ಬಾಲಿವುಡ್ ನಟಿ ಕಂಗನಾ ರಣಾವತ್ ದೇಶದಾದ್ಯಂತ ಭಾರಿ ಸುದ್ದಿಯಲ್ಲಿದ್ದಾರೆ. ಒಂದೆಡೆ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ, ಇನ್ನೊಂದಡೆ ಮಹಾರಾಷ್ಟ್ರ ಸರಕಾರದ ವಿರುದ್ದ ತೊಡೆ ತಟ್ಟಿರುವ ಕಂಗನಾ ರಾಣಾವತ್ ಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಈ ನಡುವಲ್ಲೇ ನಟ ಪ್ರಕಾಶ್ ರಾಜ್ ಕಂಗನಾ ರಾಣಾವತ್ ಕಾಲೆಳೋಕೆ ಹೋಗಿ ಇದೀಗ ಸ್ವತಃ ಟ್ರೋಲ್ ಆಗಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರ ಬಾಲಿವುಡ್ ನಲ್ಲಿ ನೆಪೋಟಿಸಂ ಇದೆ ಎಂದು ಕಂಗನಾ ಟೀಕಿಸಿದ್ದರು. ಇದರ ಬೆನ್ನಲ್ಲೇ ಬಾಲಿವುಡ್ ನಟಿ ಕಂಗನಾ ಕುರಿತು ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ಕಂಗನಾ ರಾಣಾವತ್ ಮಣಿಕರ್ಣಿಕಾ ಚಿತ್ರದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಪಾತ್ರದಲ್ಲಿ ಅಭಿನಯಿಸಿದ್ದ ಅವರು ಇದೀಗ ನಿಜ ಜೀವನದಲ್ಲೂ ಲಕ್ಷ್ಮೀಬಾಯಿ ಆಗಿಬಿಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದರು.

ಅಲ್ಲದೇ ಜಸ್ಟ್ ಆ್ಯಸ್ಕಿಂಗ್ ಹ್ಯಾಷ್ ಟ್ಯಾಗ್ ಮೂಲಕ ಪ್ರಕಾಶ್ ರೈ ಟ್ವೀಟ್ ಮಾಡಿರೋದಕ್ಕೆ ಸಾಕಷ್ಟು ಪರ ವಿರೋಧದ ಟೀಕೆಗಳು ಕೇಳಿಬರುತ್ತಿವೆ.
