ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದು, ಸೂಪರ್‌ಹಿಟ್ ಆಗಿದೆ. ಕಾಂತಾರ ಸಿನಿಮಾ ಸಕ್ಷಸ್‌ನಿಂದಲೋ ಏನೋ ನಟ ರಿಷಬ್ ಶೆಟ್ಟಿ (Kantara 2 script) ಹಾಗೂ ಪತ್ನಿ ಪ್ರಗತಿ ಶೆಟ್ಟಿ ಆಗಾಗ್ಗ ದೈವ ಹಾಗೂ ದೇವಸ್ಥಾನಕ್ಕೆ ಭೇಟಿ ನಿಡುತ್ತಿದ್ದು, ಸದ್ಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
ಇತ್ತೀಚೆಗೆ ರಿಷಬ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಮಕ್ಕಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿದ್ದಾರೆ. ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಆಶ್ಲೇಷಾ ಬಲಿ, ತುಲಾಭಾರ ಸೇವೆ ನೀಡಿ, ದೇವರ ದರ್ಶನ ಪಡೆದಿದ್ದಾರೆ. ದೇವರ ಸನ್ನಿಧಿಯಲ್ಲಿ ಮೆಚ್ಚಿನ ನಟನನ್ನು ನೋಡಿದ ಅಭಿಮಾನಿಗಳು ಸೆಲ್ಫಿಗಾಗಿ ಮುಗಿ ಬಿದ್ದಿದ್ದಾರೆ.
ಕಾಂತಾರ ಸಿನಿಮಾದಿಂದ ರಿಷಬ್ ಶೆಟ್ಟಿ ಕೇವಲ ನಟನಾಗಿ ಮಾತ್ರವಲ್ಲದೇ, ಉತ್ತಮ ನಿರ್ದೇಶಕನಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಸದ್ಯ ಅವರು ಕಾಂತಾರ 2 ಸಿನಿಮಾ ಕಥೆ ಬರವಣೆಗೆಯಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ತಿಂಗಳ ಹಿಂದೆಷ್ಟೇ ಅವರು ಕಾಂತಾರ ಸಿನಿಮಾದ ಪ್ರೀಕ್ವೆಲ್‌ಗೆ ಸ್ಕ್ರಿಪ್ಟ್ ಬರೆಯಲು ಆರಂಭಿಸಿದ್ದರು. ಸದ್ಯ ಅಭಿಮಾನಿಗಳಿಗೆ ಸಿಹಿ ಸುದ್ಧಿ ಒಂದು ಸಿಕ್ಕಿದೆ. ವರದಿಗಳ ಪ್ರಕಾರ, ಕಾಂತಾರ 2 ಸಿನಿಮಾದ ಮೊದಲ ಭಾಗದ ಕಥೆಯನ್ನು ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಸಿನಿಮಾಕ್ಕೆ ರಿಷಬ್ ಶೆಟ್ಟಿ ನಿರ್ದೇಶನದ ಜೊತೆಯಲಿ ಮೂಖ್ಯಭೂಮಿಕೆಯಲ್ಲಿ ಕೂಡ ಅಭಿನಯಿಸಿದ್ದಾರೆ. ಇನ್ನು ನಾಯಕಿ ನಟಿಯಾಗಿ ಸಪ್ತಮಿ ಗೌಡ ಅಭಿನಯಿಸಿದ್ದಾರೆ. ಕಾಂತಾರ ಸಿನಿಮಾದ ಯಶಸ್ಸು ಕಂಡ ಬಳಿಕ ಅವರು ಎರಡನೇ ಪಾರ್ಟ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಕಾಂತಾರ 2 ಸಿನಿಮಾದ ಬಹುತೇಕ ಫೈನಲ್ ಆಗಿದೆ ಎಂದು ಮೂಲಗಳು ಹೇಳಿವೆ. ರಿಷಬ್ ಶೆಟ್ಟಿ ಹಾಗೂ ಸಿನಿತಂಡ ಕಾಂತಾರ 2 ಮೊದಲ ಭಾಗದ ಕಥೆ ಬಗ್ಗೆ ತೃಪ್ತಿ ಇದೆ ಎಂದಿದ್ದಾರೆ. ಕಥೆ ಬಗ್ಗೆ ಹೆಚ್ಚಿನ ಕಾಳಜಿವಹಿಸಿದ್ದು, ಬದಲಾವಣೆ ಅಗತ್ಯವಿದ್ದಾಗ ಎಲ್ಲರ ಒಪ್ಪಿಗೆ ಮೇಲೆ ಮತ್ತೆ ಸ್ಕ್ರಿಪ್ಟ್ ಸರಿಪಡಿಸಿ ಫೈನಲ್ ಮಾಡಲಾಗಿದೆ.
ಇದರ ಜೊತೆಗೆ ಸಿನಿಮಾ ಶೂಟಿಂಗ್ ಸ್ಥಳ ಹುಡುಕುವ ಕೆಲಸ ಕೂಡ ಆಗಲಿದೆ. ಮಳೆಗಾಲದಲ್ಲಿ ‘ಕಾಂತಾರ 2’ ಸಿನಿಮಾಕ್ಕೆ ಶೂಟಿಂಗ್ ಆರಂಭ ಆಗುವ ನಿರೀಕ್ಷೆ ಇದೆ. ‘ಕಾಂತಾರ’ ಕ್ಲೈಮ್ಯಾಕ್ಸ್ ನೋಡಿದ ಅನೇಕರಿಗೆ ಈ ಸಿನಿಮಾಕ್ಕೆ ಸೀಕ್ವೆಲ್ ಬರಲಿದೆ ಎನ್ನುವ ಊಹೆ ಇತ್ತು. ಬಳಿಕ ಇದನ್ನು ಸಿನಿತಂಡದವರೇ ಘೋಷಣೆ ಮಾಡಿದರು. ಈ ಮೊದಲು ಸ್ಕ್ರಿಪ್ಟ್ ಕೆಲಸ ಆರಂಭಿಸಿರುವದಾಗಿ ರಿಷಬ್ ಶೆಟ್ಟಿ ಹೇಳಿದ್ದರು. ಈಗ ಕೆಲವೇ ತಿಂಗಳಲ್ಲಿ ಅವರು ಮೊದಲ ಹಂತದ ಸ್ಕ್ರಿಪ್ಟ್ ಕೆಲಸ ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ : ಕೇರಳ ಸ್ಟೋರಿ ಸುಂದರಿಯ ಶಿವಭಕ್ತಿ : ಅದಾ ಶರ್ಮಾ ವಿಡಿಯೋ ವೈರಲ್
ಇದನ್ನೂ ಓದಿ : ಸದ್ದಿಲ್ಲದೇ ಓಟಿಟಿಗೆ ಲಗ್ಗೆ ಇಟ್ಟ ನಟಿ ಸಮಂತಾ ಅಭಿನಯದ ಶಾಕುಂತಲಂ
ಕಾಂತಾರ ಸಿನಿಮಾ ಸೀಕ್ವೆಲ್ ಸಿದ್ಧಗೊಳ್ಳೋದು ಸಾಮಾನ್ಯ. ಆದರೆ, ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾಕ್ಕೆ ಮಾಡುತ್ತಿರೋದು ಪ್ರೀಕ್ವೆಲ್. ಅಂದರೆ, ಈಗ ನೋಡಿದ ಕಥೆಯ ಹಿಂದೆ ಏನಾಗಿತ್ತು ಎಂಬುದು ತೆರೆಮೇಲೆ ಬರಲಿದೆ. ಈ ವಿಚಾರದಲ್ಲಿ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇದೆ. ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
Actor Rishabh Shetty went to God while preparing Kantara 2 script