Chat GPT : ಏನಿದು ಚಾಟ್‌ ಜಿಪಿಟಿ : ಹೊಸ AI ಚಾಟ್‌ಬಾಟ್‌ ಶಿಕ್ಷಣದ ಮೇಲೆ ಪ್ರಭಾವ ಬೀರಲಿದೆಯೇ?

ಇದೀಗ ಎಲ್ಲೆಡೆ ಹೊಸ AI ಚಾಟ್‌ಬಾಟ್‌ನದೇ ಚರ್ಚೆ. ಓಪನ್‌ AI ಅಭಿವೃದ್ಧಿಪಡಿಸಿದ ಹೊಸ AI ತಂತ್ರಜ್ಞಾನ (AI Technology) ಆಧಾರಿತ ಬಾಟ್‌ (bot) ಅನ್ನೇ ಚಾಟ್‌ GPT (Chat GPT) ಎಂದು ಕರೆಯುತ್ತಾರೆ. ಇದೊಂದು ಹೊಸ ತಂತ್ರಜ್ಞಾನ. ಏಕೆಂದರೆ ಇದು ಮನುಷ್ಯರಂತೆ ಸಂಭಾಷಣೆಗಳನ್ನು ಮಾಡಬಲ್ಲದು. ನೀವು ಕೇಳಿದ ಯಾವುದೇ ಪ್ರಶ್ನೆಗೆ ಥಟ್ಟನೆ ಉತ್ತರಿಸಬಲ್ಲದು, ಪ್ರಬಂಧ ರಚಿಸಬಲ್ಲದು. ನಿಮಗಾಗಿ ಬ್ಲಾಗ್‌, ಕಥೆ, ಕವಿತೆ ರಚಿಸಬಲ್ಲದು. ಇಷ್ಟೆಲ್ಲಾ ಕಾರ್ಯ ನಿರ್ವಹಿಸುವ ಈ ಚಾಟ್‌ಬಾಟ್‌ ಶಿಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದಾದರೂ ಹೇಗೆ ಇಲ್ಲಿದೆ ಓದಿ.

ಏನಿದು ಚಾಟ್‌ ಜಿಪಿಟಿ?
ಕಳೆದ ವರ್ಷ AI ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ ಹೊಸ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ (AI) ಬೆಂಬಲಿತ ಚಾಟ್‌ಬಾಟ್‌ ಅನ್ನೇ ಚಾಟ್‌ ಜಿಪಿಟಿ ಎಂದು ಕರೆಯುತ್ತಾರೆ. ಇದು ಓಪನ್‌ AI ಪ್ರಾರಂಭಿಸಿದ ಹೊಸ ತಂತ್ರಜ್ಞಾನ. ಇದೊಂದು ಚಾಟ್‌ ಟೂಲ್‌. ಇದು ಹೊಸ ಪೀಳಿಗೆಯ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ನ ಒಂದು ಭಾಗ. ಡಿಜಿಟಲ್‌ ಪುಸ್ತಕಗಳು, ಆನ್‌ಲೈನ್‌ ಬರಹಗಳು ಮತ್ತು ಇತರ ವ್ಯಾಪಕ ಡೇಟಾಬೇಸ್‌ನಿಂದ ಕಲಿತದ್ದನ್ನು ಆಧರಿಸಿ ಸಂಭಾಷಣೆ, ಓದಬಹುದಾದ ಪಠ್ಯವನ್ನು ರಚಿಸಬಲ್ಲದು. ಜೊತೆಗೆ ಯಾವುದೋ ಕಾದಂಬರಿಯ ಚಿತ್ರ ಮತ್ತು ವೀಡಿಯೋಗಳನ್ನು ಸಹ ರಚಿಸಬಲ್ಲದು. ನೀವು ಕೇಳುವ ಪ್ರಶ್ನೆಗಳಿಗೆ ಆರ್ಟಿಫೀಷಿಯಲ್‌ ಇಂಟೆಲಿಜೆನ್ಸ್‌ನ ಮೂಲಕ ತಕ್ಷಣ ಉತ್ತರಗಳನ್ನು ನೀಡುತ್ತದೆ, ಜೊತೆಗೆ ಸಂವಹನವನ್ನು ಮಾಡುತ್ತದೆ.

ಶಿಕ್ಷಣ ವ್ಯವಸ್ಥೆಯ ಮೇಲೆ ಇದರ ಪರಿಣಾಮ ಹೇಗೆ?
AI ತಂತ್ರಜ್ಞಾನದ ಮೂಲಕ ಕಾರ್ಯ ನಿರ್ವಹಿಸುವ ಈ ಚಾಟ್‌ಬಾಟ್‌ ವಿದ್ಯಾರ್ಥಿಗಳ ಪ್ರಶ್ನೆಗೆ, ಅನುಮಾನಗಳಿಗೆ ಉತ್ತರ ನೀಡಬಲ್ಲದು. ಅವರು ಕೇಳುವ ಪ್ರಬಂಧಗಳನ್ನು ಸಮರ್ಪಕ ರೀತಿಯಲ್ಲಿ ರಚಿಸಿ ಕೊಡುಬಲ್ಲದು. ಹಾಗಾದರೆ ಈಗಿರುವ ಗೂಗಲ್‌ ಸರ್ಚ್‌ ಸಹ ಇದನ್ನೆಲ್ಲವನ್ನು ಮಾಡುತ್ತದೆಯಲ್ಲವೇ ಆದರೂ ಚಾಟ್‌ ಜಿಪಿಟಿ ಹೇಗೆ ಭಿನ್ನವಾಗಿದೆ? ಗೂಗಲ್‌ ನಲ್ಲಿ ಸರ್ಚ್‌ ಮಾಡಿದ ನಂತರ ಅದರಲ್ಲಿ ಹಲವಾರು ಆಯ್ಕೆಗಳು ಬರುತ್ತವೆ. ನಮಗೆ ಬೇಕಾದ ಸಮರ್ಪಕ ಉತ್ತರವನ್ನು ನಾವೇ ಹುಡುಕಿಕೊಳ್ಳಬೇಕು. ಆದರೆ ಇದು ಹಾಗಲ್ಲ, AI ತಂತ್ರಜ್ಞಾನ ಆಧರಿಸಿರುವುದರಿಂದ, ಪ್ರಶ್ನಾರ್ಥಿಗಳಿಗೆ ಬೇಕಾದ ಉತ್ತರವನ್ನು ಅದೇ ತೋರಿಸುತ್ತದೆ. ಇದು ಪ್ರಶ್ನೆ ಕೇಳುವ ಟೋನ್‌ ಮತ್ತು ಭಾವನೆಗಳನ್ನು ಅರ್ಥೈಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತದೆ. ಹೀಗಾಗಿ ಇದು ವಿದ್ಯಾರ್ಥಿಗಳು ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತರಾಗಲು ಕಾರಣವಾಗಬಹುದು. ಇದು ವಿದ್ಯಾರ್ಥಿಗಳು ಸ್ವತಃ ಪ್ರಶ್ನೆಗಳು ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯಕ್ಕೆ ಅಡ್ಡಿಯಾಗಬಹುದು. ಏಕೆಂದರೆ ಪುಸ್ತಕದಿಂದ ಉತ್ತರಗಳನ್ನು ಹುಡುಕುವ ಮೂಲಕ ಸಮಸ್ಯೆಗಳನ್ನು ಪರಿಹರಿಸಬೇಕೆಂದಿಲ್ಲ. ಆದ್ದರಿಂದ ಹಲವಾರು ತಜ್ಞರು ಇದರ ಬಗ್ಗೆ ಚಿಂತಿಸುತ್ತಿದ್ದಾರೆ. ಚಾಟ್‌ ಜಿಪಿಟಿ ಶಿಕ್ಷಣದ ಮೇಲೆ ಪರಿಣಾಮ ಬೀರಬಹುದು ಎಂಬುದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ : Fire-Boltt Smartwatch : ಮೂರು ಬಜೆಟ್‌ ಫ್ರೆಂಡ್ಲೀ ಸ್ಮಾರ್ಟ್‌ವಾಚ್‌ ಪರಿಚಯಿಸಿದ ಫೈರ್‌–ಬೋಲ್ಟ್‌; ಫಿಟ್ನೆಸ್‌ ಪ್ರಿಯರಿಗೆ ಇದು ಬೆಸ್ಟ್‌ ವಾಚ್‌

ಇದನ್ನೂ ಓದಿ : Healthy herbal tea: ಚಳಿಗಾಲದಲ್ಲಿ ಆರೋಗ್ಯವಾಗಿರಲು ಕುಡಿಯಿರಿ ಈ 5 ಆರೋಗ್ಯಕರ ಗಿಡಮೂಲಿಕೆ ಚಹಾ

(What is Chat GPT? Is it affect the education system? What do experts say?)

Comments are closed.