ಭಾನುವಾರ, ಏಪ್ರಿಲ್ 27, 2025
HomeCinemaAamir Khan joins Har Ghar Tiranga : ಮಿಸ್ಟರ್ ಫರ್ಪೆಕ್ಟ್ ಮನೆ ಮೇಲೆ...

Aamir Khan joins Har Ghar Tiranga : ಮಿಸ್ಟರ್ ಫರ್ಪೆಕ್ಟ್ ಮನೆ ಮೇಲೆ ತ್ರಿವರ್ಣ ಧ್ವಜ : ಇದು ಸಿನಿಮಾ ಗೆಲ್ಲಿಸೋ ಗಿಮಿಕ್ ಎಂದ ಜನ

- Advertisement -

ಸದ್ಯ ಬಾಲಿವುಡ್ ನ ಮಿಸ್ಟರ್ ಫರ್ಪೆಕ್ಟ್ ಖ್ಯಾತಿಯ ನಟ ಅಮೀರ್ ಖಾನ್ ಸಖತ್ ದುಃಖದಲ್ಲಿದ್ದಾರೆ. ಎರಡು ವರ್ಷಗಳ ಕಾಲ ಕಷ್ಟಪಟ್ಟು ತೆರೆಗೆ ತಂದ ಸಿನಿಮಾ ಲಾಲ್ ಸಿಂಗ್ ಛಡ್ಡಾ ಸಿನಿಮಾ ಮಖಾಡೆ ಮಲಗಿದ್ದು, ಸಿನಿಮಾ ಸೋಲು ಮಿಸ್ಟರ್ ಫರ್ಪೆಕ್ಟ್ ಅಮೀರ್ ಖಾನ್ ಗೆ ಆಘಾತ ತಂದಿದೆ. ಆದರೆ ಈ ಹೊತ್ತಿನಲ್ಲಿ ಅಮೀರ್ ಖಾನ್ ಮನೆ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು (Aamir Khan joins Har Ghar Tiranga ) ಹಾರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಈ ಹಿಂದೆ ನಟ ಅಮೀರ್ ಖಾನ್ ಈ ದೇಶದಲ್ಲಿ ಅಸಹಿಷ್ಣುತೆ ಇದೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು. ದೇಶದ ಆಂತರಿಕ ಕಲಹದ ಹೊತ್ತಿನಲ್ಲಿ ಮಾತನಾಡಿದ್ದ ಅಮೀರ್ ಖಾನ್ ದೇಶದ ಅಸಹಿಷ್ಣುತೆ ನನಗೆ ಆತಂಕ ತರುತ್ತಿದೆ. ನನ್ನ ಪತ್ನಿ ಭಾರತದಲ್ಲಿ ಬದುಕುವುದಕ್ಕೆ ಭಯವಾಗುತ್ತಿದೆ ಎನ್ನುತ್ತಿದ್ದಾಳೆ ಎಂದು ಕಿರಣ್ ರಾವ್ ಪರ ಮಾತನಾಡಿದ್ದರು. ಅಮೀರ್ ಖಾನ್ ಅಂದು ನೀಡಿದ ಹೇಳಿಗೆ ದೇಶದಾದ್ಯಂತ ಅಮೀರ್ ಖಾನ್ ಪರ ಮತ್ತು ವಿರುದ್ಧ ಹೇಳಿಕೆಗಳು ವೈರಲ್ ಆಗಿದ್ದವು.

ಈ ವೇಳೆ ದೇಶಭಕ್ತ ಯುವಕರು ಅಮೀರ್ ಖಾನ್ ಮುಂದಿನ ಸಿನಿಮಾಗಳನ್ನು ಬಹಿಷ್ಕರಿಸುವಂತೆ ದೇಶದಾದ್ಯಂತ ಸೋಷಿಯಲ್ ಮೀಡಿಯಾ ಅಭಿಯಾನ ಮಾಡಿದ್ದರು. ಅಮೀರ್ ಖಾನ್ ಇದುವರೆಗೂ ತಮ್ಮ ಹೇಳಿಕೆಯ ಎಫೆಕ್ಟ್ ಅನುಭವಕ್ಕೆ ಬಂದಿರಲಿಲ್ಲ. ಆದರೆ ಈಗ ಲಾಲ್ ಸಿಂಗ್ ಛಡ್ಡಾ ರಿಲೀಸ್ ವೇಳೆ ಅಮೀರ್ ಖಾನ್ ಅಂದು ನೀಡಿದ ಹೇಳಿಕೆ ಮತ್ತೆ ಮುನ್ನಲೆಗೆ ಬಂದಿತ್ತು.

ಮಾತ್ರವಲ್ಲ ಇದೇ ಅಂಶವನ್ನು ಮುಂದಿಟ್ಟುಕೊಂಡು ಲಾಲ್ ಸಿಂಗ್ ಛಡ್ಡಾ ವನ್ನು ಬಹಿಷ್ಕರಿಸಿ. ಅಮೀರ್ ಖಾನ್ ಗೆ ದೇಶ ಬಿಟ್ಟು ಹೋಗಲು ಸಹಕರಿಸಿ ಎಂದು ಅಭಿಯಾನ‌ ಮಾಡಲಾಗಿತ್ತು. ಇದರ ಫಲ ಎಂಬಂತೆ ಈಗ ಅಮೀರ್ ಖಾನ್ ಸಿನಿಮಾ ಸೋಲು ಕಂಡಿದೆ. ಆದರೆ ಈ ಸೋಲಿನಿಂದ ಅಮೀರ್ ಖಾನ್ ವಿಚಲಿತರಾದಂತಿಲ್ಲ. ಬದಲಾಗಿ ತಮ್ಮ ನಿವಾಸದ ಮೇಲೆ ಹರ್ ಘರ್ ತಿರಂಗಾ ಆಶಯದಂತೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ರಾಷ್ಟ್ರಪ್ರೇಮವನ್ನು ಮೆರೆದಿದ್ದಾರೆ.

ಇದನ್ನೂ ಓದಿ : Har Ghar Tiranga certificate online : ಹರ್ ಘರ್ ತಿರಂಗಾ ಪ್ರಮಾಣಪತ್ರ, ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಅಮೀರ್ ಖಾನ್ ಮುಂಬೈ ನಿವಾಸದ ಮೇಲೆ ಧ್ವಜವನ್ನು ಹಾರಿಸಲಾಗಿದ್ದು, ಇದರೊಂದಿಗೆ ಅಮೀರ್ ಖಾನ್ ಹಾಗೂ ಪುತ್ರಿ ಇರಾ ಖಾನ್ ಕೂಡ ಪೋಸ್ ನೀಡಿದ್ದಾರೆ. ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೆಲವರು ಈಗಲಾದರೂ ನಿಮಗೆ ದೇಶದ ಬೆಲೆ ಗೊತ್ತಾಯ್ತಲ್ಲ ಅಂದಿದ್ದರೇ, ಇನ್ನು ಕೆಲವರು ಸಿನಿಮಾ ಗೆಲ್ಲಿಸಲು ಇಂಥ ನಾಟಕ ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : Bhojpuri actress Namrata Malla : ಬಿಕನಿಯಲ್ಲಿ ಯೋಗಾಭ್ಯಾಸ, ಮನಸೆಳೆದ ಭೋಜಪುರಿ ನಟಿ ನಮ್ರಿತಾ ಮಲ್ಲಾ

Aamir Khan joins Har Ghar Tiranga campaign displays tricolour at his house

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular