Coach Rahul Dravid : ಇಂಗ್ಲೆಂಡ್‌ನಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಂಡ ಕೋಚ್ ದ್ರಾವಿಡ್

ಲೀಸೆಸ್ಟರ್: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ (Team India head coach Rahul Dravid), ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಕಾರಣ, ಇಂಗ್ಲೆಂಡ್’ಗೆ (India Tour of England) ಪ್ರಯಾಣ ಬೆಳೆಸಿದ್ದ ಭಾರತ ತಂಡದ ಜೊತೆ ದ್ರಾವಿಡ್ ತೆರಳಿರಲಿಲ್ಲ. ಟೀಮ್ ಇಂಡಿಯಾ ಆಟಗಾರರು ಜೂನ್ 16ರಂದೇ ಮುಂಬೈನಿಂದ ದುಬೈ ಮಾರ್ಗವಾಗಿ ಲಂಡನ್”ಗೆ ತೆರಳಿದಿದ್ರು. ಆದರೆ ರಾಹುಲ್ ದ್ರಾವಿಡ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಕಾರಣ ಭಾರತದ್ದೇ ಉಳಿದುಕೊಂಡಿದ್ದರು.

ಭಾನುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 5ನೇ ಟಿ20 ಪಂದ್ಯ ಮಳೆಯಿಂದ ರದ್ದಾಗಿತ್ತು. ಸರಣಿ ಮುಗಿದ ಬೆನ್ನಲ್ಲೇ ಸೋಮವಾರ ಬೆಂಗಳೂರಿನಿಂದ ಲಂಡನ್”ಗೆ ಪ್ರಯಾಣ ಬೆಳೆಸಿದ ದ್ರಾವಿಡ್, ಮಂಗಳವಾರ ಲೀಸೆಸ್ಟರ್”ನಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಟಿ20 ತಂಡದಲ್ಲಿದ್ದ ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ ಕೂಡ ಇಂಗ್ಲೆಂಡ್’ಗೆ ತೆರಳಿದ್ದಾರೆ.

ಕಳೆದ ವರ್ಷ ಮೊಟಕುಗೊಂಡಿದ್ದ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಜುಲೈ 1ರಂದು ಎಡ್ಜ್’ಬಾಸ್ಟನ್”ನಲ್ಲಿ ಆರಂಭವಾಗಲಿದೆ. ಆ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ, ಲೀಸೆಸ್ಟರ್”ಶೈರ್ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. 4 ದಿನಗಳ ಈ ಅಭ್ಯಾಸ ಪಂದ್ಯ ಶುಕ್ರವಾರ ಆರಂಭ ವಾಗಲಿದೆ.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : ICC T20 World Cup : ಇದೇ ಟೀಮ್ ಇಂಡಿಯಾದ ಬೆಸ್ಟ್ ಪ್ಲೇಯಿಂಗ್ XI ; ಇದು News Next ಚಾಯ್ಸ್

ಇದನ್ನೂ ಓದಿ : Exclusive : KSCA ಆಯ್ಕೆ ಸಮಿತಿಯೊಂದಿಗೆ ಮನಸ್ತಾಪ ; ಕರ್ನಾಟಕ ತೊರೆಯಲು ಕೆ.ಗೌತಮ್ ನಿರ್ಧಾರ ?

ಇದನ್ನೂ ಓದಿ : Ashwin tests Covid Positive : ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್‌ಗೆ ಕೋವಿಡ್ ಪಾಸಿಟಿವ್

ಇದನ್ನೂ ಓದಿ : Rahul Dravid : ಆ ಆಟಗಾರನ ಪರ ನಿಂತಿದ್ದಕ್ಕೆ ಕೋಚ್ ದ್ರಾವಿಡ್ ವಿರುದ್ಧ ಫ್ಯಾನ್ಸ್ ಕೆಂಡಾಮಂಡಲ

Team India head coach Rahul Dravid has joined the Test squad in Leicester

Comments are closed.