Mother Killed Her Daughter : 9 ವರ್ಷದ ಮಗಳ ಕತ್ತು ಸೀಳಿ ಕೊಂದ ತಾಯಿ

ಉತ್ತರ ಪ್ರದೇಶ : (Mother Killed Her Daughter) ಮಹಿಳೆಯೊಬ್ಬಳು ತಾನು ಹೆತ್ತ ಮಗಳನ್ನು ಚಾಕುವಿನಿಂದ ಕತ್ತು ಸೀಳಿರುವ ಪ್ರಕರಣವೊಂದು ಬೆಳಕಿಗೆ ಬಂದಿರುತ್ತದೆ. ಇತ್ತೀಚೆಗೆ ಹೆತ್ತ ತಾಯಂದಿರೇ ಮಕ್ಕಳನ್ನು ಕೊಲೆ ಮಾಡುವ ಪ್ರಕರಣ ಹೆಚ್ಚಾಗುತ್ತಿದ್ದು, ಮನುಷ್ಯ ಜೀವಕ್ಕೆ ಬೆಲೆ ಇಲ್ಲದಂತೆ ಆಗುತ್ತಿದೆ.

ಇಂದು (ಜೂನ್ 13) ಸುಲ್ತಾನ್‌ಪುರದ ವಿವೇಕ್ ನಗರ ಪ್ರದೇಶದಲ್ಲಿ 35 ವರ್ಷದ ಮಹಿಳೆಯೊಬ್ಬರು ಚಾಕುವಿನಿಂದ ತನ್ನ ಒಂಬತ್ತು ವರ್ಷದ ಮಗಳ ಕತ್ತು ಸೀಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಂದಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಲಂಬುವಾ ಸರ್ಕಲ್ ಆಫೀಸರ್ (ಸಿಒ) ಮೊಹಮ್ಮದ್ ಸಲಾಂ ತಿಳಿಸಿದ್ದಾರೆ. ತಾಯಿಯಿಂದ ಬಲಿಯಾದ ಮಗು ಪರಿಧಿ ಎಂದು ಗುರುತಿಸಲಾಗಿದೆ.

ತಾಯಿ ಪ್ರಿಯಾಂಕಾ ಓಜಾ ಮಾನಸಿಕ ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು. ದಾಳಿಯ ನಂತರ ಪರಿಧಿಯನ್ನು ಲಂಬುವಾದಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಎಂದು ಸಲಾಮ್ ಹೇಳಿದರು.

ಇದನ್ನೂ ಓದಿ : Bangalore Crime News : ತಾಯಿಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ಶವ ತುಂಬಿ ಪೊಲೀಸರಿಗೆ ದೂರು ಕೊಟ್ಟ ಮಗಳು

ಗಾಯಗೊಂಡಿದ್ದ ಮಗು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದೆ ಎಂದು ಹೇಳಿದರು. ಮಹಿಳೆಯನ್ನು ವಶಕ್ಕೆ ಪಡೆಯಲಾಗಿದ್ದು, ಮೃತಳ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Mother Killed Her Daughter: A mother killed her 9-year-old daughter by slitting her throat

Comments are closed.