ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ( Puneeth Raj Kumar ) ಇನ್ನಿಲ್ಲವಾಗಿ ತಿಂಗಳು ಕಳೆದಿದೆ. ಆದರೂ ಇನ್ನು ವಿಶ್ವದಾದ್ಯಂತ ಪುನೀತ್ ಗಾಗಿ ಅಭಿಮಾನಿಗಳ ಕಣ್ಣೀರಧಾರೆ ನಿಂತಿಲ್ಲ. ಈಮಧ್ಯೆ ಪುನೀತ್ ಸಾಮಾಜಿಕ ಕಾರ್ಯ, ಸಹಾಯಹಸ್ತ ನೀಡುವ ಸಂಗತಿ ಎಲ್ಲವೂ ಶ್ಲಾಘನೆಗೆ ಪಾತ್ರವಾಗಿದೆ. ಈ ಮಧ್ಯೆ ಪುನೀತ್ ನಿಧನದ ದಿನ ಪುನೀತ್ ( Appu Record on Google )ಹೆಸರು ಹಾಗೂ ಮಾಹಿತಿ ಹುಡುಕಾಟ (Google Puneeth Record) ಹೊಸ ದಾಖಲೆ ಬರೆದಿದೆ.
ಸಾಲು ಸಾಲು ಸಿನಿಮಾಗಳು, ಸಾಕ್ಷ್ಯಚಿತ್ರ ಬಿಡುಗಡೆ, ಟೂರಿಸಂ ವೆಬ್ ಸೈಟ್ ಲಾಂಚ್ ಹೀಗೆ ನೂರೆಂಟು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ಪುನೀತ್ ಧಿಡೀರ್ ಹೃದಯಾಘಾತದಿಂದ ಚಿರನಿದ್ರೆಗೆ ಜಾರಿದರು. ರಾಜ್ಯಕ್ಕೇ ಹೃದಯಾಘಾತವಾದಂತೆ ಅಪ್ಪಳಿಸಿದ ಸುದ್ದಿಯಿಂದ ಲಕ್ಷಾಂತರ ಅಭಿಮಾನಿಗಳು ಅಕ್ಷರಷಃ ಕಣ್ಣೀರಾದರು. ಅಕ್ಟೋಬರ್ ೨೯ ರಂದು ಪುನೀತ್ ನಿಧನರಾದಾಗ ರಾಜ್ಯವೇ ಶಾಕ್ ಗೆ ಒಳಗಾಗಿತ್ತು. ಲಕ್ಷಾಂತರ ಅಭಿಮಾನಿಗಳು ನಗರಕ್ಕೆ ಸದ್ದಿಲ್ಲದೇ ಬಂದು ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದುಕೊಂಡರು.
ಪುನೀತ್ ರಾಜ್ ಕುಮಾರ್ ನಿಧನರಾದಾಗಲೂ ಅವರ ಹೆಸರು ಹೊಸ ದಾಖಲೆ ಬರೆದಿದೆ. ಹೌದು ಪುನೀತ್ ರಾಜ್ ಕುಮಾರ್ ನಿಧನರಾದ ದಿನ ಅವರ ಹೆಸರಿನಲ್ಲಿ ನಡೆದ ಗೂಗಲ್ ಹುಡುಕಾಟ ಹೊಸ ದಾಖಲೆ ಬರೆದಿದೆ. ವಿಶ್ವದಾದ್ಯಂತ ಅಭಿಮಾನಿಗಳು ಹೊಂದಿರೋ ಪುನೀತ್ ರಾಜ್ ಕುಮಾರ್ ನಿಧನದ ವೇಳೆ ಎಲ್ಲರೂ ಪುನೀತ್ ಬಗೆಗಿನ ಮಾಹಿತಿಗಾಗಿ ಗೂಗಲ್ ಮೊರೆ ಹೋಗಿದ್ದಾರೆ. ಪುನೀತ್ ನಿಧನದ ದಿನ ಕೇವಲ 8 ಗಂಟೆಗಳಲ್ಲಿ 10 ಮಿಲಿಯನ್ ಜನರು ಪುನೀತ್ ಕುರಿತ ಮಾಹಿತಿಯನ್ನು ಹುಡುಕಾಡಿದ್ದಾರೆ.
ಆ ಮೂಲಕ 2021 ರಲ್ಲಿ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾ ನಟ ಎಂಬ ಖ್ಯಾತಿಗೆ ಪುನೀತ್ ರಾಜ್ ಕುಮಾರ್ ಪಾತ್ರ ರಾಗಿದ್ದಾರೆ. ಈ ವಿಚಾರವನ್ನು ಸ್ವತಃ ಗೂಗಲ್ ಖಚಿತಪಡಿಸಿದೆ. ಇದು ಪುನೀತ್ ಜನಪ್ರಿಯತೆಗೆ ಸಿಕ್ತಿರೋ ಸಾಕ್ಷಿ ಎನ್ನಬಹುದು. ಇನ್ನು ಸದ್ಯದಲ್ಲೇ ಪುನೀತ್ ಅಭಿಮಾನಿಗಳಿಗೆ ಇನ್ನೊಂದು ಸಿಹಿಸುದ್ದಿ ಕಾದಿದ್ದು ರಾಜ್ಯ ಸರ್ಕಾರ ಪುನೀತ್ ರಾಜ್ ಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಈಗಾಗಲೇ ಕರ್ನಾಟಕ ಸರ್ಕಾರ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ್ದು ಸದ್ಯದಲ್ಲೇ ಪ್ರಶಸ್ತಿ ಪ್ರದಾನ ಕೂಡ ನಡೆಯಲಿದೆ.
ಇದನ್ನೂ ಓದಿ : mangli Sister Indravati : ಪುಷ್ಪ ಸಿನಿಮಾಕ್ಕೆ ಬಂದ್ರು ಮಂಗ್ಲಿ ಸಹೋದರಿ: ಸಮಂತಾ ಡ್ಯಾನ್ಸ್ ಗೆ ಇಂದ್ರಾವತಿ ಚೌಹ್ಹಾಣ ಧ್ವನಿ
ಇದನ್ನೂ ಓದಿ : Puneeth Rajkumar Padma Shri : ಪವರ್ ಸ್ಟಾರ್ ಗೆ ಪ್ರದ್ಮಶ್ರೀ: ಕೇಂದ್ರಕ್ಕೆ ಪತ್ರ ಬರೆದ ರಾಜ್ಯ ಸರ್ಕಾರ
(A new record by Puneeth Raj Kumar his death day, Appu Record on Google)