Smriti Mandhana RCB captain : ಮಹಿಳಾ ಪ್ರೀಮಿಯರ್ ಲೀಗ್: ರಾಯಲ್ ಚಾಲೆಂಜರ್ಸ್ ತಂಡದ ನಾಯಕಿಯ ಹೆಸರನ್ನು ಘೋಷಿಸಿದ ವಿರಾಟ್ ಕೊಹ್ಲಿ

ಬೆಂಗಳೂರು: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (Women’s Premier League – WPL 2023) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವನ್ನು ಟೀಮ್ ಇಂಡಿಯಾದ ಸ್ಟಾರ್ ಎಡಗೈ ಬ್ಯಾಟರ್ ಸ್ಮೃತಿ ಮಂಧನ (Smriti Mandhana RCB captain) ಮುನ್ನಡೆಸಲಿದ್ದಾರೆ.

ಸ್ಮೃತಿ ಮಂಧನ ಅವರನ್ನು ತಂಡದ ನಾಯಕಿಯನ್ನಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನೇಮಕ ಮಾಡಿದೆ. ಆರ್’ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ, ಮಹಿಳಾ ಪ್ರೀಮಿಯರ್ ಲೀಗ್”ನಲ್ಲಿ ಸ್ಮೃತಿ ಮಂಧನ ಅವರನ್ನು ರಾಯಲ್ ಚಾಲೆಂಜರ್ಸ್ ತಂಡದ ನಾಯಕಿಯನ್ನಾಗಿ ಘೋಷಣೆ ಮಾಡಿದ್ದು, ಈ ವೀಡಿಯೊವನ್ನು RCB ಫ್ರಾಂಚೈಸಿ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಿದೆ.

https://www.instagram.com/reel/Coyeaioh10P/?utm_source=ig_web_copy_link

ಫೆಬ್ರವರಿ 13ರಂದು ನಡೆದ ಆಟಗಾರ್ತಿಯರ ಹರಾಜಿನಲ್ಲಿ ಸ್ಮೃತಿ ಮಂಧನ ಅವರನ್ನು ಆರ್’ಸಿಬಿ ಫ್ರಾಂಚೈಸಿ ಟೂರ್ನಿಯಲ್ಲೇ ಅತೀ ಹೆಚ್ಚು 3.4 ಕೋಟಿ ರೂ. ಮೊತ್ತಕ್ಕೆ ಖರೀದಿಸಿತ್ತು. ಇದರೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್’ನ ದುಬಾರಿ ಆಟಗಾರ್ತಿಯಾಗಿ ಸ್ಮೃತಿ ಮಂಧನ ಮೂಡಿ ಬಂದಿದ್ದರು. ಟೀಮ್ ಇಂಡಿಯಾದ ಉಪನಾಯಕಿಯೂ ಆಗಿರುವ 26 ವರ್ಷದ ಸ್ಮೃತಿ ಮಂಧನ ಭಾರತ ಪರ ಒಟ್ಟು 113 ಟಿ20 ಪಂದ್ಯಗಳನ್ನಾಡಿದ್ದು, 27.15ರ ಸರಾಸರಿಯಲ್ಲಿ 20 ಅರ್ಧಶತಕಗಳ ಸಹಿತ 2661 ರನ್ ಕಲೆ ಹಾಕಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ (Women’s Premier League) ಆಡಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ:
ಸ್ಮೃತಿ ಮಂಧನ, ಎಲೀಸ್ ಪೆರಿ, ಸೋಫಿ ಡಿವೈನ್, ರೇಣುಕಾ ಸಿಂಗ್, ರಿಚಾ ಘೋಷ್, ಎರಿನ್ ಬರ್ನ್ಸ್, ದಿಶಾ ಕಸಟ್, ಇಂದ್ರಾಣಿ ರಾಯ್, ಶ್ರೇಯಾಂಕಾ ಪಾಟೀಲ್, ಕನ್ನಿಕಾ ಅಹುಜಾ, ಆಶಾ ಶೋಭನಾ, ಹೆದರ್ ನೈಟ್, ಡೇನ್ ವಾನ್ ನೀಕರ್ಕ್, ಪ್ರೀತಿ ಬೋಸ್, ಪೂನಮ್ ಖೆಮ್ನರ್, ಕೋಮಲ್ ಜನ್ಜಾದ್, ಮೆಗಾನ್ ಶುಟ್, ಸಹನಾ ಪವಾರ್.

ಇದನ್ನೂ ಓದಿ : Usman Khawaja : ಅಶ್ವಿನ್‌ಗೆ ಹಿಂದಿಯಲ್ಲಿ ಕೊಹ್ಲಿ ಸೀಕ್ರೆಟ್ ಮೆಸೇಜ್; “ನನಗೂ ಹಿಂದಿ ಬರತ್ತೆ” ಅಂದ ಆಸೀಸ್ ಆಟಗಾರ

ಇದನ್ನೂ ಓದಿ : IPL 2023 fixtures: ರಾಯಲ್ ಚಾಲೆಂಜರ್ಸ್‌ಗೆ ಮುಂಬೈ ಇಂಡಿಯನ್ಸ್ ಮೊದಲ ಎದುರಾಳಿ; ಇಲ್ಲಿದೆ ಆರ್‌ಸಿಬಿ ಪಂದ್ಯಗಳ ಕಂಪ್ಲೀಟ್ ಡೀಟೇಲ್ಸ್

ಇದನ್ನೂ ಓದಿ : Chetan Sharma resigns: ಸ್ಟಿಂಗ್ ಆಪರೇಷನ್’ಗೆ ತಲೆದಂಡ; ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹಾಯಕ ಸಿಬ್ಬಂದಿ :

  • ಹೆಡ್ ಕೋಚ್: ಬೆನ್ ಸಾಯರ್
  • ಸಹಾಯಕ ಕೋಚ್ & ಹೆಡ್ ಸ್ಕೌಟರ್: ಮಲೋಲನ್ ರಂಗರಾಜನ್
  • ಸ್ಕೌಟ್ & ಫೀಲ್ಡಿಂಗ್ ಕೋಚ್: ವನಿತಾ ವಿ.ಆರ್
  • ಬ್ಯಾಟಿಂಗ್ ಕೋಚ್: ಆರ್.ಎಕ್ಸ್ ಮುರಳಿ
  • ಟೀಮ್ ಮ್ಯಾನೇಜರ್ & ಟೀಮ್ ಡಾಕ್ಟರ್: ಡಾ.ಹರಿಣಿ
  • ಹೆಡ್ ಅಥ್ಲೆಟಿಕ್ ಥೆರಪಿಸ್ಟ್: ನವನೀತಾ ಗೌತಮ್
  • ಸ್ಟ್ರೆಂತ್ & ಕಂಡಿಷನಿಂಗ್ ಕೋಚ್: ಪ್ಯುಝೆಫಾ ತಲಿಬ್
  • ಹೆಡ್ ಫಿಸಿಯೊ: ಸವ್ಯಸಾಚಿ ಸಾಹೂ

Smriti Mandhana RCB captain : Women’s Premier League: Virat Kohli announced the name of Royal Challengers captain

Comments are closed.