ಬೆಂಗಳೂರು : actor diganth injured : ಸ್ಯಾಂಡಲ್ವುಡ್ನ ದೂದ್ಪೇಡ ದಿಗಂತ್ ಗೋವಾದಲ್ಲಿ ಮಸ್ತಿ ಮಾಡಲು ಹೋಗಿ ಅವಘಡ ಮಾಡಿಕೊಂಡಿದ್ದಾರೆ. ಸಮ್ಮರ್ ಸಾಲ್ಟ್ ಹೊಡೆಯುವ ವೇಳೆಯಲ್ಲಿ ನಟ ದಿಗಂತ್ ಕತ್ತಿಗೆ ಬಲವಾದ ಪೆಟ್ಟು ಬಿದ್ದಿದೆ. ಕುಟುಂಬಸ್ಥರ ಜೊತೆಯಲ್ಲಿ ಗೋವಾ ಬೀಚ್ನಲ್ಲಿ ಜಾಲಿ ಮಾಡುತ್ತಿದ್ದ ನಟ ದಿಗಂತ್ ಈ ಅಪಘಾತದ ಬಳಿಕ ಆಸ್ಪತ್ರೆ ಸೇರಿದ್ದಾರೆ.
ಗೋವಾದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ನಟ ದಿಗಂತ್ ಆಗಮಿಸಲಿದ್ದಾರೆ. ಸದಾ ಸೈಕ್ಲಿಂಗ್, ಟ್ರೆಕ್ಕಿಂಗ್ ಎಂದುಕೊಂಡು ಡಿಫರೆಂಟ್ ಆಗಿ ಏನಾದರೊಂದು ಮಾಡುತ್ತಿದ್ದ ನಟ ದಿಗಂತ್ರಿಗೆ ಅಪಘಾತ ನಡೆದ ಸುದ್ದಿ ಕೇಳಿ ಸ್ಯಾಂಡಲ್ವುಡ್ನ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ನಟ ದಿಗಂತ್ಗೆ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿರುವ ಯೋಗರಾಜ್ ಭಟ್ ಕೂಡ ಈ ಘಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ .
ಈ ವಿಚಾರವಾಗಿ ಮಾತನಾಡಿರುವ ನಿರ್ದೇಶಕ ಯೋಗರಾಜ್ ಭಟ್, ಸಮುದ್ರ ತೀರದಲ್ಲಿ ಪಲ್ಟಿ ಹೊಡೆಯಲು ಹೋಗಿ ನಟ ದಿಗಂತ್ ಈ ಏಟು ಮಾಡಿಕೊಂಡಿದ್ದಾರೆ. ಗಾಳಿಪಟ 2 ಸಿನಿಮಾ ರಿಲೀಸ್ ಹಂತದಲ್ಲಿರುವಾಗ ನಟ ದಿಗಂತ್ಗೆ ಈ ರೀತಿ ತೊಂದರೆ ಉಂಟಾಗಿರುವುದು ನಿಜಕ್ಕೂ ನನಗೆ ನೋವು ತಂದಿದೆ. ನಾನು ಈಗಲೇ ಮಣಿಪಾಲ ಆಸ್ಪತ್ರೆಗೆ ತೆರಳುತ್ತೇನೆ ಎಂದು ಹೇಳಿದ್ದಾರೆ.
ನಟ ದಿಗಂತ್ ಗೋವಾದಲ್ಲಿ ಸಮ್ಮರ್ ಶಾಟ್ ಹೊಡೆಯಲು ಹೋಗಿ ಕತ್ತಿಗೆ ಏಟು ಮಾಡಿಕೊಂಡಿದ್ದಾರೆಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಆದರೆ ನಟ ದಿಗಂತ್ ಪ್ರಸ್ತುತ ಯಾವ ಸ್ಥಿತಿಯಲ್ಲಿದ್ದಾರೆ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.
ಚಂದನವನದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ದಿಗಂತ್ ಗಾಳಿಪಟ, ಲೈಫು ಇಷ್ಟೇನೆ, ಪಂಚರಂಗಿ ಸಿನಿಮಾಗಳ ಮೂಲಕ ಹೆಚ್ಚು ಖ್ಯಾತಿಯನ್ನು ಗಳಿಸಿದ್ದಾರೆ. ಚಂದನವನದ ದೂದ್ ಪೇಡಾ ಅಂತಲೇ ಖ್ಯಾತಿ ಪಡೆದಿರುವ ನಟ ದಿಗಂತ್ರ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ಕೆಲವು ದಿನಗಳ ಹಿಂದೆಯಷ್ಟೇ ತೆರೆ ಕಂಡಿದೆ. ಪ್ರಸ್ತುತ ನಟ ದಿಗಂತ್ ಗಾಳಿಪಟ 2 ಸಿನಿಮಾದ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದರು.
ನಟ ದಿಗಂತ ಕೆಲವು ವರ್ಷಗಳ ಹಿಂದೆ ವಿದೇಶದಲ್ಲಿ ಸಿನಿಮಾ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ವೇಳೆ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದರು. ಸ್ವತಃ ದಿಗಂತ್ರೇ ಈ ಅವಘಡದ ಬಗ್ಗೆ ಮಾಹಿತಿಯನ್ನು ನೀಡಿದ್ದರು.
ಇದನ್ನು ಓದಿ : Ayodhya Ram Mandir : ರಾಮಮಂದಿರ ನಿರ್ಮಾಣ ಸಮಿತಿಗೆ ಶಾಕ್ : ದೇಣಿಗೆ ಮೊತ್ತದ 22 ಕೋಟಿ ರೂ. ಚೆಕ್ ತಿರಸ್ಕೃತ
ಇದನ್ನೂ ಓದಿ : diganth : ಕಣ್ಣಿಗೆ ಏಟು… ಕತ್ತಿಗೆ ಪೆಟ್ಟು..ದಿಗಂತ್ ಲೈಫಲ್ಲಿ ಸಾಲು ಸಾಲು ಸಂಕಷ್ಟ..!
actor diganth injured in goa director yogaraj bhat reaction gaalipata-2