Pet Dog Died :ಪೊಲೀಸರ ವಿರುದ್ಧ ಸಾಕು ನಾಯಿ ಕೊಂದ ಆರೋಪ ಹೊರಿಸಿದೆ ಈ ಕುಟುಂಬ..!

ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟುವುದು ಹೊಸವಿಚಾರವೇನಲ್ಲ. ಆದರೆ ಇಲ್ಲೊಂದು ಕಡೆಯಲ್ಲಿ ಪೊಲೀಸರ ವಿರುದ್ಧವೇ ಆರೋಪ ಎದುರಾಗಿದೆ. ಅದೂ ಈ ಪೊಲೀಸರ ವಿರುದ್ಧ ಎದುರಾಗಿರುವುದು ಅಂತಿಂತ ಆರೋಪವಲ್ಲ. ಸಾಕು ಶ್ವಾನವೊಂದರ ಸಾವಿಗೆ ಪೊಲೀಸರೇ ಕಾರಣ( Pet Dog Died) ಎಂದು ಕುಟುಂಬವೊಂದು ಆರೋಪಿಸಿದೆ.

ದರೋಡೆ ಆರೋಪವನ್ನು ಎದುರಿಸುತ್ತಿದ್ದ ಕುಟುಂಬ ವಾಸವಿದ್ದ ಮನೆಗೆ ತೆರಳಿದ್ದ ಪೊಲೀಸರು ಆ ಮನೆಯ ಶ್ವಾನದ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದೆಹಲಿಯ ರೋಹಿಣಿಯ ಬೇಗಂಪುರ ಎಂಬಲ್ಲಿ ಈ ಘಟನೆ ಸಂಭವಿಸಿದೆ.

ತನಿಖೆಗೆಂದು ಶಂಕಿತರ ಮನೆಗೆ ತೆರಳಿದ್ದ ವೇಳೆಯಲ್ಲಿ ದೆಹಲಿ ಪೊಲೀಸರು ಶಂಕಿತರ ಮನೆಯಲ್ಲಿದ್ದ ಶ್ವಾನದ ಜೊತೆ ತಮ್ಮ ಪಿಟ್​ಬುಲ್​ ನಾಯಿಯನ್ನು ಬಿಟ್ಟು ಕಾದಾಟ ನಡೆಸಿದ್ದಾರೆ. ಅಲ್ಲದೇ ಪಿಟ್​ಬುಲ್​​ಗೆ ಚಪ್ಪಾಳೆ ತಟ್ಟುತ್ತಾ ಅದನ್ನು ಮತ್ತಷ್ಟು ಹುರಿದುಂಬಿಸಿದ್ದಾರೆ ಎಂಬುದು ಕುಟುಂಬದ ಆರೋಪವಾಗಿದೆ.

ಒಂದೆಡೆ ಪೊಲೀಸರು ಚಪ್ಪಾಳೆ ತಟ್ಟುತ್ತಿದ್ದರೆ ಇತ್ತ ಕಡೆ ಶಂಕಿತ ಕುಟುಂಬ ಪೊಲೀಸರ ಬಳಿ ತಮ್ಮ ನಾಯಿಯನ್ನು ಬಿಟ್ಟುಬಿಡುವಂತೆ ಅಳುತ್ತಾ ಗೋಗೆರಿದ್ದಾರೆ. ಈ ಎಲ್ಲಾ ಘಟನೆಯ ದೃಶ್ಯಾವಳಿಯನ್ನು ಕುಟುಂಬ ಸದಸ್ಯರಲ್ಲಿ ಓರ್ವ ಚಿತ್ರೀಕರಿಸಿಕೊಂಡಿದ್ದು ಈ ವಿಡಿಯೋವನ್ನು ರಿಲೀಸ್​ ಮಾಡಲಾಗಿದೆ. ಇನ್ನು ಆರೋಪಿಗಳನ್ನು ಠಾಣೆಗೆ ಕರೆದೊಯ್ದ ವೇಳೆಯಲ್ಲಿ ಯೂ ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದ್ದು ಇದರಿಂದಾಗಿ ತಮ್ಮ ಬೆನ್ನು ಹಾಗೂ ಎಡಗೈಗೆ ಗಾಯಗಳಾಗಿವೆ ಎನ್ನುವುದು ಕುಟುಂಬಸ್ಥರ ಆರೋಪವಾಗಿದೆ. ಪ್ರಕರಣ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ಜಂಟಿ ಕಮಿಷನರ್​ ಈ ಸಂಬಂಧ ತನಿಖೆಗೆ ಆದೇಶ ನೀಡಿದ್ದಾರೆ.

ಒಂದೇ ದಿನ 40 ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಹುಚ್ಚು ನಾಯಿ

ಮಂಡ್ಯ : ಸಾಮಾನ್ಯವಾಗಿ ನಾಯಿಗಳೆಂದರೆ ಭಯ ಪಡ್ತಾರೆ. ಆದ್ರೆ ಇಲ್ಲೊಂದು ಹುಚ್ಚು ನಾಯಿ ಇನ್ನಿಲ್ಲದಂತೆ ಅವಾಂತರ ಸೃಷ್ಟಿಸಿದೆ. ಒಂದೇ ದಿನ ಬರೋಬ್ಬರಿ 40 ಕ್ಕೂ ಅಧಿಕ ಮಂದಿಗೆ ಹುಚ್ಚು ನಾಯಿ ಕಚ್ಚಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆದಿದೆ. ಕೆ.ಆರ್. ಪೇಟೆ ತಾಲೂಕಿನ ಸುತ್ತಮುತ್ತಲ ಗ್ರಾಮದಲ್ಲಿ ಹುಚ್ಚು ನಾಯಿಯ ಹಾವಳಿ ಹೆಚ್ಚಾಗಿದ್ದು, ಸುಮಾರು 40 ಕ್ಕೂ ಹೆಚ್ಚು ಜನರಿಗೆ ಕಚ್ಚಿದೆ ಎಂದು ತಿಳಿದುಬಂದಿದೆ. ಸದ್ಯ ಗಾಯಾಳುಗಳನ್ನು ಕೆ.ಆರ್. ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆ.ಆರ್. ಪೇಟೆ ಪಟ್ಟಣ, ಮಾಕವಳ್ಳಿ, ಕುಂದನಹಳ್ಳಿ, ಹೆಗ್ಗಡ, ಪುರಗೇಟ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ 40 ಕ್ಕೂ ಹೆಚ್ಚು ಜನರಿಗೆ ಹುಚ್ಚು ನಾಯಿ ಕಚ್ಚಿದ್ದು, ಗಾಯಾಳುಗಳನ್ನು ಕೆ.ಆರ್. ಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನು ಹಲವರನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: Corona Mask Test : ಇನ್ಮುಂದೆ ಮಾಸ್ಕ್ ಮೂಲಕವೂ ಕೋವಿಡ್ ಪತ್ತೆಹಚ್ಚಬಹುದು

ಇದನ್ನೂ ಓದಿ : Manaohari gold tea : ಬರೋಬ್ಬರಿ 99,999 ರೂಪಾಯಿಗೆ ಮಾರಾಟವಾಯ್ತು ಮನೋಹರಿ ಟೀ ಪುಡಿ..!

Delhi: Family claims pet dog died after cops forced it to fight pitbull | Video

Comments are closed.