Actor Siddharth: ಏರ್ ಪೋರ್ಟ್ ನಲ್ಲಿ ನಟ ಸಿದ್ದಾರ್ಥ್ ಹೆತ್ತವರು ಪಟ್ಟ ಪಾಡೇನು..?; ಹಿಂದಿ ಹೇರಿಕೆ ಬಗ್ಗೆ ಗುಡುಗಿದ ತಮಿಳು ನಟ

ಚೆನ್ನೈ: Actor Siddharth: ತನ್ನ ಪೋಷಕರಿಗೆ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಕಿರುಕುಳ ನೀಡಿದ್ದಾರೆ ಎಂದು ತಮಿಳು, ತೆಲುಗಿನ ಖ್ಯಾತ ನಟ ಸಿದ್ದಾರ್ಥ್ ಅವರು ಆರೋಪ ಮಾಡಿದ್ದಾರೆ. ಈ ಮೂಲಕ ಹಿಂದಿ ಹೇರಿಕೆ ಬಗ್ಗೆ ಮತ್ತೆ ಚರ್ಚೆಗಳು ಶುರುವಾಗಿವೆ. ತನ್ನ ತಂದೆ-ತಾಯಿ ಏರ್ ಪೋರ್ಟ್ ನಲ್ಲಿ ಅನುಭವಿಸಿದ ಕಿರುಕುಳದ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ನಟ ಪೋಸ್ಟ್ ಶೇರ್ ಮಾಡಿಕೊಂಡಿದ್ದು, ಹಿಂದಿ ಹೇರಿಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ವರ್ತನೆ ಬಗ್ಗೆ ನಟ ಸಿದ್ದಾರ್ಥ್ ಆರೋಪ ಮಾಡಿದ್ದಾರೆ. ವಯಸ್ಸಾದ ತನ್ನ ತಂದೆ-ತಾಯಿಗೆ ಕಿರುಕುಳ ನೀಡಲಾಗಿದೆ ಎಂದು ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ‘ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣದಲ್ಲಿ ನನ್ನ ತಂದೆ- ತಾಯಿಯನ್ನು ಸುಮಾರು 20 ನಿಮಿಷಗಳ ಕಾಲ ನಿಲ್ಲಿಸಿ ಸಿಆರ್ ಪಿಎಫ್ ಸಿಬ್ಬಂದಿ ಕಿರುಕುಳ ನೀಡಿದ್ದಾರೆ. ವಯಸ್ಸಾದ ನನ್ನ ತಂದೆ-ತಾಯಿ ಬ್ಯಾಗ್ ನಿಂದ ನಾಣ್ಯಗಳನ್ನು ಹೊರತೆಗೆಯಲು ಹೇಳಿ ಬಹಳ ಹೊತ್ತು ಹಿಂದಿಯಲ್ಲೇ ಮಾತನಾಡಿದ್ದಾರೆ. ಇಂಗ್ಲೀಷ್ ನಲ್ಲಿ ಮಾತನಾಡುವಂತೆ ಕೇಳಿಕೊಂಡರೂ ಹಿಂದಿಯಲ್ಲೇ ಮಾತನಾಡಿದ್ದಾರೆ. ಇದನ್ನು ವಿರೋಧಿಸಿದಕ್ಕೆ ಭಾರತದಲ್ಲಿ ಹೀಗೆಯೇ ಇರೋದು ಎಂದು ಹೇಳಿದ್ರು ಕೆಲಸವಿಲ್ಲದ ಜನ ಅಧಿಕಾರ, ದರ್ಪ ತೋರಿಸುತ್ತಿದ್ದಾರೆ’ ಎಂದು ಸಿದ್ದಾರ್ಥ್ ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Avatar The Way of Water : ಬಾಕ್ಸ್‌ ಆಫೀಸ್‌ನಲ್ಲಿ 8200 ಕೋಟಿ ರೂ.. ಬಾಚಿಕೊಂಡ ಅವತಾರ್ ದಿ ವೇ ಆಫ್ ವಾಟರ್

ಸಿದ್ದಾರ್ಥ್ ಅವರ ಈ ಪೋಸ್ಟ್ ಗೆ ನೆಟ್ಟಿಗರು ಖಾರವಾಗಿಯೇ ಉತ್ತರಿಸಿದ್ದಾರೆ. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯಾಗಿ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದರೆ ಇನ್ನೂ ಕೆಲವರು ಭದ್ರತಾ ಯೋಧರನ್ನು ಕೆಲಸವಿಲ್ಲದ ಜನ ಎಂದು ಹೀಯಾಳಿಸುವುದು ತಪ್ಪು ಎಂದು ನಟನ ವಿರುದ್ಧ ಕಿಡಿಕಾರಿದ್ದಾರೆ. ಸದ್ಯ ಸಿದ್ದಾರ್ಥ್ ಅವರ ಈ ಪೋಸ್ಟ್ ಹಿಂದಿ ಹೇರಿಕೆ ಕುರಿತಾದ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.

ಕಳೆದ 20 ವರ್ಷಗಳಿಂದ ತಮಿಳು, ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಸಿದ್ದಾರ್ಥ್ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಬಗ್ಗೆ ಟ್ವೀಟ್ ಮಾಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಅಲ್ಲದೇ ಇದೇ ವಿಚಾರಕ್ಕೆ ಅವರ ವಿರುದ್ಧ ಕೇಸ್ ಕೂಡಾ ದಾಖಲಾಗಿತ್ತು. ಬಳಿಕ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದರು. ನಟಿ ಅದಿತಿ ರಾವ್ ಹೈದರಿ ಜೊತೆ ಡೇಟಿಂಗ್ ವಿಚಾರದಲ್ಲೂ ಸುದ್ದಿಯಲ್ಲಿದ್ದ ಅವರು ಮುಂಬೈನ ಹೋಟೆಲ್ ಒಂದರಲ್ಲಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದರು. ತಮ್ಮ ರಾಜಕೀಯ ನಿಲುವುಗಳಿಂದಲೇ ನೆಟ್ಟಿಗರಿಂದ ಟೀಕೆಗೊಳಗಾಗುವ ನಟ ಸದ್ಯ ಕಮಲ್ ಹಾಸನ್ ನಟನೆಯ ಇಂಡಿಯನ್- 2 ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: Dash Song Release : ಹೊಸವರ್ಷಕ್ಕೆ ಚಂದನ್‌ ಶೆಟ್ಟಿ ಅಭಿನಯನದ ಸೂತ್ರಧಾರ ಸಿನಿಮಾದ ಡ್ಯಾಶ್‌ ಸಾಂಗ್‌ ರಿಲೀಸ್‌

Actor Siddharth: Actor Siddharth alleges Madurai airport security harassed his parents

Comments are closed.