JioPhone 5G: ಬರಲಿದೆ ಜಿಯೋ ಫೋನ್ 5ಜಿ! ಕಡಿಮೆ ಬೆಲೆಗೆ ಹೆಚ್ಚು ಫೀಚರ್ ಗ್ಯಾರಂಟ

2021 ರಲ್ಲಿ, ರಿಲಯನ್ಸ್ ತನ್ನ ಮೊದಲ ಸ್ಮಾರ್ಟ್‌ಫೋನ್ ಅನ್ನು ಜನಸಾಮಾನ್ಯರಿಗಾಗಿ ಬಿಡುಗಡೆ ಮಾಡಿತು.ಇದನ್ನು ಜಿಯೋ ಫೋನ್ ನೆಕ್ಸ್ಟ್ ಎಂದು ಕರೆಯಲಾಗುತ್ತದೆ. ಇದನ್ನು ಜಿಯೋ ನ 4ಜಿ ನೆಟ್‌ವರ್ಕ್‌ಗಳಲ್ಲಿ ರನ್ ಮಾಡಲು ವಿನ್ಯಾಸಗೊಳಿಸಲಾಗಿದೆ ಮತ್ತು 6,499 ಬೆಲೆಯಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನುಭವವನ್ನು ನೀಡುತ್ತದೆ. ತನ್ನ ಜಿಯೋ ನೆಕ್ಸ್ಟ್ ಫೋನ್ ಜನಪ್ರಿಯತೆಯಿಂದ ಉತ್ತೇಜಿಸಲ್ಪಟ್ಟು ಜಿಯೋ 5ಜಿ ಫೋನ್ (JioPhone 5G) ತರಲು ಮುಂದಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಜಿಯೋ ಫೋನ್ 5ಜಿ (JioPhone 5G) ಭಾರತದಲ್ಲಿ ದೊರೆಯುವ ಅತಿ ಅಗ್ಗದ 5ಜಿ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಲಿದೆ ಎಂಬ ಅಂದಾಜಿದೆ.

ಆಂಡ್ರಾಯ್ಡ್ ಸೆಂಟ್ರಲ್ ವರದಿಯ ಮೂಲಕ ಬರುವ ಮಾಹಿತಿಯು ಜಿಯೋ ಫೋನ್ 5ಜಿ ಜಿಯೋದ 5ಜಿ ನೆಟ್‌ವರ್ಕ್ ಜೊತೆಗೆ 13 ಭಾರತೀಯ ನಗರಗಳನ್ನು 2022 ರಲ್ಲಿ ತಲುಪಲಿದೆ ಎಂದು ಸೂಚಿಸುತ್ತದೆ. ಇದು ಜನರು ಹೆಚ್ಚಿನ ಇಂಟರ್ನೆಟ್ ಸ್ಪೀಡ್ ಪಡೆಯಲು ಸಹಕಾರಿ. ಇದರ ಬೆಲೆ ರೂ. 9,000 ರಿಂದ ರೂ. 12,000. ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಸ್ವಲ್ಪಮಟ್ಟಿಗೆ ಮಾರುಕಟ್ಟೆಯಲ್ಲಿ ಅಗ್ಗದ 5ಜಿಸ್ಮಾರ್ಟ್‌ಫೋನ್ ಆಗಬಹುದು.

ಜಿಯೋ ಫೋನ್ 5ಜಿ ಸ್ಪೆಸಿಫಿಕೇಶನ್
ಜಿಯೋ ಫೋನ್ 5ಜಿ ಸ್ನಾಪ್‌ಡ್ರಾಗನ್ 480 5ಜಿ ಚಿಪ್‌ಸೆಟ್ ಅನ್ನು ಆಧರಿಸಿದೆ ಎಂದು ಹೇಳಲಾಗುತ್ತದೆ. ಇದು ಸ್ನಾಪ್‌ಡ್ರಾಗನ್ 215 ನಿಂದ ಗಣನೀಯವಾಗಿ ಅಪ್‌ಗ್ರೇಡ್ ಆಗಿದೆ. ಫೋನ್ ಎನ್3 ಎನ್5 ಎನ್28 ಎನ್40 (N3, N5, N28, N40) ಮತ್ತು ಎನ್78 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ. ಇದು ಜಿಯೋ ಜನಪ್ರಿಯ ಬ್ಯಾಂಡ್‌ಗಳ ಬಗ್ಗೆ ಸುಳಿವು ನೀಡುತ್ತದೆ. ಈ ಫೋನ್ 6.5-ಇಂಚಿನ ಎಚ್ ಡಿ+ ಡಿಸ್ಪ್ಲೇ ಇರುತ್ತದೆ ಅದು ಸ್ಲಿಮ್ ವಿನ್ಯಾಸ ಮತ್ತು ಪಂಚ್-ಹೋಲ್ ಕ್ಯಾಮೆರಾ ಕಟೌಟ್ ಅನ್ನು ಹೊಂದಿರುತ್ತದೆ.

ಫೋನ್ 4ಜಿಬಿ ರಾಮ್ ಮತ್ತು 32ಜಿಬಿ ಸ್ಟೋರೇಜ್ ಜೊತೆಗೆ ಬರುತ್ತದೆ. ಎರಡನೆಯದಾಗಿ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ವಿಸ್ತರಿಸುವ ಸಾಮರ್ಥ್ಯವನ್ನು ನೀಡುತ್ತದೆ. ಜಿಯೋ ನ ಸೇವೆಗಳು ಮತ್ತು ಅಪ್ಲಿಕೇಶನ್‌ಗಳು ಮತ್ತು ಗೂಗಲ್ ಅಪ್ಲಿಕೇಶನ್‌ಗಳು ಮತ್ತು ಸೇವೆಗಳನ್ನು ಸರಿಹೊಂದಿಸಲು ಕೆಲವು ಮಾರ್ಪಾಡುಗಳೊಂದಿಗೆ ಬಾಕ್ಸ್ ಹೊರಗೆ ಆಂಡ್ರಾಯ್ಡ್ 11 ಗೋ ಆವೃತ್ತಿಯೊಂದಿಗೆ ಫೋನ್ ಪ್ರಾರಂಭಿಸುತ್ತದೆ. ಜಿಯೋ ಕಸ್ಟಮೈಸ್ ಮಾಡಿದ ಜಿಯೋ ಯುಐ ಇಂಟರ್ಫೇಸ್ ಅನ್ನು ಸಹ ನೀಡುತ್ತದೆ.

ಕ್ಯಾಮೆರಾ
ಹಿಂದಿನ ಕ್ಯಾಮರಾ 13ಎಂಪಿ ಸೆನ್ಸರ್ ಹೊಂದಿರುತ್ತದೆ ಆದರೆ ಮುಂಭಾಗದ ಕ್ಯಾಮರಾ 8ಎಂಪಿ ಸೆನ್ಸರ್ ಹೊಂದಿರುತ್ತದೆ.
ಕೊನೆಯದಾಗಿ, ಈ ಫೋನ್ ದೊಡ್ಡ 5000 ಎಂಎಎಚ್ ಬ್ಯಾಟರಿಯನ್ನು ಅವಲಂಬಿಸಿದೆ ಮತ್ತು 18ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಹೇಳಲಾಗುತ್ತದೆ. ಬಾಕ್ಸ್‌ನಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ಇರುತ್ತದೆ.

ಇದನ್ನೂ ಓದಿ: Google Pay Bitcoin:ಗೂಗಲ್‌ ಪೇಗೂ ಬರಲಿದೆ ಬಿಟ್‌ಕಾಯಿನ್‌? ಹೊಸ ಆಪ್ಶನ್ ತರಲು ಗೂಗಲ್ ಉತ್ಸುಕ

ಇದನ್ನೂ ಓದಿ: Indian Smartphone OS: ಆಂಡ್ರಾಯ್ಡ್ ಹಾಗೂ ಐಓಎಸ್ ಗೆ ಪ್ರತಿಸ್ಪರ್ಧಿಯಾಗಿ ಭಾರತೀಯ ಒಎಸ್! ಮೇಡ್ ಇನ್ ಇಂಡಿಯಾ ತಂತ್ರಾಂಶ ತಯಾರಿಗೆ ಕೇಂದ್ರದ ಒಲವು

(Jio Phone 5G Features price announcement date and specification)

Comments are closed.