ಬುಧವಾರ, ಏಪ್ರಿಲ್ 30, 2025
HomeBreakingKrathi kharbanda:ಕಂಬಕ್ಕೆ ಅಂಟಿಕೊಂಡ ಕೃತಿಕರಬಂದ….! ಮೈಬಳುಕಿಸೋ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ….!!

Krathi kharbanda:ಕಂಬಕ್ಕೆ ಅಂಟಿಕೊಂಡ ಕೃತಿಕರಬಂದ….! ಮೈಬಳುಕಿಸೋ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ….!!

- Advertisement -

ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಮನೋರಂಜನಾ ಕ್ಷೇತ್ರ ಸ್ತಬ್ಧಗೊಂಡಿದೆ. ಹೀಗಾಗಿ ನಟ-ನಟಿಯರೆಲ್ಲ ಮನೆಯಲ್ಲೇ ವರ್ಕೌಟ್ ಮಾಡುತ್ತ ವಿಡಿಯೋ ಪೋಸ್ಟ್ ಮಾಡುತ್ತ ಎಂಜಾಯ್ ಮಾಡ್ತಿದ್ದಾರೆ. ಇದೀಗ  ಈ ಸಾಲಿಗೆ ಕೃತಿ ಕರಬಂದ್ ಹೊಸ ಸೇರ್ಪಡೆ, ತಮ್ಮ ಫೆವರಿಟ್ ಪೋಲ್ ಡ್ಯಾನ್ಸ್ ವಿಡಿಯೋ ಜೊತೆ ಕೃತಿ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.

ನಟಿ ಕೃತಿ ಕರಬಂದ್ ಅವರಿಗೆ ಪೋಲ್ ಡ್ಯಾನ್ಸಿಂಗ್ ಎಂದರೇ ತುಂಬ ಇಷ್ಟವಂತೆ. ಹೀಗಾಗಿ ಸದಾ ಕೃತಿ ಪೋಲ್ ಡ್ಯಾನ್ಸ್ ಮಾಡೋಕೆ ಕೃತಿ ಹಾತೊರೆಯುತ್ತಾರಂತೆ. ಪೋಲ್ ಡ್ಯಾನ್ಸ್ ನಲ್ಲಿ ಹೆಚ್ಚು ಆನಂದವಿದೆ ಮತ್ತು ಅದರಿಂದ ತೃಪ್ತಿ ದೊರೆಯುತ್ತದೆ ಎಂದು ಕೃತಿ ಹೇಳಿಕೊಂಡಿದ್ದಾರೆ.

https://www.instagram.com/p/CQbEiyFHZhO/?utm_medium=copy_link

ಅಷ್ಟೇ ಅಲ್ಲ  ಹಿಂದೆ ಕಪ್ಪು ಬಣ್ಣದ ಉಡುಗೆ ತೊಟ್ಟು ಮೈಬಳುಕಿಸುತ್ತ ಪೋಲ್ ಡ್ಯಾನ್ಸ್ ಮಾಡಿದ ವಿಡಿಯೋವೊಂದನ್ನು ಕೃತಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಪೋಲ್ ಡ್ಯಾನ್ಸ್ ವಿಡಿಯೋ ಹಂಚಿಕೊಂಡು ಮನೆಯಲ್ಲೂ ಇಂತಹುದೇ ಪೋಲ್ ವೊಂದನ್ನು ಅಳವಡಿಸಿಕೊಳ್ಳಬೇಕಿತ್ತು. ಪೋಲ್ ಇಲ್ಲದೇ ಇರೋದರಿಂದ ಡ್ಯಾನ್ಸ್ ಮಾಡಲಾಗುತ್ತಿಲ್ಲ ಎಂಬ ಬೇಸರವಿದೆ ಎಂದಿದ್ದಾರೆ.

ಅಷ್ಟೇ ಅಲ್ಲ ಲಾಕ್ ಡೌನ್ ತೆರವಾದ ಬಳಿಕ ನಾನು ಪೋಲ್ ಡ್ಯಾನ್ಸ್ ನಲ್ಲಿ ತೊಡಗಿಕೊಳ್ಳುತ್ತೇನೆ. ಯಾಕೆಂದರೆ ನಾನು ಇದನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀವು ಏನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದು ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ.

RELATED ARTICLES

Most Popular