ಈ ವರ್ಷ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಅಭಿಮಾನಿಗಳಿಗೆ ಹಬ್ಬ. ಯಾಕೆಂದರೆ, 2023ಯಲ್ಲಿ ಕಮ್ಮಿ ಅಂದ್ರೂ ಪ್ರಭಾಸ್ ನಟನೆಯ ಎರಡು ಸಿನಿಮಾ ರಿಲೀಸ್ ಆಗೋದು ಫಿಕ್ಸ್. ಇದೇ ಖುಷಿಯಲ್ಲಿ ಮೂರನೇ ಸಿನಿಮಾದ ರಿಲೀಸ್ ಡೇಟ್ (Project K Movie Release Date) ಕೂಡ ಅನೌನ್ಸ್ ಆಗಿದೆ. ಪ್ರಭಾಸ್, ದೀಪಿಕಾ ಪಡುಕೋಣೆ ಹಾಗೂ ಅಮಿತಾಬ್ ಬಚ್ಚನ್ ಕಾಂಬಿನೇಷನ್ ಸಿನಿಮಾ ನೋಡುವುದಕ್ಕೆ ಇಡೀ ದೇಶವೇ ಕಾಯುತ್ತಿದೆ. ಈ ಹೊತ್ತಲ್ಲೇ ಮಹಾಶಿವರಾತ್ರಿಯ ಈ ಶುಭ ಸಂದರ್ಭದಲ್ಲಿ ‘ಪ್ರಾಜೆಕ್ಟ್ ಕೆ’ ಸಿನಿತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
“ಮಹಾನಟಿ” ಸಿನಿಮಾ ನಿರ್ದೇಶಿಸಿದ್ದ ನಾಗ ಅಶ್ವಿನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೂವರೆಗೂ ಹೆಚ್ಚಿನದ್ದೇನನ್ನೂ ಅನೌನ್ಸ್ ಮಾಡದ ತಂಡ ನೇರವಾಗಿ ರಿಲೀಸ್ ಡೇಟ್ ಅನ್ನೇ ಅನೌನ್ಸ್ ಮಾಡಿದೆ. 2024 ಜನವರಿ 12ಕ್ಕೆ ಈ ‘ಪ್ರಾಜೆಕ್ಟ್ ಕೆ’ ರಿಲೀಸ್ ಆಗಲಿದ್ದು, ಅದೇ ಡೇಟ್ ಯಾಕೆ ಎನ್ನುವುದನ್ನು ಸಿನಿತಂಡ ತಿಳಿಸಿದೆ. ಹೆಚ್ಚು ಕಡಿಮೆ ಒಂದು ವರ್ಷದ ಮುನ್ನ ಬಿಡುಗಡೆ ದಿನವನ್ನು ಅನೌನ್ಸ್ ಮಾಡಿದ್ದು ಯಾಕೆ? ಅನ್ನೋದಕ್ಕೆ ಉತ್ತರ ಸಿಂಪಲ್ ಸಂಕ್ರಾಂತಿ ಬಾಕ್ಸಾಫೀಸ್ ಎಂದಿದೆ. ಮಹಾಶಿವರಾತ್ರಿ ಹಬ್ಬದ ಈ ಶುಭ ಸಂದರ್ಭದಲ್ಲಿ ‘ಪ್ರಾಜೆಕ್ಟ್ ಕೆ’ ತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. 2024 ಜನವರಿ 12ರಂದು ಸಿನಿಮಾ ರಿಲೀಸ್ ಮಾಡೋದಾಗಿ ಸಿನಿತಂಡ ಹೇಳಿಕೊಂಡಿದೆ.
𝟏𝟐-𝟏-𝟐𝟒 𝐢𝐭 𝐢𝐬! #𝐏𝐫𝐨𝐣𝐞𝐜𝐭𝐊
— Vyjayanthi Movies (@VyjayanthiFilms) February 18, 2023
Happy Mahashivratri.#Prabhas @SrBachchan @deepikapadukone @nagashwin7 @VyjayanthiFilms pic.twitter.com/MtPIjW2cbw
ಪ್ಯಾನ್ ಇಂಡಿಯಾ ಸಿನಿಮಾ ‘ಪ್ರಾಜೆಕ್ಟ್ ಕೆ’ ಸಂಕ್ರಾಂತಿ ಮೇಲೆ ಕಣ್ಣಿಟ್ಟಿದೆ. ಟಾಲಿವುಡ್ ಮಂದಿಗೆ ಸಂಕ್ರಾಂತಿ ಹಬ್ಬ ತುಂಬಾನೇ ಸ್ಪೆಷಲ್. ಈ ವೇಳೆ ರಿಲೀಸ್ ಆದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆಯನ್ನೇ ಬರೆಯುತ್ತದೆ. ಈ ವರ್ಷ ಕೂಡ ಚಿರಂಜೀವಿ ಹಾಗೂ ಬಾಲಕೃಷ್ಣ ಕಾಂಪಿಟೇಷನ್‌ಗೆ ಬಿದ್ದು ಸಿನಿಮಾ ರಿಲೀಸ್ ಮಾಡಿದ್ದರು. ಮುಂದಿನ ಸಂಕ್ರಾಂತಿಗೆ ‘ಪ್ರಾಜೆಕ್ಟ್ ಕೆ’ ಬಾಕ್ಸಾಫೀಸ್ ಅಖಾಡಕ್ಕೆ ಇಳಿಯಲಿದೆ. ನಟ ಪ್ರಭಾಸ್ ‘ಪ್ರಾಜೆಕ್ಟ್ ಕೆ’ 2024 ಜನವರಿ 12ಕ್ಕೆ ರಿಲೀಸ್ ಆಗುತ್ತಿದೆ. ಅದೇ ಹೃತಿಕ್ ರೋಷನ್ ಅಭಿನಯದ ‘ಫೈಟರ್’ ಸಿನಿಮಾ ಕೂಡ ಎರಡು ವಾರ ಗ್ಯಾಪ್ ಕೊಟ್ಟು ಬಿಡುಗಡೆಯಾಗುತ್ತಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಬಾರಿ ದೊಡ್ಡ ಕ್ಲ್ಯಾಶ್ ಆಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಮಹಾಶಿವರಾತ್ರಿಯಂದು ನಟ ಶಿವ ರಾಜ್‌ಕುಮಾರ್ ಅಭಿನಯದ ‘ಭೈರತಿ ರಣಗಲ್’ ಪ್ರೀಕ್ವೆಲ್ ಅನೌನ್ಸ್
ಇದನ್ನೂ ಓದಿ : 3 ವರ್ಷ ನಟ ದರ್ಶನ್ ಫುಲ್ ಬ್ಯುಸಿ : 56ರಿಂದ 60ನೇ ಸಿನಿಮಾಗಳ ಲಿಸ್ಟ್ ಔಟ್!
ಇದನ್ನೂ ಓದಿ : Kabza Namami Song : ಬಾಲಿವುಡ್‌ಗೆ ಸೆಡ್ಡು ಹೊಡೆಯುತ್ತಿದೆ ಕಬ್ಜ ಸಾಂಗ್ : ನಮಾಮಿ ಎನ್ನುತ್ತ ಮನಗೆದ್ದ ಶ್ರೀಯಾ ಶರಣ್
ಎಲ್ಲಕ್ಕಿಂತ ಹೆಚ್ಚಾಗಿ ಎರಡೂ ಸಿನಿಮಾಗಳಲ್ಲೂ ದೀಪಿಕಾ ಪಡುಕೋಣೆಯೇ ನಾಯಕಿಯಾಗಿರೋದ್ರಿಂದ ಎರಡೂ ಸಿನಿಮಾಗಳ ಮೇಲೂ ಎಫೆಕ್ಟ್ ಆಗುವ ಸಾಧ್ಯತೆಯಿದೆ. “ಪ್ರಾಜೆಕ್ಟ್ ಕೆ” ಸಿನಿಮಾದ ಬಜೆಟ್ ಸುಮಾರು 500 ಕೋಟಿ ರೂ. ಇಡೀ ಸಿನಿಮಾ ಬಹುತೇಕ ವಿಎಫ್‌ಎಕ್ಸ್ ಹೆಚ್ಚಿರುತ್ತೆ. ಅಲ್ಲದೆ ‘ಪ್ರಾಜೆಕ್ಟ್ ಕೆ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲದೆ ದೊಡ್ಡ ಸ್ಟಾರ್ ಕಾಸ್ಟ್ ಇರುವುದರಿಂದ ಸಿನಿಮಾ ಬಗ್ಗೆ ನಿರೀಕ್ಷೆಗಳು ಹೆಚ್ಚಿದೆ. ಇನ್ನು ರಿಲೀಸ್ ಡೇಟ್ ಅನೌನ್ಸ್ ಆಗಿರೋದ್ರಿಂದ ಬೇರೆ ತೆಲುಗು ಸಿನಿಮಾವೇನಾದ್ರೂ ಟಕ್ಕರ್ ಕೊಡುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ.
Actor Prabhas starrer Project K Movie Release Date announced on Mahashivaratri