BlackBerry OS smartphone : ನಾಳೆಯಿಂದ ಕಾರ್ಯನಿರ್ವಹಿಸುವುದಿಲ್ಲ ಈ ಮೊಬೈಲ್​ ಫೋನ್​

BlackBerry OS smartphone :ಈಗ ಏನಿದ್ದರೂ ಯಾರ ಕೈಯಲ್ಲಿ ನೋಡಿದರೂ ನಿಮಗೆ ಸ್ಮಾರ್ಟ್​ ಫೋನ್​ಗಳೇ ಕಾಣುತ್ತದೆ. ಆದರೆ ಈ ಸ್ಮಾರ್ಟ್​ಫೋನ್​​ಗಳು ಬರುವ ಮುಂಚೆ ಬ್ಲ್ಯಾಕ್​ ಬೆರಿ ಫೋನ್​ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದ್ದವು. ಕ್ವರ್ಟಿ ಕೀಪ್ಯಾಡ್​ಗಳನ್ನು ಹೊಂದಿದ್ದ ಈ ಮೊಬೈಲ್​ ಫೋನ್​ಗಳು ಯುವ ಜನತೆಯ ಪಾಲಿಗೆ ಹಾಟ್​ ಫೇವರಿಟ್​ ಆಗಿತ್ತು. ಈಗಲೂ ಅನೇಕರ ಬಳಿಯಲ್ಲಿ ಈ ಬ್ಲ್ಯಾಕ್​ ಬೆರಿ ಕ್ವರ್ಟಿ ಕೀಪ್ಯಾಡ್​ ಫೋನ್​ಗಳು ಇದ್ದಿರಬಹುದು.


ನೀವೂ ಕೂಡ ಈ ಫೋನ್​ಗಳನ್ನು ಬಳಕೆ ಮಾಡುವವರಾಗಿದ್ದರೆ ನಿಮಗೊಂದು ಶಾಕಿಂಗ್​ ಸುದ್ದಿ ಕಾದಿದೆ. ಅದೇನೆಂದರೆ ನಾಳೆಯಿಂದ ಈ ಕಂಪನಿಯು ತನ್ನ ಕ್ಲಾಸಿಕ್​​ ಫೋನ್​​ ಕಾರ್ಯ ನಿರ್ವಹಿಸೋದಿಲ್ಲ. ಈ ಬಗ್ಗೆ ಬ್ಲ್ಯಾಕ್​ ಬೆರಿ ಫೋನ್​ಗಳು ಅಧಿಕೃತ ಘೋಷಣೆ ಮಾಡಿವೆ.


ಈ ಸಂಬಂಧ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಣೆ ಹೊರಡಿಸಿರುವ ಬ್ಲ್ಯಾಕ್​ ಬೆರಿ ಕಂಪನಿಯು ಜನವರಿ ನಾಲ್ಕರಿಂದ ಬ್ಲ್ಯಾಕ್‌ಬೆರಿ 7.1 OS ಹಾಗೂ ಬ್ಲ್ಯಾಕ್‌ಬೆರಿ 10 ಸಾಫ್ಟ್‌ವೇರ್ , ಬ್ಲ್ಯಾಕ್‌ಬೆರಿ ಪ್ಲೇಬುಕ್ OS 2.1 ಹಾಗೂ ಇದಕ್ಕಿಂತ ಹಳೆಯ ಫೋನ್​ಗಳು ಕಾರ್ಯ ನಿರ್ವಹಿಸೋದಿಲ್ಲ ಎಂದು ಹೇಳಿದೆ.


ಅಂದರೆ ಈ ಮೊಬೈಲ್​ ಫೋನ್​ಗಳನ್ನು ಹೊಂದಿರುವ ಗ್ರಾಹಕರಿಗೆ ನಾಳೆಯಿಂದ ಡೇಟಾ ಸೌಕರ್ಯ ಸಿಗೋದಿಲ್ಲ. ಅದು ಮಾತ್ರವಲ್ಲದೇ ಫೋನ್​ ಕರೆ, ಎಸ್​ಎಂಎಸ್​ ಬಳಕೆ, ವೈ ಫೈ ಬಳಕೆ ಹೀಗೆ ಯಾವುದೇ ಸೌಲಭ್ಯಗಳನ್ನೂ ಬಳಕೆ ಮಾಡುವುದು ಸಾಧ್ಯವಿಲ್ಲ ಎಂದು ಕಂಪನಿಯು ಹೇಳಿದೆ.


ಒಂದು ಕಾಲದಲ್ಲಿ ಯುವಜನತೆಯ ಕನಸಿನ ಫೋನ್​ ಎಂದೇ ಕರೆಯಿಸಿಕೊಳ್ತಿದ್ದ ಬ್ಲ್ಯಾಕ್​ ಬೆರ್ರಿಯ ಫೋನ್​ಗಳು ಕಾಲಾಂತರದಲ್ಲಿ ಒಂದೊಂದಾಗಿಯೇ ಮೂಲೆಗೆ ಸರಿದಂತಾಗಿದೆ. 2013ರಲ್ಲಿ ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡಬೇಕೆಂಬ ಉದ್ದೇಶದಿಂದ ಕಂಪನಿಯು ಬ್ಲಾಕ್​ಬೆರಿ 10ನ್ನು ಮಾರುಕಟ್ಟೆಗೆ ತಂದಿತ್ತು. ಇದಾದ ಬಳಿಕ 2015 ರಲ್ಲಿ ಆಂಡ್ರಾಯ್ಡ್​ಗೂ ಶಿಫ್ಟ್​ ಆಯಿತು. ಸ್ಯಾಮ್​ಸಂಗ್​ , ಆ್ಯಪಲ್​ಗಳಂತಹ ಫೋನ್​ಗಳಿಗೆ ಬ್ಲ್ಯಾಕ್​ ಬೆರಿ ಸಾಕಷ್ಟು ಪೈಪೋಟಿ ನೀಡಿಲು ಯತ್ನಿಸಿದರೂ ಸಹ ಯಾವುದೂ ಪ್ರಯೋಜನವಾಗಲಿಲ್ಲ.ಕೊನೆಯ ಬಾರಿಗೆ ಬ್ಲ್ಯಾಕ್​ ಬೆರಿ ಕಿ 2 ಎಲ್​ಇ ಬ್ರ್ಯಾಂಡ್​ ಮಾರುಕಟ್ಟೆಗೆ ತಂದಿದ್ದ ಕಂಪನಿಯು 2020ರ ಫೆಬ್ರವರಿ ತಿಂಗಳಿನಲ್ಲಿ ಇನ್ಮುಂದೆ ಬ್ಲಾಕ್​ಬೆರಿ ಫೋನ್​ಗಳನ್ನು ತಯಾರಿಸುವುದಿಲ್ಲ ಎಂದು ಘೋಷಣೆ ಮಾಡಿದೆ.

BlackBerry OS smartphone will stop working properly from 4th January

ಇದನ್ನು ಓದಿ : Jio Airtel Vi 2022 Best Plans: ವರ್ಷಕ್ಕೆ ಒಂದೇ ಸಲ ರಿಚಾರ್ಜ್ ಮಾಡಿ ಹಣ ಉಳಿಸಿ; Jio, Airtel, Vi ಬೆಸ್ಟ್ ಪ್ಲಾನ್‌ಗಳ ವಿವರ ಇಲ್ಲಿದೆ

ಇದನ್ನೂ ಓದಿ : Quit Smoking in 2022 : ಮೊಬೈಲ್ ಆ್ಯಪ್ ಬಳಸಿಯೂ ಸ್ಮೋಕಿಂಗ್ ಬಿಡಬಹುದು: ಇಲ್ಲಿವೆ ಸ್ಮೋಕಿಂಗ್ ಬಿಡಲು ಟಾಪ್ 5 ಆ್ಯಪ್‌ಗಳು

Comments are closed.