ಸೂಪರ್ ಸ್ಟಾರ್ ರಜನಿಕಾಂತ್ ಮನೆಯಲ್ಲಿ ಕಳೆದೆರಡು ವರ್ಷದಿಂದ ಬೇಸರದ ಸುದ್ದಗಳೇ ಒಂದಾದ ಮೇಲೊಂದರಂತೆ ಹೊರಬರಲು ಆರಂಭಿಸಿದ್ದವು. ಖ್ಯಾತ ನಟ ರಜನಿಕಾಂತ್ ಅನಾರೋಗ್ಯ, ಮಗಳ ಡಿವೋರ್ಸ್ ಹೀಗೆ. ಆದರೆ ಇದರ ನಡುವಲ್ಲೇ ಇತ್ತೀಚಿಗೆ ಮತ್ತೆ ಖುಷಿ ಸುದ್ದಿಯೊಂದು ಹೊರಬಂದಿತ್ತು. ವಿಚ್ಛೇಧನದ ಬಳಿಕ ಕುಗ್ಗಿದ್ದ ತಲೈವಾ ಪುತ್ರಿ ಐಶ್ವರ್ಯಾ ಚೇತರಿಸಿಕೊಂಡು ಮತ್ತೇ ಡೈರೈಕ್ಟರ್ ಕ್ಯಾಪ್ ತೊಡಲು ಸಿದ್ಧವಾಗಿದ್ದಾರೆ. ಈಗ ಇದೇ ಐಶ್ವರ್ಯಾಗೆ ( Aishwarya) ಮಾಜಿ ಪತಿ ಧನುಷ್ (Dhanush) ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿದ್ದಾರೆ.

ಹೌದು, ಹಲವು ವರ್ಷಗಳಿಂದ ನಟನೆಯಲ್ಲಿ ಮಿಂಚುತ್ತಿರೋ ನಟ ಧನುಷ್ (Dhanush) ಹಾಗೂ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದ ತಲೈವಾ ಪುತ್ರಿ ಐಶ್ವರ್ಯಾ ಪರಸ್ಪರ ಪ್ರೀತಿಸಿ 2004 ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಲಿಂಗ್ ರಾಜ್ ಹಾಗು ಯಾತ್ರ ರಾಜ್ ಎಂಬ ಒಬ್ಬರು ಮಕ್ಕಳಿದ್ದಾರೆ. ಆದರೆ 18 ವರ್ಷಗಳ ದಾಂಪತ್ಯಕ್ಕೆ ಈ ಜೋಡಿ ಕಳೆದ ಜನವರಿಯಲ್ಲಿ ಅಂತ್ಯ ಹಾಡಿತ್ತು.ಇದಾದ ಮೇಲೆ ಈ ಜೋಡಿಯನ್ನು ಒಂದುಗೂಡಿಸುವ ಪ್ರಯತ್ನ ನಡೆಯುತ್ತಲೇ ಇದೆ ಎಂದು ಹೇಳಲಾಗಿದ್ದರೂ ಈ ಜೋಡಿ ಒಂದುಗೂಡಿಲ್ಲ.

ಆದರೆ ಈಗ ಸೋಷಿಯಲ್ ಮೀಡಿಯಾದಲ್ಲಿ ನಟ ಧನುಷ್ ತಮ್ಮ ಮಾಜಿ ಪತ್ನಿಗಾಗಿ ಮಾಡಿರೋ ಟ್ವೀಟ್ ಒಂದು ಸಖತ್ ವೈರಲ್ ಆಗಿದೆ. ಐಶ್ವರ್ಯಾರನ್ನು ನನ್ನ ಪ್ರೀತಿಯ ಸ್ನೇಹಿತೆ ಎಂದು ಸಂಭೋದಿಸಿರುವ ಧನುಷ್ ಹೊಸದೊಂದು ಮ್ಯೂಸಿಕ್ ವಿಡಿಯೋವನ್ನು ರಿಲೀಸ್ ಮಾಡಿರುವ ನನ್ನ ಪ್ರೀತಿಯ ಸ್ನೇಹಿತೆ ಐಶ್ವರ್ಯಾ ಗೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ಐಶ್ವರ್ಯಾ ಧನ್ಯವಾದ ಎಂದು ರಿಪ್ಲೈ ಮಾಡಿದ್ದಾರೆ.
ತಂದೆಗಾಗಿ ಐಶ್ವರ್ಯ (Aishwarya)ವಿಶೇಷ ವಿಡಿಯೋ
ಐಶ್ವರ್ಯಾ ಇತ್ತೀಚಿಗೆ ನಮ್ಮ ತಂದೆ ರಜನಿಕಾಂತ್ ಗಾಗಿ ವಿಶೇಷ ಮ್ಯೂಸಿಕ್ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಧನುಷ್ ಶುಭ ಕೋರಿದ್ದಾರೆ. ಇನ್ನು ವಿಚ್ಚೇಧನದ ಬಳಿಕ ನಟ ಧನುಶ್ ತಮ್ಮ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದು, ಮೊದಲ ಬಾರಿಗೆ ತೆಲುಗಿನಲ್ಲಿ ನಟಿಸಿದ್ದಾರೆ. ವೆಂಕಿ ಅಟ್ಲೂರಿ ನಿರ್ದೇಶನದ ಸಾರ್ ಸಿನಿಮಾದಲ್ಲಿ ಧನುಷ್ ನಟಿಸುತ್ತಿದ್ದು ಇದೇ ಸಿನಿಮಾ ತಮಿಳಿನಲ್ಲಿ ವಾಥಿ ಹೆಸರಿನಲ್ಲಿ ತೆರೆ ಕಾಣಲಿದೆ.

ಇತ್ತೀಚೆಗಷ್ಟೇ ಧನುಷ್ ಮಾರನ್ ಸಿನಿಮಾ ಓಟಿಟಿಯಲ್ಲಿ ತೆರೆ ಕಂಡಿತ್ತು. ಸದ್ಯ ಐಶ್ವರ್ಯಾ ಕೂಡ ಮೂವಿ ಡೈರೈಕ್ಷನ್ ನಲ್ಲಿ ಬ್ಯುಸಿಯಾಗಿದ್ದು, ಸಿಂಬಾಗಾಗಿ ಹೊಸ ಮೂವಿ ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ : ಅಪ್ಪುಗೆ ರಾಜ್ಯ ಸರ್ಕಾರದ ಗೌರವ : ಸದ್ಯದಲ್ಲೇ ಘೋಷಣೆಯಾಗಲಿದ್ಯಾ ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯ್ತಿ
ಇದನ್ನೂ ಓದಿ : ಸಿನಿಮಾ ಹೇಗಿತ್ತು ಅಂತ ಕೇಳೋಕೆ ಪುನೀತ್ ಪೋನ್ ಮಾಡಲ್ಲ: ಭಾವುಕರಾದ ಶಿವಣ್ಣ
( Actor Dhanush Special tweet for ex-wife Aishwarya)