ಚಾಲೆಂಚಿಂಗ್ ಸ್ಟಾರ್ ದರ್ಶನ್ ಸಿನಿಮಾ ‘ಕ್ರಾಂತಿ’ ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. 22 ತಿಂಗಳ ಬಳಿಕ ತೆರೆಕಂಡಿರೋ ದರ್ಶನ್ ಸಿನಿಮಾವನ್ನು ನೋಡಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ತೆರೆ ಮೇಲಾಗುತ್ತಿರುವ ಶಿಕ್ಷಣ ‘ಕ್ರಾಂತಿ’ಯನ್ನು ನೋಡಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ‘ಕ್ರಾಂತಿ’ ಮೂರನೇ ದಿನ ಪ್ರದರ್ಶನ ಕಾಣುತ್ತಿದೆ. ಸಿನಿಮಾಗೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರೂ, ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ. ಆದರೆ, ಎರಡನೇ ದಿನ ಕೊಂಚ ಹಿನ್ನಡೆ ಅನುಭವಿಸಿದೆ. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸುದ್ದಿಯೊಂದು ಸದ್ದು (Veera Madakari Nayaka Movie) ಮಾಡುತ್ತಿದೆ.
ನಟ ದರ್ಶನ್ ಹಾಗೂ ರಾಜೇಂದ್ರ ಸಿಂಗ್ ಬಾಬು ಕಾಂಬಿನೇಷನ್‌ನಲ್ಲಿ ಸೆಟ್ಟೇರಬೇಕಿದ್ದ ಸಿನಿಮಾ ಬಗ್ಗೆ ಮತ್ತೆ ಸುದ್ದಿ ಆಗುತ್ತಿದೆ. ಮತ್ತೆ ಆರಂಭ ಆಗುವ ಸೂಚನೆಯೂ ಸಿಗುತ್ತಿದೆ. ಅಷ್ಟಕ್ಕೂ ‘ವೀರ ಮದಕರಿ ನಾಯಕ’ ಸಿನಿಮಾ ಸೆಟ್ಟೇರುತ್ತಾ? ಈ ಬಾರಿ ಸಿನಿಮಾ ಅನೌನ್ಸ್ ಆಗೋದು ಪಕ್ಕಾನಾ? ಎನ್ನುವುದನ್ನು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಕೊರೊನಾ ಬಾರದೇ ಹೋಗಿದ್ದರೆ, ದರ್ಶನ್ ಇಷ್ಟೊತ್ತಿಗೆ ‘ವೀರ ಮದಕರಿ ನಾಯಕ’ನ ಅವತಾರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಕೊರೊನಾ, ಲಾಕ್‌ಡೌನ್ ಅಂತ ಆ ಸಿನಿಮಾ ನಿಂತು ಹೋಗಿತ್ತು. ಮುಂದಿನ ದಿನಗಳಲ್ಲಿ ಈ ಸಿನಿಮಾ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದು ಸಿನಿತಂಡ ಹೇಳಿಕೊಂಡಿತ್ತು. ಈಗ ‘ಕ್ರಾಂತಿ’ ಬಿಡುಗಡೆಯಾದ ಎರಡು ದಿನಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಇದೇ ಸಿನಿಮಾ ಬಗ್ಗೆ ಚರ್ಚೆಯಾಗುತ್ತಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ‘ವೀರ ಮದಕರಿ ನಾಯಕ’ ಸಿನಿಮಾದ ಅಪ್‌ಡೇಟ್ ಸಿಗುತ್ತೆ ಅಂತ ಸುದ್ದಿಯಾಗುತ್ತಿದೆ. ಜೊತೆಗೊಂದು ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ. ಇದರಲ್ಲಿ ರಾಕ್‌ಲೈನ್ ಪ್ರೊಡಕ್ಷನ್ ನಿರ್ಮಾಣ, ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಅಂತ ಹೇಳಲಾಗಿದ್ದು, ಫೆಬ್ರವರಿ 16ಕ್ಕೆ ಅನೌನ್ಸ್‌ಮೆಂಟ್ ಇದೆ ಎನ್ನಲಾಗಿದೆ. ಅಂದ ಹಾಗೆ ಇದು ಫ್ಯಾನ್ ಮೇಡ್ ಪೋಸ್ಟರ್ ಆಗಿದ್ದರೂ, ಇದರಿಂದ ದರ್ಶನ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ನಟ ದರ್ಶನ್ ‘ವೀರ ಮದಕರಿ ನಾಯಕ’ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಬ್ಯಾಕ್‌ಗ್ರೌಂಡ್‌ನಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸ್ಕ್ರಿಪ್ ಕೂಡ ಮಾಡಿಟ್ಟುಕೊಂಡಿದ್ದರು.
ಇದನ್ನೂ ಓದಿ : Saptami Gowda : ವಾರಿಯರ್ ಲುಕ್ ನಲ್ಲಿ ಮಿಂಚಿದ ಲೀಲಾ : ಸಪ್ತಮಿ ಗೌಡ ಹೊಸ ಪೋಟೋಸ್ ವೈರಲ್
ಇದನ್ನೂ ಓದಿ : ಸ್ಯಾಂಡಲ್‌ವುಡ್‌ನ ಬಾಕ್ಸ್ ಆಫೀಸ್‌ನಲ್ಲಿ ಸುಂಟರಗಾಳಿ ಎಬ್ಬಿಸಿದ “ಕ್ರಾಂತಿ” ಸಿನಿಮಾ
ಇದನ್ನೂ ಓದಿ : ವಿಷ್ಣು ಸ್ಮಾರಕ ವಿಚಾರಕ್ಕೆ ಆಕ್ರೋಶ : ಫಿಲ್ಮ್ ಚೇಂಬರ್ ವಿರುದ್ಧ ಸಿಡಿದೆದ್ದ ವೀರಕಪುತ್ರ ಶ್ರೀನಿವಾಸ್
ಇನ್ನೇನು ಸಿನಿಮಾ ಆರಂಭ ಆಗೇ ಬಿಡ್ತು ಅಂತ ಎಲ್ಲರೂ ಭಾವಿಸಿದ್ದರು. ಇದಕ್ಕಿದ್ದಂತೆ ‘ವೀರ ಮದಕರಿ ನಾಯಕ’ ಸಿನಿಮಾದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ಅನೌನ್ಸ್ ಮಾಡಲಾಗಿತ್ತು. ಈ ಬೆನ್ನಲ್ಲೇ ತರುಣ್ ಸುಧೀರ್ ನಿರ್ದೇಶಿಸುತ್ತಿರುವ ದರ್ಶನ್ 56ನೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ದರ್ಶನ್ ‘ವೀರ ಮದಕರಿ ನಾಯಕ’ ಸಿನಿಮಾ ಅನೌನ್ಸ್ ಮಾಡುತ್ತಿದ್ದಂತೆ ಚಿತ್ರದುರ್ಗ ಸೇರಿದಂತೆ ಹಲವೆಡೆಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಕಿಚ್ಚ ಸುದೀಪ್ ಈ ಪಾತ್ರದಲ್ಲಿ ನಟಿಸಬೇಕು ಅಂತ ಆ ಸಮಾಜದ ಮುಖಂಡರು ಹೇಳಿಕೆಗಳನ್ನು ನೀಡಿದ್ದರು. ಇದರೊಂದಿಗೆ ಕಿಚ್ಚ ಫ್ಯಾನ್ಸ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಈಗ ಮತ್ತೆ ‘ವೀರ ಮದಕರಿ ನಾಯಕ’ ಸದ್ದು ಕೇಳಿಬರುತ್ತಿದೆ.
Actor Darshan Veera Madakari Nayaka movie set behind “Kranti”?