promo shoot of Bigg Boss : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗೆ ಅಪಾರ ಅಭಿಮಾನಿ ಬಳಗವಿದೆ. ಸೆಲೆಬ್ರಿಟಿಗಳನ್ನು ಒಂದೇ ಮನೆಯಲ್ಲಿ ಕೂಡಿಟ್ಟು ಅವರಿಗೆ ವಿವಿಧ ಟಾಸ್ಕ್ಗಳನ್ನು ನೀಡುವ ಈ ಆಟ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಅಂದರೆ ತಪ್ಪಾಗಲಾರದು. ಬಿಗ್ ಬಾಸ್ ಸೀಸನ್ ಎಂಟರ ಬಳಿಕ ಮಿನಿ ಸೀಸನ್ ಆಯೋಜಿಸಿದ್ದ ಕಲರ್ಸ್ ಕನ್ನಡ ವಾಹಿನಿ ಇದಾದ ಬಳಿಕ ಬೇರೆ ಬೇರೆ ರಿಯಾಲಿಟಿ ಶೋಗಳನ್ನು ತಂದಿತ್ತೇ ವಿನಃ ಬಿಗ್ ಬಾಸ್ ಶೋ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.
ಆದರೆ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 9 ಬರ್ತಿರೋ ಬಗ್ಗೆ ಸ್ವತಃ ಕಿಚ್ಚ ಸುದೀಪ ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಹೊಸ ಬಿಗ್ ಬಾಸ್ ಕನ್ನಡ ಶೋಗಾಗಿ ಅತ್ಯದ್ಭುತ ಪ್ರೊಮೋ ಶೂಟ್ ಮಾಡಿದ್ದೇವೆ. ನಿಮ್ಮೆಲ್ಲರ ಪ್ರಯತ್ನಗಳಿಗಾಗಿ ನಾನು ಸಂಪೂರ್ಣ ತಂಡಕ್ಕೆ ಆಭಾರಿಯಾಗಿದ್ದೇನೆ. ಅಲ್ಲದೇ ಶೂಟ್ನಲ್ಲಿ ಭಾಗಿಯಾದ ನನ್ನೆಲ್ಲ ಪ್ರೀತಿಯ ಜನರಿಗೂ ನನ್ನ ಧನ್ಯವಾದಗಳು. ನೀವೆಲ್ಲರೂ ಶೀಘ್ರದಲ್ಲೇ ಬರುತ್ತಿರುವ ಪ್ರೋಮೋಗಾಗಿ ಕಾದು ನೋಡಿ. ಇದೊಂದು ಸೂಪರ್ ಅನೌನ್ಸ್ಮೆಂಟ್ ಎಂದು ಬರೆದುಕೊಂಡಿದ್ದಾರೆ.
Exciting promo shoot for the new #BigBossKannada.
— Kichcha Sudeepa (@KicchaSudeep) July 13, 2022
Thanks to the entire team for all ua efforts,, and also to all those lovely people who participated in the shoot.
You all,,look forward to the promo soon ,,, its a supaa announcement .
🥂🤜🏽🤜🏽@ColorsKannada
ನಿನ್ನೆಯಷ್ಟೇ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಬಿಗ್ ಬಾಸ್ ಮನೆಯ ಎದುರು ಫೋಟೋ ಕ್ಲಿಕ್ಕಿಸಿಕೊಂಡಿದ್ದ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಬಿಗ್ಬಾಸ್ ಶೀಘ್ರದಲ್ಲಿಯೇ ಬರ್ತಿದೆ ಎಂಬ ಸುಳಿವನ್ನು ನೀಡಿದ್ದರು. ಇಂದು ಮತ್ತೊಂದು ಸೋಶಿಯಲ್ ಮೀಡಿಯಾ ಪೋಸ್ಟ್ ಶೇರ್ ಮಾಡಿರುವ ಪರಮೇಶ್ವರ್ ಗುಂಡ್ಕಲ್ ಪ್ರೊಮೋಶೂಟ್ ಎಂದು ಶೀರ್ಷಿಕೆ ನೀಡಿದ್ದಾರೆ.

ಮೂಲಗಳ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್ 9 ಆಗಸ್ಟ್ ತಿಂಗಳಿನಿಂದಲೇ ಆರಂಭಗೊಳ್ಳಲಿದೆ ಎಂದು ಹೇಳಲಾಗ್ತಿದೆ. ಆದರೆ ಈ ಬಾರಿ ಮಿನಿ ಸೀಸನ್ ಮೊದಲು ಆಯೋಜನೆಗೊಳ್ಳಲಿದ್ದು ಇದು ವೂಟ್ನಲ್ಲಿ ಪ್ರಸಾರಗೊಳ್ಳಲಿದೆ. ಮಿನಿ ಸೀಸನ್ನಲ್ಲಿ ಕಿರುತೆರೆಯ ಕಲಾವಿದರು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆದ ಜನರು ಇರಲಿದ್ದಾರೆ. ಅಕ್ಟೋಬರ್ನಲ್ಲಿ ಈ ಸೀಸನ್ ಮುಗಿಯಲಿದ್ದು ಬಳಿಕ ಬಿಗ್ ಬಾಸ್ ಸೀಸನ್ 9 ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ.
Actor Sudeep participated in the promo shoot of Bigg Boss