ಕನ್ನಡ ಸಿನಿರಂಗದ ಜೂನಿಯರ್ ರೆಬಲ್‌ಸ್ಟಾರ್ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿಡಪ್ಪ (Abhishek Ambarish – Aviva Marriage) ಇಂದು ಬೆಳಿಗ್ಗೆ 9.30 ರಿಂದ 10.30ರ ಮೂಹರ್ತಕ್ಕೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಅಭಿಷೇಕ್ ಹಾಗೂ ಅವಿವಾ ಮದುವೆ ಪೂರ್ವ ಕಾರ್ಯಗಳಾದ ಅರಶಿನ ಶಾಸ್ತ್ರ, ಮೆಹಂದಿ ಶಾಸ್ತ್ರ, ಚಪ್ಪರ ಶಾಸ್ತ್ರ ಸೇರಿದಂತೆ ಬೆಂಗಳೂರು ಜೆ.ಪಿ ನಗರದಲ್ಲಿ ಇರುವ ಅಂಬಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮ ಕ್ಷಣಕ್ಕೆ ಸ್ಯಾಂಡಲ್‌ವುಡ್ ಸಿನಿತಾರೆಯರು ಸಾಕ್ಷಿಯಾಗಿದ್ದಾರೆ.
ಹಿರಿಯ ನಟ ಅಂಬರೀಶ್ ಹಾಗೂ ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್ ಹಾಗೂ ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿದಪ್ಪ ಅವರ ಪುತ್ರಿ ಅವರ ಪುತ್ರಿ ಅವಿವಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅನಂತರ ಎರಡು ಕುಟುಂಬಸ್ಥರು ಒಪ್ಪಿ ಮದುವೆ ನಿಶ್ಚಿತಾರ್ಥ ನೆರವೇರಿಸಿದ್ದಾರೆ. ನಟ ಅಂಬರೀಷ್ ಅವರ ಮನೆ ಮುಂದೆ ಹಸಿರುಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಸಿಂಗರಿಸಲಾಗಿತ್ತು.
ಇದನ್ನೂ ಓದಿ : Actor Kollam sudhi Died : ಖ್ಯಾತ ಮಲಯಾಲಂ ಹಾಸ್ಯನಟ ಕೊಲ್ಲಂ ಸುಧಿ ಕಾರು ಅಪಘಾತದಲ್ಲಿ ಸಾವು
ಈಗಾಗಲೇ ಹಳದಿ ಶಾಸ್ತ್ರ, ವರಪೂಜೆ, ಮೆಹಂದಿ ಶಾಸ್ತ್ರದ ಕಾರ್ಯಕ್ರಮಗಳು ಜೆ.ಪಿ ನಗರದಲ್ಲಿರುವ ಅಂಬಿ ಮನೆಯಲ್ಲಿ ನಡೆದಿದೆ. ಇಂದು ಮಾಣಿಕ್ಯ ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ ಮದುವೆ ಸಮಾರಂಭ ನಡೆಯಲಿದೆ. ಜೂನ್ 7ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಿದೆ. 16 ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಭಾಗವಹಿಸುವ ಸಾಧ್ಯತೆ ಇದೆ.
Abhishek Ambarish – Aviva Grand Wedding Celebration