ಅದ್ದೂರಿ ಹುಟ್ಟುಹಬ್ಬ ಬೇಡ: ನೀವಿದ್ದಲ್ಲೇ ಹಾರೈಸಿ: ಅಭಿಮಾನಿಗಳಿಗೆ ಅಭಿಷೇಕ್ ಅಂಬರೀಶ್ ಮನವಿ

ಸದ್ಯ ಹನಿಮೂನ್ ಮೂಡ್ ನಲ್ಲಿರೋ ನಟ ಅಭಿಷೇಕ್ ಅಂಬರೀಶ್ (Abhishek Ambareesh) ರಾಜ್ಯದ ಬರ ಪರಿಸ್ಥಿತಿ ಹಾಗೂ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆಯಿಂದ ತಮ್ಮ ಹುಟ್ಟುಹಬ್ಬದ ಅದ್ದೂರಿ ಆಚರಣೆ ಕೈಬಿಟ್ಟಿದ್ದು ಅಭಿಮಾನಿಗಳಿಗೆ ಪ್ರೀತಿಯಿಂದ ಮನವಿ ಮಾಡಿದ್ದಾರೆ.

Abhishek Ambareesh Birthday: ಗತ್ತು ಹಾಗೂ ಸ್ಟೈಲ್ ನಲ್ಲಿ ಪಕ್ಕಾ ಮಂಡ್ಯದ ಗಂಡು ,ರೆಬೆಲ್ ಸ್ಟಾರ್ ಅಂಬರೀಶ್ ರಂತೆ ಇರೋ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ತಂದೆಯಂತೆಯೇ ನೇರನಡೆನುಡಿಯ ವ್ಯಕ್ತಿತ್ವ. ಸದ್ಯ ಹನಿಮೂನ್ ಮೂಡ್ ನಲ್ಲಿರೋ ನಟ ಅಭಿಷೇಕ್ ಅಂಬರೀಶ್ ರಾಜ್ಯದ ಬರ ಪರಿಸ್ಥಿತಿ ಹಾಗೂ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆಯಿಂದ ತಮ್ಮ ಹುಟ್ಟುಹಬ್ಬದ ಅದ್ದೂರಿ ಆಚರಣೆ ಕೈಬಿಟ್ಟಿದ್ದು ಅಭಿಮಾನಿಗಳಿಗೆ ಪ್ರೀತಿಯಿಂದ ಮನವಿ ಮಾಡಿದ್ದಾರೆ.

ಸ್ಯಾಂಡಲ್ ವುಡ್ (Sandalwood)ನಿಂದ ಆರಂಭಿಸಿ ಬಾಲಿವುಡ್  (Bollywood) ತನಕ ಸ್ಟಾರ್ ಗಳ‌ ಬರ್ತಡೇ ಅಂದ್ರೇ ಅಭಿಮಾನಿಗಳಿಗೆ ಹಬ್ಬ ಇದ್ದಂತೆ.‌ಹುಟ್ಟುಹಬ್ಬದ ದಿನ ಯಾವುದೇ ಅಡ್ಡಿ ಆತಂಕವಿಲ್ಲದೇ ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಿ, ಕೈ ಕುಲುಕಿ, ಸೆಲ್ಪಿ ತೆಗೆಸಿಕೊಂಡು ಸಂಭ್ರಮಿಸಲು ಅವಕಾಶ ಸಿಗೋದರಿಂದ ಅಭಿಮಾನಿಗಳು ನಟ-ನಟಿಯರ ಮನೆ ಮುಂದೇ ಜಮಾಯಿಸುತ್ತಾರೆ‌.

Actor abhishek ambareesh to decide not to celebrate grand birthday
Image Credit To Original Source

ಆದರೆ ಕರೋನಾದಿಂದ (Covid-19) ಕೆಲ ವರ್ಷ ಈ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿತ್ತು. ಇತ್ತೀಚಿಗೆ ಮತ್ತೆ ಸ್ಟಾರ್ ಗಳು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಪ್ರಾರಂಭಿಸಿದ್ದರು. ಈಗ ಅಕ್ಟೋಬರ್ 3 ರಂದು ನಟ ಅಭಿಷೇಕ್ ಅಂಬರೀಶ್ (Abhishek Ambareesh) ತಮ್ಮ 30 ನೇ‌ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಆದರೆ ಈ ಭಾರಿ ರಾಜ್ಯದಲ್ಲಿ ಬರ ಘೋಷಣೆಯಾಗಿದೆ. ಸೂಕ್ತ ಪ್ರಮಾಣದಲ್ಲಿ ಮಳೆ ಸುರಿಯದೇ ಇರೋದರಿಂದ ರಾಜ್ಯದ ಹಲವು ತಾಲೂಕುಗಳಲ್ಲಿ ಬರ ಘೋಷಿಸಲಾಗಿದೆ‌.

ಇನ್ನು ಮಂಡ್ಯ (Mandya) ಜಿಲ್ಲೆಯಲ್ಲೂ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರೋದರಿಂದ ರೈತರು ಬೆಳೆದ ಬೆಳೆಗೆ ನೀರಿಲ್ಲದೇ ಪರಿತಪಿಸುತ್ತಿದ್ದಾರೆ. ಈ ಎಲ್ಲ ಕಾರಣಕ್ಕೆ ಈ ಭಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇರಲು ಅಭಿಷೇಕ್ ಅಂಬರೀಶ್ (Abhishek Ambareesh) ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಮತ್ತೆ ಮೇಘನಾ ಮುಂದೇ ಎರಡನೇ ಮದುವೆ ಪ್ರಶ್ನೆ: ಮುಚ್ಚುಮರೆ ಇಲ್ಲದೇ ಕುಟ್ಟಿಮಾ ಕೊಟ್ರು ನೇರ ಉತ್ತರ

ಈ ಬಗ್ಗೆ ಸೋಷಿಯಲ್ ಮೀಡಿಯಾ (Social Media) ದಲ್ಲಿ ಪೋಸ್ಟ್ ಹಾಕಿರೋ ಅಭಿಷೇಕ್ ಅಂಬರೀಶ್, ಈ ವರ್ಷ ರಾಜ್ಯದಲ್ಲಿ ಬರಗಾಲ ಇರೋದರಿಂದ ಹಾಗೂ ರೈತರು ಕಾವೇರಿ (Cauvery) ನದಿ ನೀರಿಗಾಗಿ ಹೋರಾಟ ಮಾಡ್ತಾ ಇರೋದರಿಂದ ನಾನು ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದೇನೆ. ಎಲ್ಲಾ ರೆಬೆಲ್ ಅಭಿಮಾನಿಗಳು ನೀವು ಇರುವ ಊರು ಮನೆಯಲ್ಲೇ ನನಗೆ ಆಶೀರ್ವಾದ ಮಾಡಿ. ಮನೆ ಹತ್ತಿರ ಬರುವ ಅಭಿಮಾನಿಗಳನ್ನು ಬರಬೇಡಿ ಎನ್ನುವುದು ನಮ್ಮ ಸಂಪ್ರದಾಯವಲ್ಲ. ಆದರೆ ಹೀಗೆ ಬರುವವರು ಹಾರ,ಕೇಕ್,ಪಟಾಕಿ,ಉಡುಗೊರೆ ಎಲ್ಲ ತರಬೇಡಿ. ನೀವು ಬಂದು ಶುಭಹಾರೈಸುವುದೇ ನನಗೆ ಉಡುಗೊರೆ ಎಂದು ಜ್ಯೂನಿಯರ್ ರೆಬೆಲ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Actor abhishek ambareesh to decide not to celebrate grand birthday
Image Credit To Original Source

ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ ಅಭಿಷೇಕ್ ಅಂಬರೀಶ್, ಅಮರ ಸಿನಿಮಾದ ಮೂಲಕ ಚಲನಚಿತ್ರ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದ್ದಾರೆ. ಸದ್ಯ ಅಭಿಷೇಕ್, ಸುಕ್ಕ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಖಡಕ್ ಖಾಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ ನಿಂದ ಹೊರಬಿತ್ತು ಸಿಹಿಸುದ್ದಿ : ತೆರೆಗೆ ಬರಲಿದೆ ಕೆಜಿಎಫ್ 3

ಜನವರಿಯಲ್ಲಿ ಅಭಿಷೇಕ್ ಅಂಬರೀಶ್ ತಾವು ಪ್ರೀತಿಸಿದ ಅವಿವಾ ಬಿದ್ದಪ್ಪ್ ಜೊತೆ ಅದ್ದೂರಿಯಾಗಿ ಮದುವೆಯಾಗಿದ್ದು, ಸದ್ಯ ಹನಿಮೂನ್ ಆಚರಿಸುತ್ತಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭಿಷೇಕ್ ಅಂಬರೀಶ್ ಮಂಡ್ಯದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗ್ತಿದೆ.

ಈ ಮಧ್ಯೆ ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಸದೆ ಸುಮಲತಾ ಹಾಗೂ ಅಭಿಷೇಕ್ ಅಂಬರೀಶ್ ಸಪೋರ್ಟ್ ಮಾಡಿಲ್ಲ ಎಂಬ ಆಕ್ರೋಶ ಮಂಡ್ಯ ರೈತರಿಂದ ವ್ಯಕ್ತವಾಗಿತ್ತು.

ಇದನ್ನೂ ಓದಿ: ಸುಪ್ರಜಾ ರಾಮ ಸಿನಿಮಾ ನಟ ನಾಗಭೂಷಣ್ ಅವಾಂತರ: ಕಾರು ಅಪಘಾತಕ್ಕೆ ಮಹಿಳೆ ಸಾವು

ಇದಾದ ಬಳಿಕ ಸುಮಲತಾ (Sumalatha Ambareesh) ಮಂಡ್ಯಕ್ಕೆ ಭೇಟಿ ನೀಡಿದ್ದರು. ಆದರೆ ಈಗ ಅಭಿಷೇಕ್ ಕಾವೇರಿ ನದಿ ನೀರು ಹಂಚಿಕೆ ವಿವಾದ ಹಾಗೂ ಬರದ ಕಾರಣಕ್ಕೆ ತಮ್ಮ ಹುಟ್ಟುಹಬ್ಬದ ಆಚರಣೆ ರದ್ದುಗೊಳಿಸೋ ಮೂಲಕ ರೈತರ ಬಗ್ಗೆ ತಮಗಿರೋ ಕಾಳಜಿ ಪ್ರದರ್ಶಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ.

Comments are closed.