ಸ್ಯಾಂಡಲ್‌ವುಡ್ ಮೇರು ನಟರ ಸ್ಮಾರಕಗಳಿಗೆ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಒಂದಷ್ಟು ವಿವಾದಗಳು (Chetan controversial statement) ಹುಟ್ಟಿಕೊಂಡಿದೆ. ಹಿರಿಯ ನಟ ಡಾ. ವಿಷ್ಣುವರ್ಧನ್ ನಮ್ಮನ್ನಗಲಿ ಹದಿಮೂರು ವರ್ಷ ಬಳಿಕ ನಿನ್ನೆ ಜನವರಿ 29ರಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಮಾರಕವನ್ನು ಲೋಕಾರ್ಪಣೆ ಮಾಡಿದ್ದಾರೆ. ಇದು ವಿಷ್ಣುದಾದಾ ಅಭಿಮಾನಿಗಳಿಗೆ ಸಾಕಷ್ಟು ಸಂತಸವನ್ನು ನೀಡಿದೆ. ಹಾಗೆಯೇ ಮೈಸೂರಿನಲ್ಲಿ ಡಾ. ವಿಷ್ಣುವರ್ಧನ್ ಸ್ಮಾರಕವನ್ನು ಉದ್ಘಾಟನೆ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಇದು ಪ್ರವಾಸಿರಿಗೆ ಆಕರ್ಷಕ ಸ್ಥಳವಾಗಲಿದೆ ಎಂದಿದ್ದಾರೆ. ಆದರೆ ಇದೀಗ ನಟ ಚೇತನ್ ನಟ ವಿಷ್ಣುವರ್ಧನ್ ಸ್ಮಾರಕ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿವಾದತ್ಮಾಕ ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದಾರೆ.
“ಆ ದಿನಗಳು” ಸಿನಿಮಾ ಖ್ಯಾತಿಯ ನಟ ಚೇತನ್ ತಮ್ಮ ಟ್ವೀಟರ್ ಖಾತೆಯಲ್ಲಿ, “ಚಲನಚಿತ್ರ ಸ್ಟಾರ್‌ಗಳ ಸ್ಮಾರಕಗಳಿಗೆ ಕರ್ನಾಟಕದ ಸಾರ್ವಜನಿಕರ ಜಾಗ, ಹಣ ಮತ್ತು ಸಂಪನ್ಮೂಲಗಳನ್ನು ಬಳಸಬಾರದು. ಹಲವಾರು ಕನ್ನಡಿಗರಂತೆ ಕೆಲಸ ಮಾಡಿ ಸಂಪಾದಿಸುವ ಚಲನಚಿತ್ರ ಸ್ಟಾರ್‌ಗಳು ಈಗಾಗಲೇ ನಮ್ಮ ಸಮಾಜದಲ್ಲಿ ಅನಗತ್ಯ ಪ್ರಚಾರ ಮತ್ತು ತಮ್ಮ ಚಲನಚಿತ್ರಗಳ ಯಶಸ್ಸಿಗೆ ಅನಗತ್ಯವಾಗಿ ಗಮನ ಸೆಳೆದಿರುತ್ತಾರೆ. ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಸ್ತು ಸಂಗ್ರಹಾಲಯಗಳಿಗೆ ಸ್ಮಾರಕ ಭೂಮಿಗಳು ಒಳ್ಳೆಯ ಉಪಯೋಗಕ್ಕೆ ಬರುತ್ತವೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೇ ನಟ ಚೇತನ್ ಅದಾನಿ ಬಗ್ಗೆ ಕೂಡ ತಮ್ಮ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ನಟ ಚೇತನ್ ಅದಾನಿ ಬಗ್ಗೆ ತಮ್ಮ ಟ್ವೀಟ್‌ನಲ್ಲಿ, ” ಇಡೀ ಭಾರತ ದೇಶವು ಕೊವೀಡ್ ಸಾಂಕ್ರಾಮಿಕ ರೋಗದಿಂದ ತತ್ತರಿಸುತ್ತಿದ್ದಾಗ ಗೌತಮ್ ಅದಾನಿಯವರು ಏಷ್ಯಾದ ಅತೀ ಶ್ರೀಮಂತ ಪಟ್ಟಿಯಲ್ಲಿ ಇದ್ದಾರೆ. ಈಗ ಹಿಂಡೆನ್‌ಬರ್ಗ್ ಸಂಶೋಧನಾ ವರದಿಯು ಗೌತಮ್ ಅದಾನಿಯವರ ವಂಚನೆಯನ್ನು ಬಯಲಿಗೆಳೆದಿದೆ. ತನ್ನ ಮೇಲಿನ ಆರೋಪವನ್ನು “ಭಾರತದ ಮೇಲಿನ ದಾಳಿ” ಎಂದು ಅವರು ದುರಹಂಕಾರದಿಂದ ಹೇಳಿಕೊಂಡು ವಂಚನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅದಾನಿಯವರು ಭಾರತವನ್ನು ಕೆಟ್ಟ ರೀತಿಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳಬೇಕು” ಎಂದು ಚೇತನ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) January 30, 2023
ಇದನ್ನೂ ಓದಿ : ಕಿರಿಕ್ ಪಾರ್ಟಿ 2 ನಲ್ಲಿ ಆಗುತ್ತಾ ಇಲ್ಲವಾ ? ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ ರಕ್ಷಿತ್ ಶೆಟ್ಟಿ
ಇದನ್ನೂ ಓದಿ : Weekend with Ramesh Season 5: ವೀಕೆಂಡ್ ವಿತ್ ರಮೇಶ್ ಶೀಘ್ರದಲ್ಲೇ ಪ್ರಾರಂಭ : ಮೊದಲ ಅತಿಥಿ ಯಾರು ಗೊತ್ತಾ ?
ಇದನ್ನೂ ಓದಿ : ನಟ ದರ್ಶನ್ ಅಭಿನಯದ ಕ್ರಾಂತಿ 100 ಕೋಟಿ ರೂ. ಕ್ಲಬ್ ಸೇರಿದ 4ನೇ ಸಿನಿಮಾ
ನಟ ಚೇತನ್ ಆಗಾಗ ವಿವಾದತ್ಮಾಕ ಹೇಳಿಕೆಯನ್ನು ನೀಡುವ ಕಾರಣದಿಂದ ಸುದ್ದಿ ಆಗುತ್ತಿರುತ್ತಾರೆ. ಹೀಗಾಗಿ ಅವರ ಎಲ್ಲ ಹೇಳಿಕೆಗಳಿಗೆ ಪರ ವಿರೋಧ ವ್ಯಕ್ತವಾಗುತ್ತದೆ. ಈ ಬಾರಿ ಕೂಡ ಅದೇ ರೀತಿಯಲ್ಲಿ ಮುಂದುವರೆದಿದ್ದಾರೆ. ಹೀಗಾಗಿ ಇವರು ಮಾಡಿರುವ ಟ್ವೀಟ್‌ಗೆ ಕೆಲವರು ಕಾಮೆಂಟ್ ಮಾಡುವ ಮೂಲಕ ಬೆಂಬಲ ತೋರಿಸಿದ್ದರೆ, ಇನ್ನುಳಿದವರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
Actor Chetan controversial statement on Vishnuvardhan memorial