Dunia Vijay :ಸಲಗ ಸಿನಿಮಾದ ಬಳಿಕ ದುನಿಯಾ ವಿಜಯ್ಗೆ ಸಿನಿಮಾ ಲೋಕದಲ್ಲಿ ಮತ್ತೊಂದು ಸುವರ್ಣಯುಗ ಆರಂಭವಾಯ್ತು ಎಂದು ಹೇಳಿದರೂ ತಪ್ಪಾಗಲಾರದು. ದುನಿಯಾ ಸಿನಿಮಾದ ಹಿಟ್ ಬಳಿಕ ದುನಿಯಾ ವಿಜಯ್ ಸಿನಿಮಾದ ಮೂಲಕ ಸುದ್ದಿ ಮಾಡಿದ್ದಕ್ಕಿಂತ ವಿವಾದಗಳ ಮೂಲಕ ಸುದ್ದಿ ಮಾಡಿದ್ದೇ ಹೆಚ್ಚು. ಮಾಸ್ತಿ ಗುಡಿ ಸಿನಿಮಾ ದುರಂತ, ಮೊದಲ ಪತ್ನಿ ಜೊತೆಗಿನ ಗಲಾಟೆ, ಸ್ನೇಹಿತರ ಜೊತೆ ಜಟಾಪಟಿ ಹೀಗೆ ದುನಿಯಾ ವಿಜಯ್ ಒಳ್ಳೆಯ ಕಾರಣಗಳಿಗೆ ಸುದ್ದಿಯಲ್ಲಿ ಇರ್ತಾನೇ ಇರಲಿಲ್ಲ. ಆದರೆ ಇದೀಗ ದುನಿಯಾ ವಿಜಯ್ ಭಾಗ್ಯ ಬದಲಾದಂತಿದೆ. ಸಲಗ ಸಿನಿಮಾ ಸಕ್ಸಸ್ ಬಳಿಕ ನಟ ವಿಜಯ್ ಕುಮಾರ್ ಇದೀಗ ಟಾಲಿವುಡ್ ಅಂಗಳಕ್ಕೂ ಪದಾರ್ಪಣೆ ಮಾಡುತ್ತಿದ್ದಾರೆ.
ಹೌದು..! ಸಲಗ ಸಕ್ಸಸ್ನಿಂದಲೇ ಫುಲ್ ಖುಶ್ ಆಗಿದ್ದ ದುನಿಯಾ ವಿಜಯ್ಗೆ ಮತ್ತೊಂದು ಜಾಕ್ಪಾಟ್ ಹೊಡೆದಿದೆ. ತೆಲಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ನಟಿಸಲಿರುವ ಹೊಸ ಸಿನಿಮಾದಲ್ಲಿ ಅಭಿನಯಿಸಲು ನಟ ದುನಿಯಾ ವಿಜಯ್ಗೆ ಚಾನ್ಸ್ ಸಿಕ್ಕದೆಂತೆ. ಈ ಬಗ್ಗೆ ಈ ಹಿಂದೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಆದರೆ ಇದೀಗ ಟಾಲಿವುಡ್ಗೆ ದುನಿಯಾ ವಿಜಯ್ ಕಾಲಿಡುತ್ತಿರೋದರ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.
Very happy to welcome the Sandalwood Sensation #DuniyaVijay on board to #NBK107 🎉😊
— Gopichandh Malineni (@megopichand) January 3, 2022
Redefines the Villainism with #NBK107 👍🏻
NataSimham #NandamuriBalakrishna @shrutihaasan @officialviji @MusicThaman @MythriOfficial pic.twitter.com/x6mYe37rzu
ಈ ಸಿನಿಮಾದ ನಿರ್ದೇಶನ ಮಾಡಲಿರುವ ಗೋಪಿಚಂದ್ ಮಲಿನೇನಿ ನಟ ದುನಿಯಾ ವಿಜಯ್ಗೆ ಸಿನಿಮಾಗೆ ಸ್ವಾಗತ ಕೋರಿ ಪೋಸ್ಟರ್ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣನ್ರಿಗೆ ಜೋಡಿಯಾಗಿ ನಟಿ ಶೃತಿ ಹಾಸನ್ ಕಾಣಿಸಿಕೊಳ್ಳಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ನಡಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗೆ ಇನ್ನೂ ಪಾತ್ರಗಳನ್ನು ಆಯ್ಕೆ ಮಾಡಲಾಗುತ್ತಿದೆ. ಇದೊಂದು ನೈಜ ಘಟನೆ ಆಧಾರಿತ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.
ಸಲಗ ಸಿನಿಮಾ ಮೂಲಕ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ವೃತ್ತಿಗೆ ಇಳಿದಿದ್ದರೂ ಸಹ ಮೊದಲ ಪ್ರಯತ್ನದಲ್ಲಿಯೇ ದುನಿಯಾ ವಿಜಯ್ ಸೈ ಎನಿಸಿಕೊಂಡಿದ್ದಾರೆ. ಕೊರೊನಾ ಎರಡನೇ ಅಲೆ ಬಳಿಕ ಧೈರ್ಯದಿಂದ ಸಿನಿಮಾ ರಿಲೀಸ್ ಮಾಡಿ ಹೌಸ್ಫುಲ್ ಪ್ರದರ್ಶನ ಕಾಣುವ ಮೂಲಕ ಸ್ಯಾಂಡಲ್ವುಡ್ನ ಇತರೆ ಸಿನಿಮಾಗಳ ಬಿಡುಗಡೆಗೂ ಧೈರ್ಯ ತುಂಬುವ ಕೆಲಸವನ್ನು ದುನಿಯಾ ವಿಜಯ್ ಮಾಡಿದ್ದಾರೆ. ಇದೀಗ ಟಾಲಿವುಡ್ನಲ್ಲೂ ದುನಿಯಾ ವಿಜಯ್ ಕಮಾಲ್ ನೋಡೋಕೆ ಅಭಿಮಾನಿಗಳು ಕಾತುರರಾಗಿದ್ದಾರೆ.
actor dunia vijay to act in tollywood movie
ಇದನ್ನು ಓದಿ : jote joteyali big twist : ಜೊತೆ ಜೊತೆಯಲಿ ಮೇಲೆ ಮುನಿಸಿಕೊಂಡ ಪ್ರೇಕ್ಷಕ: ಆರ್ಯವರ್ಧನ್ ಮೇಲೆಯೇ ವೀಕ್ಷಕರ ಆಕ್ರೋಶ
ಇದನ್ನೂ ಓದಿ : Nandi milk puneeth photo : ನಂದಿನಿ ಹಾಲಿನ ಪ್ಯಾಕೇಟ್ ಮೇಲೆ ಅಪ್ಪು ಪೋಟೋ: ಕೆಎಂಎಫ್ ಅಧಿಕಾರಿಗಳು ಹೇಳಿದ್ದೇನು ಗೊತ್ತಾ?!