಹೈಟೆಕ್ ಬಸ್ ನಿಲ್ದಾಣ(High tech bus stand)ದಲ್ಲಿ ಮೂರು ಸಿಸಿಕ್ಯಾಮೆರಾ ಗಳು, ಕುಡಿಯುವ ನೀರು, ಎಫ್‌ಎಂ ರೇಡಿಯೋ, ಇನ್ವಾಟರ್ ವ್ಯವಸ್ಥೆ ಹಾಗೂ ಉಚಿತ ಅನ್ ಲಿಮಿಟೆಡ್ ವೈಫೈ ಸೇವೆಯನ್ನು ಕೂಡ ಕಲ್ಪಿಸಲಾಗಿದೆ. ಅಲ್ಲದೇ ಪ್ರಯಾಣಿಕರ ಅನುಕೂಲತೆಗಾಗಿ ಫ್ಯಾನ್, ಮೊಬೈಲ್ ಹಾಗೂ ಲ್ಯಾಪ್ ಟಾಪ್ ಚಾರ್ಜಿಂಗ್ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನೂ ಕೂಡ ಅಳವಡಿಸಲಾಗಿದೆ.
ವಿಶೇಷವಾಗಿ ಟಚ್ ಸ್ಕ್ರೀನ್ ಡಿಸ್ ಪ್ಲೇ ಅಳವಡಿಸಲಾಗಿದ್ದು, ಈ ಡಿಸ್ ಪ್ಲೇನಲ್ಲಿ ಬಸ್‌ಗಳ ಸಮಯ, ಬಸ್ ಬರುತ್ತಿರುವ ನಿರ್ದಿಷ್ಟ ಸ್ಥಳ, ಮತ್ತು ಸುತ್ತಮುತ್ತಲಿನ ಪ್ರವಾಸೋದ್ಯಮ ಸ್ಥಳಗಳ ಮಾಹಿತಿಯೂ ಇರಲಿದೆ. ಮತ್ತು ಐ ಲವ್ ಸುರತ್ಕಲ್ ಎಂಬ ಸೆಲ್ಫೀ ಪಾಯಿಂಟ್ ಕೂಡ ಇದೆ. ಇನ್ನು ಬಸ್ ನಿಲ್ದಾಣದ ಹಿಂಭಾಗ ಎಂಸಿಎಫ್ ಪ್ರಾಯೋಜಕತ್ವದ ಅಡಿಯಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣವಾಗಲಿದೆ ಹಾಗೂ ಈ ಬಸ್ ನಿಲ್ದಾಣದಲ್ಲಿ 12 ಚೇರ್‌ಗಳನ್ನು ಹಾಕಲಾಗಿದೆ.
ಇದನ್ನೂ ಓದಿ : Electricity price hike: ಮೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ ವಿದ್ಯುತ್ ಶಾಕ್: ಪ್ರತಿ ಯೂನಿಟ್ ಗೆ 1.38 ರೂ. ದರ ಏರಿಕೆ
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಈ ಹೈಟೆಕ್ ಬಸ್ ನಿಲ್ದಾಣದ ಉದ್ಘಾಟನೆ ಮಾಡಿದ್ದಾರೆ. ಇದರ ನಿರ್ವಹಣೆಗೆ ಓರ್ವ ಖಾಯಂ ಸಿಬ್ಬಂದಿಯನ್ನು ನೇಮಿಸಲಾಗಿದೆ.
The first hi-tech bus stand in the state has been constructed at Suratkal, Mangaluru. This bus stand has been constructed using the latest technology and high security equipment.


