ಬಿಗ್‌ಬಾಸ್ ಖ್ಯಾತಿಯ ನಟ ಪ್ರಥಮ್ ಹೊಸ ಜೀವನಕ್ಕೆ ಕಾಲಿಡುವ ಸಲುವಾಗಿ ಎಂಗೆಜ್ (Actor Pratham engagement) ಆಗಿದ್ದಾರೆ. ತುಂಬಾ ಮಾತನಾಡುವ ನಟ ಪ್ರಥಮ್ ಬಹಳ ಸಿಂಪಲ್ ಆಗಿ ಎಂಗೇಜ್ ಆಗಿದ್ದಾರೆ. ಸದ್ಯ ನಟ ಪ್ರಥಮ್ ತಮ್ಮ ನಿಶ್ಚಿತಾರ್ಥದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಟ ಪ್ರಥಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ಒಂದು ಸುಂದರ ಕ್ಷಣ.ಇವತ್ತು ನನ್ನ ಎಂಗೇಜ್‌ಮೇಟ್ ಆಯ್ತು. ಯಾವ ಆಡಂಬರ,ಸಂಭ್ರಮ,ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ. ನಾನು ತುಂಬಾ ಸರಳವಾಗಿಯೇ ಬದುಕಿದವನು;ಹಾಗೇ ಇರೋಕೆ ಇಷ್ಟ; ನನ್ನ ಎಂಗೇಜ್‌ಮೇಟ್ ಈ ದೇಶದ ದೊಡ್ಡ ಸುದ್ಧಿಯಲ್ಲ.. ಆದರೆ ನನ್ನ ಇಷ್ಟಪಡುವ ಸ್ಬೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಗೆ ತಿಳಿಸಿದ್ದೇನೆ ಅಷ್ಟೇ…; ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ; ನನಗೆ ಹಾಗಿರೋಕೆ ಇಷ್ಟ;ಹೀಗೇ ಇದ್ದು ಬಿಡ್ತೀನಿ..ಹರಸುವವರು ಅಲ್ಲಿಂದಲೇ ಹರಸಿ…ಅದೇ ಆಶೀರ್ವಾದ..” ಎಂದು ಸುದೀರ್ಘವಾಗಿ ಬರೆದು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : Kazan Khan Died : ಸ್ಯಾಂಡಲ್‌ವುಡ್‌ನ ಖ್ಯಾತ ಖಳನಟ ಕಜನ್ ಖಾನ್ ಹೃದಯಾಘಾತದಿಂದ ನಿಧನ
ನಟ ಪ್ರಥಮ್ ಭಾವಿ ಪತ್ನಿಯೊಂದಿಗೆ ರಿಂಗ್ ಪೋಟೋ ಪೋಸ್ಟ್ ಮಾಡಿದ್ದಾರೆ. ಇನ್ನು ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅದರಲ್ಲಿ ಕೆಲವರು ನವ ದಂಪತಿಗಳಿಗೆ ಶುಭ ಹಾರೈಸಿದ್ದರೆ, ಇನ್ನು ಕೆಲವರು ಅಭಿಷೇಕ್ ಅಂಬರೀಶ್‌ಗೆ ಟಾಂಗ್ ಕೊಡಲು ಹೀಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಏನೇ ಆಗಲಿ ಹೊಸ ಜೀವನಕ್ಕೆ ಕಾಲಿಡಲು, ಮೊದಲ ಹೆಜ್ಜೆಗೆ ಎಲ್ಲರೂ ಶುಭ ಹಾರೈಸೋಣ.
Actor Pratham engagement: Pratham of Big Boss fame got engaged simply