ಸ್ಯಾಂಡಲ್ ವುಡ್ ನ ಆ ದಿನಗಳು ಖ್ಯಾತಿಯ ನಟ ಚೇತನ್ ಗೆ ( Actor Chetan ) ಒಳ್ಳೆಯ ದಿನಗಳು ಮುಗಿದಂತಿದ್ದು ಇನ್ನು ಮುಂದೇ ಸಂಕಷ್ಟದ ದಿನಗಳೇ ಎದುರಾಗೋ ಮುನ್ಸೂಚನೆ ಸಿಕ್ಕಿದೆ. ಒಂದು ಪ್ರಕರಣದಲ್ಲಿ ಜಾಮೀನು ಪಡೆದು ಚೇತರಿಸಿಕೊಳ್ಳುತ್ತಿರುವ ಹೊತ್ತಲ್ಲೇ ಬಸವನಗುಡಿ ಪೊಲೀಸರು ಚೇತನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಗೆ ಅನುಮತಿ ಕೋರಿ ರಾಜ್ಯಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೌದು ನಟ ಚೇತನ್ ಗೆ ಒಂದಾದ ಮೇಲೊಂದರಂತೆ ಕಾನೂನಿನ ಸಂಕಷ್ಟ ಕಾಡಲಿದೆ. ಸದ್ಯ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಜಾಮೀನು ಪಡೆದಿರೋ ಚೇತನ್ ಗೆ ಹಳೆಯ ಕೋಮುಸಾಮರಸ್ಯ ಕದಡುವ ಭಾಷಣವೊಂದು ತಲೆನೋವಾಗಿ ಪರಿಣಮಿಸಲಿದೆ.
ಚೇತನ್ (Actor Chetan ) ವಿರುದ್ದ IPC 153(A) ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆಗೆ ಅನುಮತಿ ಕೋರಿ ಬಸವನಗುಡಿ ಪೊಲೀಸರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜೂನ್ 10, 2021 ರಲ್ಲಿ ನಟ ಚೇತನ್ ಮೇಲೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ IPC 153(A) ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿತ್ತು. IPC 153(A) ಅಡಿಯಲ್ಲಿ ಕೇಸ್ ದಾಖಲಾದ್ರೆ ಚಾರ್ಜ್ ಶೀಟ್ ಸಲ್ಲಿಕೆಗೆ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯವಾಗಿರೋದರಿಂದ ಪೊಲೀಸರು ಸರ್ಕಾರದ ಅನುಮತಿ ಕೋರಿದ್ದಾರೆ. ಧರ್ಮ ಒಡೆಯುವಂತಹ ಹೇಳಿಕೆ, ಧರ್ಮ ನಿಂದಿಸುವುದು, ಧರ್ಮಗಳ ನಡುವೆ ಕಲಹ ಸಂಘರ್ಷ ಉಂಟು ಮಾಡಿದ್ರೆ IPC 153(A) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ.
ಬ್ರಾಹ್ಮಣ ಸಮುದಾಯದ ಬಗ್ಗೆ ನಿಂದನೆ ಹಾಗೂ ಹಿಂದು ಸಮುದಾಯದಲ್ಲಿ ವಿಷ ಬೀಜ ಬಿತ್ತೋ ಹಾಗೆ ಮಾತನಾಡಿದ್ದ ಹಿನ್ನಲೆ ಚೇತನ್ (Actor Chetan ) ವಿರುದ್ಧ 2 FIR ದಾಖಲಿಸಿಕೊಳ್ಳಲಾಗಿತ್ತು. ಈ ವೇಳೆ IPC ಸೆಕ್ಷನ್ 153A ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಈ ಪ್ರಕಣರದಲ್ಲಿ ಈಗಾಗಲೇ ನಟ ಚೇತನ್ ಸ್ಟೇಟ್ ಮೆಂಟ್ ದಾಖಲಾಗಿದ್ದು, ಸರ್ಕಾರದಿಂದ ಅನುಮತಿ ಸಿಕ್ಕ ಕೂಡಲೇ ಚೇತನ್ ಮೇಲೆ ಚಾರ್ಜ್ ಶೀಟ್ ದಾಖಲಿಸಲು ಪೊಲೀಸರು ಸಿದ್ಧವಾಗಿದ್ದಾರೆ. ಹೀಗಾಗಿ ನಟ ಚೇತನ್ ಮತ್ತೊಂದು ಕಾನೂನು ಸಂಘರ್ಷಕ್ಕೆ ಸಿದ್ಧವಾಗಬೇಕಿದೆ.
ಇತ್ತೀಚಿಗಷ್ಟೇ ಹೈಕೋರ್ಟ್ ನ್ಯಾಯಮೂರ್ತಿಗೆ ಅಪಮಾನ ಮಾಡಿದ್ದ ನಟ ಚೇತನ್ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದೆಲ್ಲದರ ಮಧ್ಯೆ ಚೇತನ್ ರನ್ನು ಪದೇ ಪದೇ ಕೋಮು ಸಾಮರಸ್ಯ ಕಾಪಾಡುವ ಕಾರಣಕ್ಕೆ ಗಡಿಪಾರು ಮಾಡಲು ಆದೇಶಿಸುವಂತೆಯೂ ಒತ್ತಡ ಹೆಚ್ಚಿದೆ ಎನ್ನಲಾಗಿದೆ.
ಇದನ್ನೂ ಓದಿ : Rudra Movie : ಕ್ರೈಂ ಸಿರೀಸ್ ನಲ್ಲಿ ಮಿಂಚಿದ ಬಾಲಿವುಡ್ ನಟ ಅಜಯ್ ದೇವಗನ್
ಇದನ್ನೂ ಓದಿ : Kichcha Sudeep : ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ನಟ ಸುದೀಪ್
( Actor Chetan again trouble, Police writes letter to state government to seek permission to apply charge sheet)