ನಿತ್ಯಭವಿಷ್ಯ : 14-09-2020

0

ಮೇಷರಾಶಿ
ಆಪ್ತರಿಂದ ತೊಂದರೆ, ವ್ಯಾಪಾರದಲ್ಲಿ ಅಲ್ಪಲಾಭ, ಮನೆಯಲ್ಲಿ ದೇವತಾಕಾರ್ಯ, ಮಂಗಲ ಕಾರ್ಯಗಳು ನಡೆದಾವು. ಮಕ್ಕಳ ಬಗ್ಗೆ ಸಣ್ಣ ಪ್ರವಾಸವು ಕಂಡು ಬರುತ್ತದೆ. ಕ್ರಯವಿಕ್ರಯಗಳಲ್ಲಿ ಲಾಭಕರವಾದ ಆದಾಯ ತಂದೀತು. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ, ವಾಹನ ಸಂಚಾರದಿಂದ ತೊಂದರೆ.

ವೃಷಭರಾಶಿ
ಶ್ರೀ ಗುರುಗಳ ದರ್ಶನ ಭಾಗ್ಯದಿಂದ ಸಂತಸ ಸಿಗಲಿದೆ. ಔದ್ಯೋಗಿಕ ಕ್ಷೇತ್ರದಲ್ಲಿ ಕಾರ್ಮಿಕರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಿರಿ. ಸಾಂಸಾರಿಕ ಸಮಯ ಸರಿದದ್ದೇ ಗೊತ್ತಾಗದು. ನಿರೀಕ್ಷಿತ ಕಾರ್ಯಸಾಧನೆಯು ಉತ್ಸಾಹ ತರಲಿದೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಅನಾರೋಗ್ಯ, ಶತ್ರು ಬಾಧೆ, ಹಣದ ತೊಂದರೆ, ಗೃಹದಲ್ಲಿ ಹಾನಿ.

ಮಿಥುನರಾಶಿ
ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಬಂಧುಗಳಲ್ಲಿ ಮಂಗಲಕಾರ್ಯದಲ್ಲಿ ಭಾಗವಹಿಸಿ ಸಂತಸ ಪಡುವಂತಾಗಲಿದೆ. ಉತ್ತಮ ಗ್ರಹಗಳ ಕೂಡುವಿಕೆಯಿಂದ ಸಮಾಧಾನ ಹಾಗೂ ನಿರೀಕ್ಷಿತ ಕಾರ್ಯಸಾಧನೆ ಆಗಲಿದೆ. ಹಿತಶತ್ರುಗಳಿಂದ ಮೋಸ ಹೋದಿರಿ ಜೋಕೆ, ವಸ್ತ್ರ ಖರೀದಿ, ಅಧಿಕ ತಿರುಗಾಟ, ಕೃಷಿಯಲ್ಲಿ ಅಲ್ಪ ಲಾಭ.

ಕಟಕರಾಶಿ
ಆಕಸ್ಮಿಕ ಧನ ನಷ್ಟ, ತಿರುಗಾಟ, ಮನಸ್ತಾಪ, ಮಿತ್ರರಿಂದ ಸಹಾಯ, ಪ್ರತಿಯೊಂದು ವಿಚಾರವನ್ನು ಕೂಡಲೇ ಇತ್ಯರ್ಥ ಪಡಿಸಿಕೊಂಡರೆ ಉತ್ತಮ. ಸಾರ್ವಜನಿಕ ಕ್ಷೇತ್ರದಲ್ಲಿ ಸಾಕಷ್ಟು ಸಹಕಾರ ಸಿಗದೆ ಮನಸ್ಸಿಗೆ ಬೇಸರವಾದೀತು. ಸಾಂಸಾರಿಕ ಸಂಬಂಧಗಳು ದಾಯಾದಿಗಳಿಂದ ಸಮಸ್ಯೆಗೆ ದಾರಿ ಮಾಡೀತು.

ಸಿಂಹರಾಶಿ
ತೀರ್ಥಕ್ಷೇತ್ರ ದರ್ಶನ, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಕೊಟ್ಟ ಸಾಲ ಸರಾಗವಾಗಿ ಮರಳಿ ಬರಲಿದೆ. ಉತ್ತಮ ಶನಿಯ ಬಲದಿಂದ ಕೈಹಾಕಿದ ಕೆಲಸದಲ್ಲಿ ಹಿಂದೆ ತಿರುಗಿ ನೋಡಲಾರಿರಿ. ಮುಂದೆ ಹೆಜ್ಜೆ ಇಡಿರಿ. ಮಕ್ಕಳಿಂದ ಸಂತಸ, ಸಮಾಧಾನವು ಕೂಡಿ ಬಂದೀತು, ಪರಸ್ಥಳ ವಾಸ, ಬಂಧು ಮಿತ್ರರ ಸಮಾಗಮ.

ಕನ್ಯಾರಾಶಿ
ಸ್ಥಿರಾಸ್ತಿ ಮಾರಾಟ, ಕಾರ್ಯಸಾಧನೆಗಾಗಿ ತಿರುಗಾಟ, ಉತ್ತಮ ಗುರುಬಲದಿಂದ ಒಟ್ಟುಗೂಡಿಸಿಟ್ಟ ಹಣವು ಕರಗಿ ನೀರಾಗಲು ಪಂಚಮ ಶನಿಯು ಕಾರಣನಾದಾನು. ಆರೋಗ್ಯದಲ್ಲಿ ಜಾಗ್ರತೆ ಮಾಡಿರಿ. ವಾಹನಾಪಘಾತ ಯಾ ಮಾನಸಿಕ ಆಘಾತದಿಂದ ಬಳಲಿಕೆ ಕಂಡು ಬರಲಿದೆ. ಜಾಗ್ರತೆ ಇರಲಿ, ಮನಸ್ಸಿನಲ್ಲಿ ಗೊಂದಲ, ಅನ್ಯ ಜನರಲ್ಲಿ ವೈಮನಸ್ಸು.

ತುಲಾರಾಶಿ
ಕೆಲಸ ಕಾರ್ಯಗಳಲ್ಲಿ ವಿಘ್ನ, ಕ್ರೀಡಾ ವಿಭಾಗದಲ್ಲಿ ಉತ್ತಮ ಯಶಸ್ಸನ್ನು ಗಳಿಸಲಿದ್ದೀರಿ. ಕೋರ್ಟುಕಚೇರಿ ಕಾರ್ಯದಲ್ಲಿ ಯಶಸ್ಸಿನ ಮೆಟ್ಟಲು ಏರಲಿದ್ದೀರಿ. ಆರ್ಥಿಕ ರಂಗದಲ್ಲಿ ಸಮಾಧಾನ ವಿರುತ್ತದೆ. ಪತ್ನಿಯ ಸೂಕ್ತ ಸಲಹೆಗಳಿಗೆ ಸ್ಪಂದಿಸಿರಿ. ತಾಳ್ಮೆ ಸಹನೆ ಅಗತ್ಯ, ಜನರಲ್ಲಿ ಕಲಹ ಹಾಗೂ ನಿಷ್ಟುರ, ಮನಸ್ಸಿನಲ್ಲಿ ಗೊಂದಲ ಧನವ್ಯಯ.

ವೃಶ್ಚಿಕರಾಶಿ
ಕೆಲಸದಲ್ಲಿ ನಷ್ಟ, ಆರ್ಥಿಕ ಪರಿಸ್ಥಿತಿ ಏರುಪೇರು, ನಾನಾ ರೀತಿಯ ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಗಳಿಕೆ ಕೂಡಿ ಬಂದೀತು. ಸರಕಾರಿ ನೌಕರರಿಗೆ ಉತ್ತಮ ರೀತಿಯಲ್ಲಿ ಮುಂಭಡ್ತಿ ದೊರಕಲಿದೆ. ಉದ್ಯೋಗರಂಗದವರಿಗೆ ದೂರ ಸಂಚಾರವು ಒದಗಿ ಬಂದರೂ ಕಾರ್ಯಸಿದ್ದಿ, ಮೇಲಾಧಿಕಾರಿಗಳಿಂದ ತೊಂದರೆ.

ಧನಸ್ಸುರಾಶಿ
ಉದ್ಯೋಗದಲ್ಲಿ ಅಭಿವೃದ್ಧಿ, ಧರ್ಮ ಕಾರ್ಯಗಳಲ್ಲಿ ಆಸಕ್ತಿ, ವೈವಾಹಿಕ ಸಂಬಂಧಗಳ ಬಗ್ಗೆ ಹೆಚ್ಚಿನ ಪ್ರಯತ್ನ ಮಾಡಿದ್ದಲ್ಲಿ ಉತ್ತಮ ಸಂಬಂಧವು ಕೂಡಿ ಬರುವುದು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರವು ಕೂಡಿ ಬರಲಿದೆ. ಸಣ್ಣ ಮಟ್ಟಿನ ಕಿರು ಸಂಚಾರವು ಕೂಡಿ ಬಂದೀತು, ಕುಟುಂಬ ಸೌಖ್ಯ, ಶತ್ರು ಧ್ವಂಸ.

ಮಕರರಾಶಿ
ದೂರ ಪ್ರಯಾಣ, ಎಲ್ಲಾ ರೀತಿಯಲ್ಲೂ, ನೀವೆಣಿಸಿದಂತೆ ಒಂದೂ ನಡೆಯದೆ ಆತಂಕ ಪಡುವಾಗ ಅನಿರೀಕ್ಷಿತವಾಗಿ ನಿಮ್ಮ ಕೆಲಸಗಳೆಲ್ಲಾ ನಡೆದು ಹೋಗಲಿವೆ. ಅದರಿಂದ ತುಂಬಾ ಸಂತೋಷ ಪಡುವಂತಾಗಲಿದೆ. ಹಿರಿಯರು ತಪ್ಪು ತಿಳುವಳಿಕೆ ಪಡಲಿದ್ದಾರೆ, ವೃಥ ತಿರುಗಾಟ, ನೀಚ ಜನರ ಸಹವಾಸ, ಗೆಳೆಯರಿಂದ ತೊಂದರೆ.

ಕುಂಭರಾಶಿ
ಆರೋಗ್ಯದಲ್ಲಿ ಏರುಪೇರು, ವಿದ್ಯೆಯಲ್ಲಿ ಮುನ್ನಡೆ, ಆಗಾಗ ಅತಿಥಿಗಳ ಮಿಲನವು ಹರುಷದ ವಾತಾವರಣ ತರಲಿದೆ. ಆಗಾಗ ದೇವತಾದರ್ಶನ ಭಾಗ್ಯವು ಕೂಡಿ ಬರಲಿದೆ. ಬಾಡಿಗೆದಾರರು ನಿಮಗೆ ತುಂಬಾ ಸತಾಯಿಸಲಿದ್ದಾರೆ. ಜಾಗ್ರತೆ ವಹಿಸಿರಿ. ಉದ್ವೇಗ ಕಡಿಮೆ ಮಾಡಿರಿ, ಕಾರ್ಯ ಬದಲಾವಣೆ, ಮನೋವ್ಯಥೆ.

ಮೀನರಾಶಿ
ಆದಾಯಕ್ಕಿಂತ ಖರ್ಚು ಜಾಸ್ತಿ, ಸಲ್ಲದ ಅಪವಾದ, ನಾನಾ ರೀತಿಯ ತೊಂದರೆಗಳು, ವೈಮನಸ್ಸು, ಅಕಾಲ ಭೋಜನ, ಸರಕಾರಿ ತೆರಿಗೆಯನ್ನು ಕೂಡಲೇ ಕಟ್ಟಿಬಿಡಿರಿ. ಸರಕಾರಿ ನೌಕರರಿಗೆ ಉದ್ಯೋಗದಲ್ಲಿ ಅಭಿವೃದ್ಧಿ ಆಗಲಿದೆ. ಮಂಗಲಕಾರ್ಯ ಪ್ರಯುಕ್ತ ದೂರ ಪ್ರಯಾಣ ಕಂಡು ಬರಲಿದೆ. ಆರ್ಥಿಕ ರಂಗದಲ್ಲಿ ಅಭಿವೃದ್ಧಿಯು ಅನುಭವಕ್ಕೆ ಬರಲಿದೆ.

Leave A Reply

Your email address will not be published.