Nagarjuna Slams Media : ನಟಿ ಸಮಂತಾ ರುತ್ ಪ್ರಭು ಹಾಗೂ ನಟ ನಾಗಚೈತನ್ಯ ತಮ್ಮ ವೈವಾಹಿಕ ಜೀವನದಿಂದ ಬೇರ್ಪಟ್ಟ ಬಳಿಕ ಇಂಟರ್ನೆಟ್ನಲ್ಲಿ ಇವರ ವಿವಾಹ ವಿಚ್ಚೇದನಕ್ಕೆ ಸಂಭದಿಸಿದ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಕುರಿತು ನಟ ನಾಗ ಚೈತನ್ಯ ತಂದೆ ಸೂಪರ್ ಸ್ಟಾರ್ ನಾಗಾರ್ಜುನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಟರ್ನೆಟ್ನಲ್ಲಿ ಹರಿದಾಡುತ್ತಿರುವ ವದಂತಿಗಳ ಪ್ರಕಾರ ವಿವಾಹವನ್ನು ಮುರಿದುಕೊಳ್ಳಲು ಒತ್ತಡ ಹೇರಿದ್ದೇ ನಟಿ ಸಮಂತಾ ಪ್ರಭು. ನಾಗಚೈತನ್ಯ ವಿಚ್ಚೇದನದ ಕಡೆಗೆ ಮೊದಲು ಮನಸ್ಸು ಮಾಡಿರಲಿಲ್ಲ. ಅಲ್ಲದೇ ನಾಗಾರ್ಜುನ ಕೂಡ ಈ ವಿಚಾರವಾಗಿ ಮಾಜಿ ದಂಪತಿ ಜೊತೆಯಲ್ಲಿ ಸಂವಾದ ನಡೆಸಿದ್ದರು. ಆದರೆ ಸಮಂತಾ ವಿಚ್ಚೇದನಕ್ಕೆ ಪಟ್ಟು ಹಿಡಿದಿದ್ದರು ಎಂದು ತೆಲಗು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಎಲ್ಲಾ ವದಂತಿಗಳಿಗೆ ಟ್ವಿಟರ್ ಮೂಲಕ ಹಿರಿಯ ನಟ ನಾರ್ಗಾಜುನ ತೆರೆ ಎಳೆದಿದ್ದಾರೆ.
The news in social media and electronic media quoting my statement about Samantha & Nagachaitanya is completely false and absolute nonsense!!
— Nagarjuna Akkineni (@iamnagarjuna) January 27, 2022
I request media friends to please refrain from posting rumours as news. #GiveNewsNotRumours
ವದಂತಿಗಳನ್ನು ಹರಡದಂತೆ ಮಾಧ್ಯಮಗಳಿಗೆ ವರದಿ ಮಾಡಿದ ನಟ ನಾಗಾರ್ಜುನ , ಸಾಮಾಜಿಕ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಸಾರವಾದ ಈ ಸುದ್ದಿ ಸಂಪೂರ್ಣ ಸತ್ಯಕ್ಕೆ ದೂರವಾಗಿದೆ. ಅಲ್ಲದೇ ಇದು ಅಸಂಬದ್ಧ ಕೂಡ ಹೌದು. ದಯವಿಟ್ಟು ಇಂತಹ ಸುದ್ದಿಗಳನ್ನು ಪೋಸ್ಟ್ ಮಾಡಬೇಡಿ ಎಂದು ಮಾಧ್ಯಮ ಮಿತ್ರರಲ್ಲಿ ಮನವಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಸಮಂತಾ ಹಾಗೂ ನಾಗಚೈತನ್ಯ ತಮ್ಮ ವಿವಾಹ ವಿಚ್ಛೇದನದ ಬಗ್ಗೆ ಘೋಷಣೆ ಮಾಡಿದ ದಿನದಂದು ಟ್ವೀಟ್ ಮಾಡಿದ್ದ ನಟ ನಾಗಾರ್ಜುನ, ಭಾರವಾದ ಹೃದಯದಿಂದ ನಾನು ಇದನ್ನು ಹೇಳುತ್ತಿದ್ದೇನೆ. ಸ್ಯಾಮ್ ಹಾಗೂ ಚಯ್ ಜೀವನದಲ್ಲಿ ನಡೆದದ್ದು ತುಂಬಾ ದುರಾದೃಷ್ಟಕರವಾಗಿದೆ. ಆದರೆ ಪತಿ – ಪತ್ನಿ ನಡುವೆ ನಡೆಯುವ ವಿಚಾರ ತೀರಾ ವೈಯಕ್ತಿಕವಾದದ್ದು. ನಮ್ಮ ಕುಟುಂಬವು ಸ್ಯಾಮ್ ಜೊತೆ ಕಳೆದ ಎಲ್ಲಾ ಕ್ಷಣಗಳನ್ನು ಎಂದಿಗೂ ನೆನಪಿಡುತ್ತದೆ. ಆಕೆ ಎಂದಿಗೂ ನಮಗೆ ಪ್ರಿಯಳು..! ದೇವರು ಈ ಇಬ್ಬರಿಗೂ ಶಕ್ತಿ ನೀಡಲಿ ಎಂದು ಬರೆದುಕೊಂಡಿದ್ದರು.
‘Absolute Nonsense’: Nagarjuna Slams Media Who Reported His Comment on Naga Chaitanya, Samantha’s Separation
ಇದನ್ನು ಓದಿ : CM Ibrahim persuasion : ಆಪ್ತನ ಬಂಡಾಯಕ್ಕೆ ಬೆದರಿದ ಸಿದ್ದು: ಇಬ್ರಾಹಿಂ ಮನವೊಲಿಕೆಗೆ ರಿಜ್ವಾನ್ ಮೊರೆ ಹೋದ ಸಿದ್ಧರಾಮಯ್ಯ
ಇದನ್ನೂ ಓದಿ : BJP vs Siddaramaiah : ಸಿದ್ಧರಾಮಯ್ಯರನ್ನು ವಲಸಿಗರಾಮಯ್ಯ ಎಂದ ಬಿಜೆಪಿ : ಮತ್ತೆ ಶುರುವಾಯ್ತು ಟ್ವೀಟ್ ವಾರ್